Student Missing Case: ಖಾಕಿ ಕೈಗೆ ಸಿಕ್ಕಿದ್ರು ನಾಪತ್ತೆಯಾದ ಇಬ್ಬರು ವಿದ್ಯಾರ್ಥಿನಿಯರು; ಮತ್ತಿಬ್ಬರು ಗೋವಾಗೆ ಹೋಗಿರೋ ಶಂಕೆ

ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಂದಿನಿ ಹಾಗೂ ಭಾಗ್ಯಶ್ರಿ  ಪತ್ತೆಯಾದ ವಿದ್ಯಾರ್ಥಿನಿಯರಾಗಿದ್ದಾರೆ. ಇನ್ನಿಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಸಂಜೆಯೊಳಗೆ ಪತ್ತೆ ಹಚ್ಚುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು (Raichur) ನಗರದ  ಸರ್ಕಾರಿ ಪಿಯು ಕಾಲೇಜಿನ (PU College) ನಾಲ್ವರು ವಿದ್ಯಾರ್ಥಿನಿಯರು (Students) ಕಾಣೆಯಾಗಿದ್ದರು. ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಂದಿನಿ ಹಾಗೂ ಭಾಗ್ಯಶ್ರಿ  ಪತ್ತೆಯಾದ ವಿದ್ಯಾರ್ಥಿನಿಯರಾಗಿದ್ದಾರೆ. ಇನ್ನಿಬ್ಬರ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದು, ಸಂಜೆಯೊಳಗೆ ಪತ್ತೆ ಹಚ್ಚುವ ಸಾಧ್ಯತೆ ಇದೆ. ವಿದ್ಯಾರ್ಥಿನಿಯರು ಒಟ್ಟಾಗಿ ಗೋವಾಗೆ (Goa) ತೆರಳಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರು ಮಾತ್ರ ಹೋಗಿದ್ದರಾ ಅಥವಾ ಯಾರಾದ್ರೂ ಇವರನ್ನ ಕರೆದೊಯ್ದಿದ್ದರಾ ಎಂಬ ಬಗ್ಗೆ ತನಿಖೆ (Investigation) ನಡೆಯಬೇಕಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

 ಮಕ್ಕಳು ಕಾಣದೆ ಪೋಷಕರು ಕಂಗಾಲು

ಶನಿವಾರ ಕಾಲೇಜಿಗೆ ತೆರಳೋದಾಗಿ ಹೇಳಿ ಹೊರಟ ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗಿಲ್ಲ. ಎರಡು ದಿನಗಳಿಂದ ಪೋಷಕರು ಮಕ್ಕಳನ್ನು ಹುಡುಕುತ್ತಿದ್ದಾರೆ. ಈ ಸಂಬಂಧ ವಿದ್ಯಾರ್ಥಿನಿಯರ ಪೋಷಕರು ರಾಯಚೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮತ್ತಿಬ್ಬರು ವಿದ್ಯಾರ್ಥಿನಿಯರ ಪತ್ತೆಗೆ ಹುಡುಕಾಟ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಇಂದು ಕಾಲೇಜಿಗೆ DySP ವೆಂಕಟೇಶ್, ಪೊಲೀಸ್ ಇನ್​ಸ್ಪೆಕ್ಟರ್ ಗುಂಡೂರಾವ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ಪ್ರಾಂಶುಪಾಲರನ್ನು ಭೇಟಿಯಾಗಿರುವ ಪೊಲೀಸರು ವಿದ್ಯಾರ್ಥಿಗಳ ಹಾಜರಾತಿ ಮತ್ತು ದಾಖಲಾತಿ ಕುರಿತು ದಾಖಲೆಗಳನ್ನು ಪಡೆದುಕೊಂಡಿದ್ದು, ಮತ್ತಿಬ್ಬರು ವಿದ್ಯಾರ್ಥಿನಿಯರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ಕಾಲೇಜಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ

ಶನಿವಾರ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ ಎಂದು ಪ್ರಾಂಶುಪಾಲರಾದ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣ ಬೆನ್ನಲ್ಲೇ ಕಾಲೇಜಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪ್ರಾಂಶುಪಾಲರು ಮುಂದಾಗಿದ್ದಾರೆ.

ಇದನ್ನೂ ಓದಿ: CET Result: ಜುಲೈ 30ರಂದು ಸಿಇಟಿ ಫಲಿತಾಂಶ ಪ್ರಕಟ- ಅಶ್ವತ್ಥ ನಾರಾಯಣ

ಆಲಮಟ್ಟಿ ಜಲಾಶಯಕ್ಕೆ ನುಗ್ಗಲೆತ್ನಿಸಿದ ಬುರ್ಖಾಧಾರಿ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ನಿಷೇಧಿತ ಆಲಮಟ್ಟಿ ಜಲಾಶಯಕ್ಕೆ ನುಗ್ಗಲು ಯತ್ನಿಸಿದ ತೃತೀಯ ಲಿಂಗಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಲಮಟ್ಟಿ ಜಲಾಶಯ ಸುತ್ತಮುತ್ತ ಬುರ್ಖಾಧಾರಿ ಸಂಶಯಾಸ್ಪದವಾಗಿ ಓಡಾಟ ನಡೆಸಿದ್ದನು. ಮೊದಲು ಬುರ್ಖಾದೊಳಗೆ ಇರೋದು ಮಹಿಳೆ ಅಲ್ಲ ಎಂಬುದನ್ನು ಪತ್ತೆ ಮಾಡಿದ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿದ್ಯುತ್ ತಂತಿಗೆ ಸಿಲುಕಿ ಎರಡು ಕಾಡಾನೆ ಸಾವು

ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಗ್ರಾಮದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಎರಡು ಕಾಡಾನೆ ಸಾವನ್ನಪ್ಪಿವೆ. ನೆಲ್ಯಹುದಿಕೇರಿ ಗ್ರಾಮದ ಪ್ರಕಾಶ್ ಹಾಗೂ ಸುಮನ್ ಚಂಗಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಇಂದು ಬೆಳಗಿನ ಜಾವ ಘಟನೆ ನಡೆದಿದೆ. 11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿತ್ತು. ಆದ್ದರಿಂದ ವಿದ್ಯುತ್ ಲೈನ್  ಕೆಳಗೆ ಜೋತಾಡುತ್ತಿದ್ದವು. ತೋಟದಲ್ಲಿ ಕಾಡಾನೆಗಳು ಹಾದು ಹೋಗುವಾಗ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಒಂದು ಗಂಡು ಮತ್ತೊಂದು ಹೆಣ್ಣಾನೆ ಸಾವನ್ನಪ್ಪಿವೆ. ಸ್ಥಳಕ್ಕೆ ಅರಣ್ಯ‌ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Suicide: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ

ಪ್ರೀತಿಸಿದ ಯುವತಿ (Girl) ಕೈಕೊಟ್ಟಳು, ಮೋಸ ಮಾಡಿದಳು ಅಂತ ನೊಂದು ಯುವಕನೋರ್ವ (Boy) ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿವಾಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Madiwala Station Limit) ನಡೆದಿದೆ. ಮಣಿಕಂಠ ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ.

ಇದನ್ನೂ ಓದಿ: MonkeyPox: ದೇಶದಲ್ಲಿ ಮಂಕಿಪಾಕ್ಸ್ ಕೇಸ್​ಗಳು ಪತ್ತೆ; ರೋಗ ತಡೆಗೆ ಕರ್ನಾಟಕದಲ್ಲಿ ಕಟ್ಟೆಚ್ಚರ- ಸುಧಾಕರ್

ಈತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾ ಇದ್ದು, ಇತ್ತೀಚಿಗೆ ಆಕೆ ಈತನನ್ನು ತೊರೆದು ಹೋಗಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ನೊಂದಿದ್ದ ಮಣಿಕಂಠ ತನ್ನ ರೂಮ್‌ನಲ್ಲೇ ನೇಣಿಗೆ (Hanging) ಶರಣಾಗಿದ್ದಾನೆ. ಸಾಯುವ ಮುನ್ನ ಆಡಿಯೋ (Audio) ಮಾಡಿದ್ದು, ಅದರಲ್ಲಿ ತನ್ನ ದುಃಖವನ್ನು ತೋಡಿಕೊಂಡಿದ್ದಾನೆ.
Published by:Pavana HS
First published: