Ukraineನಲ್ಲಿ ಪರದಾಡುತ್ತಿದ್ದಾರೆ ರಾಜ್ಯದ ವಿದ್ಯಾರ್ಥಿಗಳು! "Please Help Me..." ಅಂದ್ರೆ ಕೇಳೋರಾರು?

ಉಕ್ರೇನ್‌ನಲ್ಲಿ ಯುದ್ಧ ಭೀತಿಯಲ್ಲೇ ಭಾರತೀಯರನ್ನು ಕರೆ ತರುವ ಕಾರ್ಯ ಮುಂದುವರೆದಿದೆ. ಆದರೆ ಅದೆಷ್ಟೋ ಜನ ವಿದ್ಯಾರ್ಥಿಗಳು ಇನ್ನೂ ಉಕ್ರೇನ್‌ನಲ್ಲೇ ಸಿಲುಕಿದ್ದಾರೆ. "ಹತ್ತಿರದಲ್ಲೇ ಬಾಂಬ್ ಸಿಡಿಯುತ್ತಿದೆ, ನಮ್ಮನ್ನು ಬೇಗ ಕರೆಸಿಕೊಳ್ಳಿ" ಅಂತ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಉಕ್ರೇನ್‌ನಲ್ಲಿ ಪರದಾಡುತ್ತಿರುವ ವಿದ್ಯಾರ್ಥಿಗಳು

ಉಕ್ರೇನ್‌ನಲ್ಲಿ ಪರದಾಡುತ್ತಿರುವ ವಿದ್ಯಾರ್ಥಿಗಳು

  • Share this:
ಉಕ್ರೇನ್‌ನಲ್ಲಿ (Ukraine) ರಷ್ಯಾ (Russia) ನಡೆಸುತ್ತಿರುವ ದಾಳಿ (Attack) ಮುಂದುವರೆದಿದೆ. ಆ ದಾಳಿ ಮಧ್ಯೆಯೇ ಭಾರತೀಯರನ್ನು (Indians) ಏರ್‌ಲಿಫ್ಟ್‌ (Air Lift) ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಕರೆತರುವ ‘ಆಪರೇಷನ್ ಗಂಗಾ’ (Operation Ganga) ಮುಂದುವರೆದಿದೆ. ಹಲವು ವಿದ್ಯಾರ್ಥಿಗಳು (Students) ಈಗಾಗಲೇ ಭಾರತಕ್ಕೆ ಬಂದಿದ್ದಾರೆ. ಈ ಪೈಕಿ ಕರ್ನಾಟಕದ (Karnataka) ವಿದ್ಯಾರ್ಥಿಗಳೂ ಸೇಫ್ (Safe) ಆಗಿ ತಮ್ಮ ಮನೆ ಸೇರಿದ್ದಾರೆ. ನಿನ್ನೆ ರಾತ್ರಿಯಷ್ಟೇ 13 ವಿದ್ಯಾರ್ಥಿಗಳು ಬೆಂಗಳೂರು (Bengeluru) ವಿಮಾನ ನಿಲ್ದಾಣಕ್ಕೆ (Airport) ಬಂದಿಳಿದಿದ್ದಾರೆ. ಇವೆಲ್ಲದರ ನಡುವೆಯೇ ರಾಜ್ಯದ ಇನ್ನೂ ಹಲವು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. “ದಯವಿಟ್ಟು ಬೇಗ ನಮ್ಮನ್ನು ಕರೆಸಿಕೊಳ್ಳಿ, ಇಲ್ಲಿ ಜೀವ ಕೈಯಲ್ಲಿ ಹಿಡಿದು ಕಾಯುತ್ತಿದ್ದೇವೆ” ಅಂತ ಕೇಂದ್ರ ಸರ್ಕಾರ (Central Government) ಹಾಗೂ ರಾಜ್ಯ ಸರ್ಕಾರಗಳಿಗೆ (State Government) ಮನವಿ ಮಾಡಿದ್ದಾರೆ.

ನಿನ್ನೆ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು

ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೆಹಲಿ ಹಾಗೂ ಮುಂಬೈಗೆ ಕರೆ ತರಲಾಗಿದೆ. ಈ ಪೈಕಿ 13 ವಿದ್ಯಾರ್ಥಿಗಳು ನಿನ್ನೆ ವಿಮಾನದ ಮೂಲಕ ಬೆಂಗಳೂರು ತಲುಪಿದ್ರು. ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಪೋಷಕರನ್ನು ನೋಡಿ ಕಣ್ಣೀರಿಟ್ಟರು.

ಮಕ್ಕಳು ಸೇಫ್ ಆಗಿ ವಾಪಸ್ ಬಂದ್ರಲ್ಲಾ ಅಂತ ಪೋಷಕರೂ ಸಹ ಆನಂದ ಭಾಷ್ಪ ಸುರಿಸಿದ್ರು. ದೆಹಲಿಯಿಂದ ಬಂದಿದ್ದ ವಿದ್ಯಾರ್ಥಿಗಳನ್ನು ಖುದ್ದು ನೋಡಲ್ ಅಧಿಕಾರಿ ಮನೋಜ್ ಕುಮಾರ್ ಅವರೇ ಸ್ವಾಗತಿಸಿದರು.

ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಸಚಿವ ಆರ್. ಅಶೋಕ್

ಮತ್ತೊಂದೆಡೆ ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಒಂದೇ ವಿಮಾನದಲ್ಲಿ ಬೆಂಗಳೂರು ಏರ್‌ ಪೋರ್ಟ್‌ಗೆ ಬಂದಿಳಿದರು, ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನ ಕಂದಾಯ ಸಚಿವ ಆರ್.ಅಶೋಕ್ ಸ್ವಾಗತಿಸಿದರು.

ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ, ಅವರ ಕ್ಷೇಮ ಸಮಾಚಾರ ವಿಚಾರಿಸಿದರು. ಬಳಿಕ ಏರ್‌ಪೋರ್ಟ್ ಲಾಂಜ್‌ನಲ್ಲೇ ವಿದ್ಯಾರ್ಥಿಗಳಿಗೆ ತಿಂಡಿ, ಕಾಫಿ, ಟೀ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: Russia-Ukraine War: ಯುದ್ಧ ಸಂಕಷ್ಟದಲ್ಲಿ ಆಶ್ರಯ ನೀಡಿದ್ದ ಕುಟುಂಬವನ್ನು ಬಿಟ್ಟು ಭಾರತಕ್ಕೆ ಬರಲಾರೆ ಎಂದ ದಿಟ್ಟ ಹುಡುಗಿ! ಯಾರವಳು?

ಇನ್ನೂ ಉಕ್ರೇನ್‌ನಲ್ಲೇ ಸಿಲುಕಿರುವ ಹಲವು ವಿದ್ಯಾರ್ಥಿಗಳು

ಮತ್ತೊಂದೆಡೆ ಕರ್ನಾಟಕದ ಇನ್ನೂ ಕೆಲವು ವಿದ್ಯಾರ್ಥಿಗಳು ಉಕ್ರೇನ್‌ನಲ್ಲೇ ಸಿಲುಕಿ, ಪರದಾಡುತ್ತಿದ್ದಾರೆ. ಕಾರ್ಕೀವ್ ನಗರದ ಹಾಸ್ಟೆಲ್ ಗಳಲ್ಲಿ ನೂರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಯುದ್ಧ ಭೀತಿಯ ನಡುವೆ ಅಂಗೈಯಲ್ಲಿ ಜೀವ ಹಿಡಿದು ವಿದ್ಯಾರ್ಥಿಗಳು ದಿನದೂಡುತ್ತಿದ್ದಾರೆ.

“ಹಾಸ್ಟೆಲ್ ಸಮೀಪವೇ ಬಾಂಬ್ ಸಿಡಿಯುತ್ತಿದೆ”

ಉಕ್ರೇನ್‌ನಲ್ಲೇ ಸಿಲುಕಿರುವ ವಿದ್ಯಾರ್ಥಿಗಳು ಬೇಗನೆ ನಮ್ಮನ್ನು ಇಲ್ಲಿಂದ ವಾಪಸ್ ಕರೆದುಕೊಂಡು ಹೋಗುವಂತೆ ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಸ್ಟೆಲ್ ಸಮೀಪವೇ ಬಾಂಬ್ ಬ್ಲಾಸ್ಟ್ ಆಗ್ತಿದೆ. ಆದಷ್ಟು ಬೇಗ ನಮ್ಮನ್ನ ರಕ್ಷಿಸಿ ಎಂದು ವಿದ್ಯಾರ್ಥಿನಿಯರು ವಿಡಿಯೋ ಸಂದೇಶ ಕಳಿಸಿದ್ದಾರೆ.

“ನಮಗೆ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ”

ರಕ್ಷಣಾ ಕಾರ್ಯಾಚರಣೆ ಬಗ್ಗೆ ನಮಗೆ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ ಅಂತ ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ. ಪಶ್ಚಿಮ ಭಾಗದಲ್ಲಿದ್ದ ವಿದ್ಯಾರ್ಥಿಗಳ ರಕ್ಷಣೆಯಾಗ್ತಿದೆ. ಅದ್ರೆ ಪೂರ್ವ ಭಾಗದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಇದ್ದಾರೆ. ಈವರೆಗೆ ಯಾರನ್ನು ರಕ್ಷಣೆ ಮಾಡಿಲ್ಲ. ಇಂಡಿಯನ್ ಎಂಬೆಸಿಯಿಂದ ಸರಿಯಾದ ಮಾಹಿತಿ ಸಿಗ್ತಾ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: Ukraine Crisis: ಉಕ್ರೇನ್​ನಲ್ಲಿ ಸಿಕ್ಕಿಹಾಕಿಕೊಂಡ ವಿದ್ಯಾರ್ಥಿಗಳಿಗೆ ಥಳಿತ..! ಆಗಿದ್ದೇನು?

“ಸರಿಯಾದ ಊಟ-ತಿಂಡಿಯೂ ಸಿಗುತ್ತಿಲ್ಲ”

ಹಾಸ್ಟೆಲ್ ಬೇಸ್ಮೆಂಟ್ ನಲ್ಲಿ ನೂರಾರು ವಿದ್ಯಾರ್ಥಿಗಳು ಅಡಗಿ ಜೀವ ಉಳಿಸಿಕೊಳ್ತಿದ್ದೇವೆ. ಹಾಸ್ಟೆಲ್ ನಲ್ಲಿ ಆಹಾರ ಪದಾರ್ಥಗಳೆಲ್ಲ ಪುಲ್ ಖಾಲಿಯಾಗಿದೆ. ಕುಡಿಯಲು ನೀರು ಸಹ ಸಿಗದಂತ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿಗಳ ಅಳಲು. ಆದಷ್ಟು ಬೇಗ ಎಂಬೆಸಿಯವರು ಪೂರ್ವ ಭಾಗದಲ್ಲಿ ಇರುವ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಬೇಕು ಅಂತ ಮನವಿ ಮಾಡಿದ್ದಾರೆ.
Published by:Annappa Achari
First published: