SSLC Exam ಬರೆಯುತ್ತಿದ್ದಾಗಲೇ ವಿದ್ಯಾರ್ಥಿನಿ ಸಾವು; ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಮೇಲೆ ಜೇನುದಾಳಿ

ಎಸ್​ಎಸ್​​ಎಲ್​ಸಿ ಪರೀಕ್ಷೆ ವೇಳೆ ಅಕ್ರಮ ನಡೆಸಲು ಮುಂದಾಗಿದ್ದ ಆರು ಜನರನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವವಾದ ಘಟ್ಟದಲ್ಲಿ ಒಂದಾದ ಎಸ್​ಎಸ್​ಎಲ್​ಸಿ ಪರೀಕ್ಷೆ (SSLC Exam) ಇಂದಿನಿಂದ ರಾಜ್ಯದಲ್ಲಿ ಆರಂಭವಾಗಿದೆ. ಎಲ್ಲೆಡೆ ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆ ನಡೆಸಿದ್ದು, ಶಿಕ್ಷಣ ಇಲಾಖೆ ಕೂಡ ಯಶಸ್ವಿಯಾಗಿ ಕೋವಿಡ್​ ನಿಯಮಾವಳಿಗಳೊಂದಿಗೆ ಪರೀಕ್ಷೆ ನಡೆಸುತ್ತಿದೆ. ಮೊದಲ ದಿನ ಪರೀಕ್ಷೆ ನಡುವೆ ಮೈಸೂರಿನ ಟಿ ನರಸೀಪುರದಲ್ಲೊಂದು (Mysore District T Narasipura) ಭೀಕರ ಘಟನೆ ನಡೆದಿದೆ. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬಳು ಹೃದಯಘಾತದಿಂದ (Heart Attack) ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆಇದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಮುಂದಾಗಿದ್ದಳು. ಈ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾಳೆ, ತಕ್ಷಣಕ್ಕೆ ಆಕೆಗೆ ಚಿಕಿತ್ಸೆ ನೀಡಲಾಯಿತಾದರೂ ಅದು ಫಲ ನೀಡದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

  ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ಟಿ ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ಅನುಶ್ರಿ ಎಂದು ಗುರುತಿಸಲಾಗಿದೆ. ಈಕೆ ಮಾದಾಪುರ ಪ್ರೌಢಶಾಲೆಯಲ್ಲಿ ವ್ಯಾಸಂಗಾ ಮಾಡುತ್ತಿದ್ದಳು. ಇಂದು ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಆಗಮಿಸಿದ್ದಳು.

  ವಿದ್ಯಾರ್ಥಿನಿ ಆರೋಗ್ಯವಾಗಿದ್ದು, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಪರೀಕ್ಷೆ ಬರೆಯಲು ಆರಂಭಿಸಿದ್ದಳು. ಪರೀಕ್ಷೆ ಬರೆಯುವ ವೇಳೆ ಆಕೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಸಿಬ್ಬಂದಿಗಳು ಆಕೆಯನ್ನು ಟಿ ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.

  ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಮೇಲೆ ಜೇನು ದಾಳಿ
  ಇನ್ನು ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳ ಮೇಲೆ ಜೇನು ದಾಳಿ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಮೇರಿ ಇನ್ ಮಾಕ್ಯುಲೆಟ್ ಹೈಸ್ಕೂಲ್ ಬಳಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವೇಳೆ ಜೇನು ದಾಳಿ ನಡೆಸಿದೆ. ಘಟನೆಯಲ್ಲಿ ಆರು ಜನ ವಿದ್ಯಾರ್ಥಿಗಳಿಗೆ ಹಾಗೂ 12 ಜನ ಪೋಷಕರಿಗೆ ಜೇನು ದಾಳಿ ಒಳಗಾಗಿದ್ದಾರೆ. ಅವರು ತಕ್ಷಣಕ್ಕೆ ಚಿಕಿತ್ಸೆ ಪಡೆದು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಪೋಷಕರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಇದನ್ನೂ ಓದಿ: SSLC Student ಫೋಟೋಗೆ ಹಾರ ಹಾಕಿ ತಿಥಿ ಕಾರ್ಯ! ಇದೇನು ವಾಮಾಚಾರವೋ? ಕಿಡಿಗೇಡಿಗಳ ಕೃತ್ಯವೋ?

  ನಕಲಿ ವಿದ್ಯಾರ್ಥಿಗಳು ವಶ
  ಎಸ್​ಎಸ್​​ಎಲ್​ಸಿ ಪರೀಕ್ಷೆ ವೇಳೆ ಅಕ್ರಮ ನಡೆಸಲು ಮುಂದಾಗಿದ್ದ ಆರು ಜನರನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಭ್ಯರ್ಥಿಗಳ ಪರವಾಗಿ ಬೇರೆಯವರು ಪರೀಕ್ಷೆ ಬರೆಯಲು ಆಗಮಿಸಿದ್ದರು. ಇದನ್ನು ತಿಳಿದು ಈ ಕೃತ್ಯ ಎಸಗಿದ ಐವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಕಾಲೇಜಿನ ಪರೀಕ್ಷೆ ಹಾಜರಾಗಿದ್ದರು ಈ ಆರು ಜನ ವಿದ್ಯಾರ್ಥಿಗಳ ಹಾಲ್ ​ಟಿಕೆಟ್​ ಪರಿಶೀಲನೆ ನಡೆಸಿದಾಗ ಇವರು ಅಕ್ರಮ ಎಸಗಿದ್ದು ಬಯಲಾಗಿದೆ. ತಕ್ಷಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗಿದೆ

  ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಆರಂಭ: Hijab ಧರಿಸಿ ಬಂದ್ರೆ ನೋ ಎಂಟ್ರಿ

  ಹಿಜಾಬ್​ ತೆಗೆಯಲ್ಲ ಎಂದ ವಿದ್ಯಾರ್ಥಿನಿಯರು

  ಇನ್ನು ಪರೀಕ್ಷಾ ಕೇಂದ್ರಕ್ಕೆ ಹಿಜಾಬ್​ ಧರಿಸಿ ಬರುವಂತಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ಈ ಹಿಂದೆಯೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತು. ಈ ನಡುವೆ ಕೂಡ ಆನೇಕಲ್​ನಲ್ಲಿ ವಿದ್ಯಾರ್ಥಿಯರು ಹಿಜಾಬ್​ ಧರಿಸಿ ಬಂದ ಘಟನೆ ನಡೆದಿದೆ. ಜಿಗಣಿಯ ನಿತ್ಯಾನಂದ ಪರೀಕ್ಷಾ ಕೇಂದ್ರಕ್ಕೆ 11 ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂಧಿದ್ದರು. ಅಲ್ಲದೇ ವಿರು ಹಿಜಾಬ್ ತೆಗೆಯಲು ಸೂಚಿಸಿದ್ದಕ್ಕೆ ಪರೀಕ್ಷೆ ಬರೆಯಲ್ಲ ಎಂದು ವಾಪಸ್​ ನಡೆಯಲು ಕೂಡ ನಿರ್ಧರಿಸಿದ್ದರು. ಈ ವೇಳೆ ಶಿಕ್ಷಕರು ಸರ್ಕಾರ ಮಾರ್ಗಸೂಚಿಯಂತೆ ಹಿಜಾಬ್ ಧರಿಸದೇ ಪರೀಕ್ಷೆಗೆ ಕೂರುವಂತೆ ತಿಳಿಸಿದರು. ಆದರೆ, ವಿದ್ಯಾರ್ಥಿಗಳು ಇದನ್ನು ನಿರಾಕರಿಸಿದರು. ಕೊನೆಗೆ ಅಧಿಕಾರಿಗಳ ಮನ ಒಲಿಕೆ ಬಳಿಕ ವಿದ್ಯಾರ್ಥಿನಿಯರು  ಪರೀಕ್ಷೆ ಬರೆದರು
  Published by:Seema R
  First published: