HOME » NEWS » State » STUDENTS AGAIN ATTEND THE ONLINE EDUCATION HEADACHE FOR RURAL STUDENTS DKK MAK

ಮತ್ತೆ ಆನ್ ಲೈನ್ ಶಿಕ್ಷಣದತ್ತ ಮುಖ ಮಾಡಿದ ವಿದ್ಯಾರ್ಥಿಗಳು; ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಲೆ‌ನೋವು

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಕುಗ್ರಾಮಗಳೆ ಹೆಚ್ಚು. ಜತೆಗೆ ಅಲ್ಲಿ ಇಲ್ಲಿ ಕೆಲವೊಂದಿಷ್ಟು ಗ್ರಾಮದಲ್ಲಿ ನೆಟ್ವರ್ಕ್ ವ್ಯವಸ್ಥೆ ಇದೆ. ಆದ್ರೆ ಗುಡ್ಡಗಾಡು ಪ್ರದೇಶದ ಗ್ರಾಮೀಣ ಭಾಗದಲ್ಲಿ ಇದುವರೆಗೂ ನೆಟ್ವರ್ಕ್ ಇಲ್ಲ.

news18-kannada
Updated:April 7, 2021, 7:17 AM IST
ಮತ್ತೆ ಆನ್ ಲೈನ್ ಶಿಕ್ಷಣದತ್ತ ಮುಖ ಮಾಡಿದ ವಿದ್ಯಾರ್ಥಿಗಳು; ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಲೆ‌ನೋವು
ಸಾಂದರ್ಭಿಕ ಚಿತ್ರ
  • Share this:
ಕಾರವಾರ: ಲಾಕ್​ಡೌನ್​ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಬಾಗದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಶಿಕ್ಷಣ ವಂಚಿತರಾಗಿದ್ದಾರೆ ಇದಕ್ಕೆಲ್ಲ ಕಾರಣ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಮಸ್ಯೆ ಮತ್ತು ವಿವಿಧ ಮೊಬೈಲ್ ನೆಟ್ವರ್ಕ್ ಸಮಸ್ಯೆ. ಲಾಕ್​ಡೌನ್ ತೆರವಾದ ಬಳಿಕ ನಿಧಾನವಾಗಿ ಶಾಲೆ ಆರಂಭವಾದ ಮೇಲೆ ವಿದ್ಯಾರ್ಥಿಗಳು ಖುಷಿ ಖುಷಿಯಿಂದ ಶಾಲೆಗೆ ಬಂದು ಪಾಠ ಕಲಿಯುತ್ತಿದ್ರು. ಆದ್ರೆ ಈಗ ಕೊರೋನಾ ಎರಡನೆ ಅಲೆಯ ಹಿನ್ನಲೆಯಲ್ಲಿ ಮತ್ತೆ 6 ರಿಂದ 9 ನೇ ತರಗತಿ ಮತ್ತೆ ಮುಚ್ಚಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆನ್​ಲೈನ್ ಶಿಕ್ಷಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಯವರು ಮುಂದಾಗಿದ್ದಾರೆ ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಿಂದ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸಮಸ್ಯೆಯಿಂದ ಆನ್​ಲೈನ್ ಶಿಕ್ಷಣದಲ್ಲಿ ಬಾಗಿಯಾಗಲು ಸಾಧ್ಯವಾಗುತ್ತಿಲ್ಲ.

ಕೊರೋನಾ ಸುರಕ್ಷತಾ ಕ್ರಮ ಕೈಗೊಂಡು ಶಾಲೆ ಆರಂಭಿಸಿದ್ರೆ ಒಳ್ಳೇದು ಅಂತಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ವಿವಿಧ ತಾಲೂಕಿನ ಪಾಲಕರು. ಈಗಾಗಲೆ ವಿದ್ಯಾರ್ಥಿಗಳು ಕಲಿಕಾ ಆಸಕ್ತಿಯಿಂದ ದೂರವಾದ್ರೆ, ಮುಂದಿನ ಶಿಕ್ಷಣದಲ್ಲಿ ಬಹು ಕಷ್ಟ ವಾಗಬಹುದು ಎನ್ನೋದು ಪಾಲಕರು ಆತಂಕ. ಉತ್ತರ ಕನ್ನಡ ಜಿಲ್ಲೆ ಹೆಚ್ಚು ಹೆಚ್ಚು ಅರಣ್ಯ ಪ್ರದೇಶವನ್ನೆ ಹೊಂದಿದ್ದು ಇಲ್ಲಿನ ಬಹುತೇಕ ಗ್ರಾಮಗಳಲ್ಲಿ ಇನ್ನೂ ಕೂಡಾ ಮೊಬೈಲ್ ನೆಟ್ವರ್ಕ್ ಇಲ್ಲ  ಹೀಗಾಗಿ ಸಮಸ್ಯೆ ಆನ್​ಲೈನ್ ತರಗತಿ ಮತ್ತೆ ವಿದ್ಯಾರ್ಥಿಗಳಿಗೆ ಸಮಸ್ಯೆ ತಂದಿಟ್ಟಿದೆ.

ಹೀಗೆ ಆದ್ರೆ ಮುಂದೆ ಹೇಗೆ ಅಂತಾರೆ ಪಾಲಕರು:

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಕುಗ್ರಾಮಗಳೆ ಹೆಚ್ಚು. ಜತೆಗೆ ಅಲ್ಲಿ ಇಲ್ಲಿ ಕೆಲವೊಂದಿಷ್ಟು ಗ್ರಾಮದಲ್ಲಿ ನೆಟ್ವರ್ಕ್ ವ್ಯವಸ್ಥೆ ಇದೆ. ಆದ್ರೆ ಗುಡ್ಡಗಾಡು ಪ್ರದೇಶದ ಗ್ರಾಮೀಣ ಭಾಗದಲ್ಲಿ ಇದುವರೆಗೂ ನೆಟ್ವರ್ಕ್ ಇಲ್ಲ. ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಆಯಾ ಭಾಗದ ಖಾಸಗಿ ಶಾಲೆಯನ್ನ ನೆಚ್ಚಿಕೊಂಡಿದ್ರೆ, ಕೆಲವರು ಸರಕಾರಿ ಶಾಲೆಯನ್ನ ಅವಲಂಭಿಸಿದ್ದಾರೆ.ಈಗ ಕೋವಿಡ್ ಎರಡನೇ ಅಲೆಯ ಹಿನ್ನಲೆಯಲ್ಲಿ ಸರಕಾರ 6 ರಿಂದ 9ನೇ ತರಗತಿಯನ್ನ ಸ್ಥಗಿತಮಾಡಿದೆ ಇದ್ರಿಂದ ಮತ್ತೆ ವಿದ್ಯಾರ್ಥಿಗಳು ಆಪ್ ಲೈನ್ ಬಿಟ್ಟು ಆನ್ ಲೈನ್ ಮೊರೆ ಹೋಗಿದ್ದಾರೆ. ಪಟ್ಟಣ ಮತ್ತು ನಗರ ಭಾಗದಲ್ಲಿ ಇದ್ದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಹೇಗೋ ಹೊಂದಾಣಿಕೆ ಆಗೊತ್ತೆ ಆದ್ರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ಹರಸಾಹಸ ಪಟ್ಟು ಕಲಿಯಬೇಕಾಗುತ್ತದೆ.

ಇದನ್ನೂ ಓದಿ: CoronaVirus: ಬಾಲಿವುಡ್ ಸ್ಟಾರ್​ಗಳಿಗೆ ಕೊರೋನಾ ಸೋಂಕು, ಹಲವು ಚಿತ್ರಗಳ ಶೂಟಿಂಗ್ ಸ್ಥಗಿತ!

ಗ್ರಾಮೀಣ ಭಾಗದಲ್ಲಿ ಸರಿಯಾದ ಮೊಬೈಲ್ ನೆಟ್ವರ್ಕ್ ಇಂಟರ್ನೆಟ್ ಇಲ್ಲದೆ ವಿದ್ಯಾರ್ಥಿಗಳು ಪಾಠ ಆರಂಭವಾದಾಗ ಇಂಟರ್ ನೆಟ್ ಸಿಗೋ ಜಾಗ ಹುಡುಕುತ್ತಾ ಬರಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸರಿಯಾಗಿ ವಿದ್ಯಾರ್ಥಿಗಳಿಗೆ ಪಾಠ ಕೇಳಲಾಗುತ್ತಿಲ್ಲ. ಪಾಲಕರು ಕೂಡಾ ಒಮ್ಮೆ ಶಾಲೆ ಆರಂಭವಾದ್ರೆ ಉತ್ತಮ ಅಂತಾರೆ. ಕೊರೋನಾ ಎರಡನೇ ಅಲೆ ಆರಂಭವಾಗಿದೆ ಈ ಬಗ್ಗೆ ಸುರಕ್ಷತಾ ಕ್ರಮ ಕೈಗೊಂಡು ಶಾಲೆ ಆರಂಭಿಸಿದ್ರೆ ಉತ್ತಮ ಅಂತಾರೆ ಪಾಲಕರು.
ಈಗಾಗಲೆ ಮಕ್ಕಳು ಕಲಿಕಾ ಆಸಕ್ತಿಯಿಂದ ದೂರ ಸರಿಯುತ್ತಿದ್ದಾರೆ. ಈ ಹೊತ್ತಲ್ಲಿ ಮತ್ತೆ ಆನ್ ಲೈನ್ ತರಗತಿ ಆರಂಭವಾಯ್ತು ಎಂದ್ರೆ ಅವರಿಗೆ ಮಗತ್ತೆ ಕಲಿಕಾ ಆಸಕ್ತಿ ದೂರವಾಗಿ ಮುಂದಿನ ಶಿಕ್ಷಣಕ್ಕೆ ಸಮಸ್ಯೆ ಆಗಬಹುದು ಎಂಬ ಆತಮಖ ಪಾಲಕರದ್ದಾಗಿದೆ. ಒಟ್ಟಿನಲ್ಲಿ ಈಗ ಕೊರೋನಾ ಎರಡನೆ ಅಲೆಯ ಹಿನ್ನಲೆಯಲ್ಲಿ ೬ರಿಂದ೯ ನೇ ತರಗತಿ ಬಂದ್ ಮಾಡಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆ ಆಗಿದೆ.
Published by: MAshok Kumar
First published: April 7, 2021, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories