ನಗ್ನ ವಿಡಿಯೋ ಕಳುಹಿಸಿದ ಕಾಮುಕ ಶಿಕ್ಷಕನ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿ

ನಮ್ಮ ದೇಶದಲ್ಲಿ ಪಾಠ ಹೇಳಿಕೊಟ್ಟ ಶಿಕ್ಷಕರನ್ನು ದೇವರ ಸ್ಥಾನದಲ್ಲಿಟ್ಟು ನೋಡುವ ಸಂಪ್ರದಾಯವಿದೆ. ಆದರೆ, ಇಲ್ಲೊಬ್ಬ ಶಿಕ್ಷಕ ತನ್ನ ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡುವುದರಲ್ಲೇ ವಿಕೃತವಾದ ಸಂತೋಷವನ್ನು ಕಾಣುತ್ತಾನೆ.

sushma chakre | news18
Updated:January 10, 2019, 1:52 PM IST
ನಗ್ನ ವಿಡಿಯೋ ಕಳುಹಿಸಿದ ಕಾಮುಕ ಶಿಕ್ಷಕನ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿ
ಸಾಂದರ್ಭಿಕ ಚಿತ್ರ
sushma chakre | news18
Updated: January 10, 2019, 1:52 PM IST
ಬೆಂಗಳೂರು (ಜ. 10): ಸಾಮಾನ್ಯವಾಗಿ ಮಕ್ಕಳಿಗೆ ಗಣಿತ ವಿಷಯವೆಂದರೆ ಕಷ್ಟ. ಆದರೆ, ತುಮಕೂರಿನ ಸರ್ಕಾರಿ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿಯೊಬ್ಬಳಿಗೆ ಗಣಿತ ವಿಷಯ ಮಾತ್ರವಲ್ಲ ಗಣಿತ ಶಿಕ್ಷಕನ ಬಗ್ಗೆಯೂ ತಿರಸ್ಕಾರ. ಯಾಕೆ ಅಂತೀರಾ? ಆಕೆ ಓದಿದ ಶಾಲೆಯ ಗಣಿತ ಶಿಕ್ಷಕ ನಗ್ನ ವಿಡಿಯೋಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ.

ಅರ್ಧಕ್ಕೇ ವಿದ್ಯಾಭ್ಯಾಸವನ್ನು ಕೈಬಿಟ್ಟ 19 ವರ್ಷದ ಮಹಿಳೆಗೆ ಮದುವೆಯೂ ಆಗಿತ್ತು. ಆದರೆ, ಆಕೆಯ ಹಳೆಯ ಶಿಕ್ಷಕ ನಗ್ನ ವಿಡಿಯೋಗಳನ್ನು ಕಳುಹಿಸುತ್ತಿದ್ದ. ಅಲ್ಲದೆ, ನಗ್ನನಾಗಿ ಆಕೆಗೆ ವಿಡಿಯೋ ಕಾಲ್​ ಮಾಡಿ ಅಸಹ್ಯ ಹುಟ್ಟುವಂತೆ ಮಾಡಿದ್ದ.

ಇದನ್ನೂ ಓದಿ: ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

ತುಮಕೂರಿನ ಸರ್ಕಾರಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿರುವ ಬಿ.ಎಚ್​. ಚನ್ನೇಗೌಡ ಎಂಬ ಶಿಕ್ಷಕನ ವಿರುದ್ಧ ಆತನ ಹಳೆಯ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯಕ್ಕೆ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಶೋಧನೆಯಲ್ಲಿದ್ದಾರೆ.

ತುಮಕೂರು ಮೂಲದ ಆ ಯುವತಿ ಮದುವೆಯಾದ ಬಳಿಕ ಬೆಂಗಳೂರಿನ ಪೀಣ್ಯದಲ್ಲಿ ವಾಸವಾಗಿದ್ದಳು. 9ನೇ ತರಗತಿವರೆಗೆ ಮಾತ್ರ ಓದಿದ್ದ ಆಕೆಗೆ ಆಗ ಇದೇ ಚನ್ನೇಗೌಡ ಗಣಿತ ಶಿಕ್ಷಕನಾಗಿದ್ದ. ನಂತರ ಮನೆಯಲ್ಲೇ ಇದ್ದ ಆಕೆಗೆ 2 ವರ್ಷದ ಹಿಂದೆ ಮದುವೆಯಾಗಿತ್ತು. ಬೆಂಗಳೂರಿಗೆ ಬಂದ ನಂತರ ಆಕೆ ಮೊಬೈಲ್​ ತೆಗೆದುಕೊಂಡು ಫೇಸ್​ಬುಕ್​, ವಾಟ್ಸಾಪ್​ ಬಳಸಲಾರಂಭಿಸಿದ್ದಳು. ಆಕೆಯ ನಂಬರನ್ನು ಹೇಗೋ ಪಡೆದುಕೊಂಡಿದ್ದ ಆ ಶಿಕ್ಷಕ ಮೊದ ಮೊದಲು ಚೆನ್ನಾಗಿಯೇ ಮೆಸೇಜ್​ ಮಾಡಿಕೊಂಡಿರುತ್ತಿದ್ದ. ಆಕೆಯ ಫೇಸ್​ಬುಕ್​ ಫೋಟೋಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದ.

ಇದನ್ನೂ ಓದಿ: ವಿಬ್​ ಗಯಾರ್ ಅತ್ಯಾಚಾರ ಪ್ರಕರಣ; 5 ವರ್ಷವಾದರೂ ವಿಚಾರಣೆಯೇ ಶುರುವಾಗಿಲ್ಲ!

ಫೇಸ್​ಬುಕ್​ ಮೆಸೆಂಜರ್​ನಲ್ಲಿ ಆಕೆಗೆ ಮೆಸೇಜ್​ ಕಳುಹಿಸಿದ ಆ ಶಿಕ್ಷಕ ತನ್ನ ನಗ್ನ ಫೋಟೋವನ್ನು ಕಳುಹಿಸಿದ್ದ. ಅದಕ್ಕೆ ಆಕೆ ಉತ್ತರ ನೀಡದಿದ್ದಾಗ ಆಕೆಯ ವಾಟ್ಸಾಪ್​ ನಂಬರ್​ಗೆ ವಿಡಿಯೋ ಕಾಲ್​ ಮಾಡತೊಡಗಿದ್ದ. ಇದರಿಂದ ಕಿರಿಕಿರಿಗೊಂಡ ಆಕೆ ಒಮ್ಮೆ ರಿಸೀವ್​ ಮಾಡಿದಾಗ ಆತ ನಗ್ನನಾಗಿ ಕುಳಿತುಕೊಂಡು ವಿಡಿಯೋ ಕಾಲ್​ ಮಾಡುತ್ತಿದ್ದುದು ಗೊತ್ತಾಯಿತು. ಇದರಿಂದ ಮಾನಸಿಕವಾಗಿ ಡಿಸ್ಟರ್ಬ್​ ಆಗಿದ್ದ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.
Loading...

ಸದ್ಯಕ್ಕೆ ಆರೋಪಿಯ ಮೊಬೈಲ್​ ನಂಬರ್​ ಆಧರಿಸಿ ಆತನನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ, ಆತನ ಸುಳಿವು ಇನ್ನೂ ಸಿಕ್ಕಿಲ್ಲ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ