Dharwad: ಬಡತನದಲ್ಲಿ ಅರಳಿದ ಪ್ರತಿಭೆ; 9 ಚಿನ್ನದ ಪದಕ ಪಡೆದ ಸುಜಾತಾ ಜೋಡಳ್ಳಿ

ಸುಜಾತಾ ಜೋಡಳ್ಳಿ

ಸುಜಾತಾ ಜೋಡಳ್ಳಿ

ಕವಿವಿಯ 103 ವಿದ್ಯಾರ್ಥಿಗಳಿಗೆ (Students) ರಾಜ್ಯಪಾಲರಿಂದ ಚಿನ್ನದ ಪದಕ ವಿತರಣೆ ಮಾಡಲಾಯಿತು. ಈ ಎಲ್ಲ ವಿದ್ಯಾರ್ಥಿಗಳಲ್ಲಿ ಬಂಗಾರದ ವಿದ್ಯಾರ್ಥಿನಿಯಾಗಿ ಸುಜಾತಾ ಜೋಡಳ್ಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

  • Share this:

ಧಾರವಾಡ : ಸಾಧನೆ (Achievement) ಮಾಡಬೇಕೆಂಬ ಹಠವಿದ್ದರೆ ಅಂತವರಿಗೆ ಬಡತನವು (Poverty) ಅಡ್ಡವಾಗೋದಿಲ್ಲ ಅನ್ನೋದನ್ನ ಈ ಯುವತಿ ಸಾಬೀತುಪಡಿಸಿದ್ದಾಳೆ. ಪತ್ರಿಕೋದ್ಯಮ ವಿಭಾಗದಲ್ಲಿ (Journalism Department) ಅತಿ ಹೆಚ್ಚು ಅಂಕಗಳನ್ನ ಪಡೆಯುವ ಮೂಲಕ ಚಿನ್ನದ ಹುಡುಗಿ ಅನ್ನೋ ಬಿರುದು ಪಡೆದುಕೊಂಡಿದ್ದಾಳೆ. ಹೌದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ (Karnataka University Dharwad) 72 ನೇ ಘಟಿಕೋತ್ಸವ ನಡೆಯಿತು.‌ ಈ ಘಟಿಕೋತ್ಸವದಲ್ಲಿ ಸುಜಾತಾ (Sujata Jodalli) ಎಂಬ ವಿದ್ಯಾರ್ಥಿನಿ 9 ಚಿನ್ನದ ಪದಕ ಪಡೆದಿದ್ದಾಳೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Governor Thawar Chand Gehlot) ಅವರು ಚಾಲನೆ‌ ನೀಡಿದರು.


ಕವಿವಿಯು ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳು, ಕವಿವಿಯ ವಿಶ್ರಾಂತ ಕುಲಪತಿ ಶ್ರೀನಿವಾಸ ಸೈದಾಪುರ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮನೋಜ್ ಗೋರ್ಕೆಲಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಕವಿವಿಯ 103 ವಿದ್ಯಾರ್ಥಿಗಳಿಗೆ (Students) ರಾಜ್ಯಪಾಲರಿಂದ ಚಿನ್ನದ ಪದಕ ವಿತರಣೆ ಮಾಡಲಾಯಿತು. ಈ ಎಲ್ಲ ವಿದ್ಯಾರ್ಥಿಗಳಲ್ಲಿ ಬಂಗಾರದ ವಿದ್ಯಾರ್ಥಿನಿಯಾಗಿ ಸುಜಾತಾ ಜೋಡಳ್ಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.


9 ಚಿನ್ನದ ಪದಕ ಪಡೆದ ಸುಜಾತಾ


ಸುಜಾತಾ ಅವರು ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದವರು. ಈ ವಿದ್ಯಾರ್ಥಿನಿ ಖುದ್ದು ರಾಜ್ಯಪಾಲತೇ ಅಚ್ಚರಿಗೊಳಗಾಗುವಂತೆ ಮಾಡಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ‌ಪ ಪಡೆಯುವ ಮೂಲಕ 9 ಚಿನ್ನದ ಪದಕವನ್ನ ಗಿಟ್ಟಿಸಿಕೊಳ್ಳುವುದರ ಮೂಲಕ 2022 ರ ವಿಶ್ವ ವಿದ್ಯಾಲಯದ ಬಂಗಾರದ ವಿದ್ಯಾರ್ಥಿನಿ ಆಗಿದ್ದಾರೆ.


ಇದನ್ನೂ ಓದಿ:  Hijab Row: ಹಿಜಾಬ್ ಗಲಾಟೆಯಾದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಳ


Student Receiving 6 Gold Medals At Karnataka University dharwad myd mrq
ಪೋಷಕರೊಂದಿಗೆ ಸುಜಾತಾ


ಬಡತನದಲ್ಲಿ ಅರಳಿದ ಪ್ರತಿಭೆ


ಸೂಳಿಕಟ್ಟ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ್ ಜೋಡಳ್ಳಿ ಮತ್ತು ಮಹಾದೇವಿ ಅವರ ಮಗಳಾದ ಸುಜಾತ ಜೋಡಳ್ಳಿ ಅವರು ಎಂ.ಎ ಪತ್ರಿಕೋದ್ಯಮ ಪದವಿ ಮಾಡಿದ್ದಾಳೆ. ಮನೆಯಲ್ಲಿ ಬಡತನ ಇದ್ದರೂ ಅದ್ಯಾವುದು ಸಾಧನೆಗೆ ಅಡ್ಡಿಯಾಗದು ಅನ್ನೋ ದೃಢ ನಿರ್ಧಾರದ ಮೂಲಕ 9 ಚಿನ್ನದ ಪದಕವನ್ನ ಪಡೆದು ಸಾಧನೆ ಮಾಡಿದ್ದಾಳೆ.


ಮಗಳ ಸಾಧನೆ ಬಗ್ಗೆ ಪೋಷಕರ ಸಂತಸ


ಕಡು ಬಡತನದಲ್ಲಿ ಜನಿಸಿದ ನಮ್ಮ ಮಗಳು ಸುಜಾತಾ ಹಗಲಿರುಳು ಕಷ್ಟಪಟ್ಟು ವಿದ್ಯಾಬ್ಯಾಸ ಮಾಡಿದ ಫಲವೇ ಇಂದು ಬಂಗಾರದ ಪದಕ ದೊರಕಿದವೆ. ನಮಗೆ ನಾಲ್ಕು ಜನ ಮಕ್ಕಳು, ಮೂವರು ಹೆಣ್ಣು ಮಕ್ಕಳು, ‌ಒಬ್ಬ ಗಂಡು ಮಗನಿದ್ದಾನೆ. ಎಲ್ಲರನ್ನು ಕಲಿಸಿದ್ದೇವೆ, ಆದರೆ ಸುಜಾತಾಳ ಸಾಧನೆ ಕಂಡು ನಮಗೆ ಸಂತೋಷವಾಗುತ್ತಿದೆ ಎನ್ನುತ್ತಾರೆ ಸುಜಾತಾಳ ತಂದೆ‌ ನಾಗೇಶ್.


ಪೋಷಕರಿಗೆ ಚಿನ್ನದ ಪದಕ ಅರ್ಪಿಸಿದ ವಿದ್ಯಾರ್ಥಿನಿ


ನಮ್ಮ‌ ತಂದೆ ‌ಅವರು ಗ್ರಾಪಂ ಡಿ ದರ್ಜೆಯ ನೌಕರರಾಗಿದ್ದು, ನಮಗೆ ವಿದ್ಯಾಭ್ಯಾಸ ನೀಡಿದ್ದಾರೆ.  ನನ್ನ ಕಲಿಕೆಗೆ ನಮ್ಮ ಪಾಲಕರು ಪ್ರೋತ್ಸಾಹ‌ ನೀಡುತ್ತಾ ಬಂದಿದ್ದಾರೆ. ಆದ್ರೆ ಪತ್ರಿಕೋದ್ಯಮ ಮಾಡುವ ಮೊದಲು ಮದುವೆ ಮಾಡಲು‌ ಮನೆಯಲ್ಲಿ ನಿಶ್ಚಯ ಮಾಡಿದ್ದರು. ಆದ್ರೆ ನಾನು ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಬೇಕೆಂದು ಹಠ ಮಾಡಿದ್ದಕ್ಕೆ ಬೆಂಬಲವಾಗಿ ಮನೆಯಲ್ಲಿ ಸಹಕಾರ ಸಿಕ್ಕಿತ್ತು. ಅವರಿಗೆ ಈ ಬಂಗಾರದ ಪದಕ ಅರ್ಪಿಸುತ್ತೆನೆ ಎನ್ನುತ್ತಾರೆ ಸುಜಾತಾ ಜೋಡಳ್ಳಿ.


Student Receiving 6 Gold Medals At Karnataka University dharwad myd mrq
ಪೋಷಕರೊಂದಿಗೆ ಸುಜಾತಾ


ಇದನ್ನೂ ಓದಿ:  HDD ಕರೆ ಬೆನ್ನಲ್ಲೇ ಧರ್ಮ ಸಂಕಟದಲ್ಲಿ ಜೆಡಿಎಸ್ ಶಾಸಕರು; ಇತ್ತ ಕಾಂಗ್ರೆಸ್, ಬಿಜೆಪಿಗೆ ಶುರುವಾಯ್ತು ತಲೆನೋವು


ಒಟ್ಟಾರೆಯಾಗಿ ಬಡತನದಲ್ಲೇ ಕಲಿತು ದಾಖಲೆ ಮಾಡಿದ ವಿದ್ಯಾರ್ಥಿನಿಗೆ ಸ್ನೇಹಿತರು, ಗುರುಗಳು ಶುಭಾಶಯ ಹೇಳಿ ಖುಷಿ ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲೇ ಮತ್ತೊಂದು ಸಾಧನೆ ಮಾಡುವ ಉತ್ಸಾಹ ಹೊಂದಿದ್ದು ಇವರ ಮುಂದಿನ ಜೀವನ ಸಾಧನೆಯಾಗಿರಲಿ ಅನ್ನೋದೇ ನಮ್ಮ ಆಶಯ.

Published by:Mahmadrafik K
First published: