• Home
  • »
  • News
  • »
  • state
  • »
  • Crime News: 4ನೇ ತರಗತಿ ವಿದ್ಯಾರ್ಥಿಯನ್ನ ಮೊದಲ ಮಹಡಿಯಿಂದ ಎಸೆದು ಕೊಲೆಗೈದ ಶಿಕ್ಷಕ, ಶಿಕ್ಷಕಿ ಸ್ಥಿತಿ ಗಂಭೀರ

Crime News: 4ನೇ ತರಗತಿ ವಿದ್ಯಾರ್ಥಿಯನ್ನ ಮೊದಲ ಮಹಡಿಯಿಂದ ಎಸೆದು ಕೊಲೆಗೈದ ಶಿಕ್ಷಕ, ಶಿಕ್ಷಕಿ ಸ್ಥಿತಿ ಗಂಭೀರ

ಆ್ಯಂಬುಲೆನ್ಸ್

ಆ್ಯಂಬುಲೆನ್ಸ್

ಘಟನೆಯಲ್ಲಿ 10 ವರ್ಷದ ಬಾಲಕ ಮೃತಪಟ್ಟಿದ್ದು, ಶಾಲೆಯಲ್ಲಿ ಪಾಠ ಮಾಡಲು ನಿಯೋಜನೆ ಮಾಡಿದ್ದ ಅತಿಥಿ ಶಿಕ್ಷಕನೊಬ್ಬ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

  • Share this:

ಗದಗ: ಶಾಲಾ ಶಿಕ್ಷಕನೋರ್ವ (School Teacher) 4ನೇ ತರಗತಿ ವಿದ್ಯಾರ್ಥಿಯನ್ನು (Student) ಥಳಿಸಿ, ಬಳಿಕ ಶಾಲೆಯ ಮೊದಲನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಘಟನೆ ಗದಗ (Gadaga) ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 10 ವರ್ಷದ ಬಾಲಕ ಮೃತಪಟ್ಟಿದ್ದು, ಶಾಲೆಯಲ್ಲಿ ಪಾಠ ಮಾಡಲು ನಿಯೋಜನೆ ಮಾಡಿದ್ದ ಅತಿಥಿ ಶಿಕ್ಷಕನೊಬ್ಬ (Guest Teacher) ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಗದಗ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಘಟನೆ ನಡೆದಿದ್ದು, ಮೃತ ಬಾಲಕನನ್ನು ಭರತ್ ಎಂದು ಗುರುತಿಸಲಾಗಿದೆ. ಘಟನೆ ಕುರಿತಂತೆ ಗದಗ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಘಟನೆಯೂ ಕೌಟುಂಬಿಕ ಕಲಹದಿಂದ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.


ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಶಿಕ್ಷಕನನ್ನು ಮುತ್ತಪ್ಪ ಹಡಗಲಿ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಆರೋಪಿ ಶಿಕ್ಷಕ, ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಬಾಲಕನ ತಾಯಿ, ಶಿಕ್ಷಕಿಯೂ ಆಗಿದ್ದ ಗೀತಾ ಬಾರಕೇರಿ ಎಂಬವರ ಮೇಲೂ ಹಲ್ಲೆ ಮಾಡಿದ್ದು, ಸದ್ಯ ಶಿಕ್ಷಕಿಯ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Mother's Marriage: 50ರ ತಾಯಿಗೆ ಮರುಮದುವೆ ಮಾಡಿಸಿದ ಮಗಳು: ವರನಿಗೆ ಇದು ಮೊದಲನೇ ಕಲ್ಯಾಣ!


ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ


ಆರೋಪಿ ಅತಿಥಿ ಶಿಕ್ಷಕ ಇತರೇ ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಗ್ರಾಮಕ್ಕೆ ನರಗುಂದ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಆವರಣದಲ್ಲಿ ಪೊಲೀಸ್ ಪಡೆ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸದ್ಯ ಪೊಲೀಸರು ಶಾಲೆಯ ಶಿಕ್ಷಕರನ್ನು ವಿಚಾರಣೆ ನಡೆಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಶಾಲೆ ಆವರಣದಲ್ಲಿ ನೂರಾರು ಗ್ರಾಮಸ್ಥರು ಜಮಾಯಿಸಿದ್ದಾರೆ.


ಘಟನೆ ಸಂಬಂಧದಲ್ಲಿ ಜಗಳ ಬಿಡಿಸಲು ಮುಂದಾಗಿದ್ದ ಶಿಕ್ಷಕ ಎಸ್ ಸಿ ಪಾಟೀಲ್ ಮೇಲೂ ಹಲ್ಲೆ ಮಾಡಿದ್ದಾನೆ. ಇನ್ನು, ಅತಿಥಿ ಶಿಕ್ಷಕರಾಗಿ ಮುತ್ತಪ್ಪ 2022ರಿಂದ ಕೆಲಸ ಮಾಡುತ್ತಿದ್ದರಂತೆ. ಸ್ಥಳಕ್ಕೆ ಜಿಪಂ ಸಿಇಓ ಡಾ.ಸುಶೀಲಾ, ಎಸ್​ಪಿ ಶಿವಪ್ರಕಾಶ್ ದೇವರಾಜು, ಡಿಡಿಪಿಐ ಬಸಲಿಂಗಪ್ಪ ಪರಿಶೀಲನೆ ನಡೆಸಿದ್ದು, ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.


ಇದನ್ನೂ ಓದಿ: Kolar: ಅಪ್ರಾಪ್ತೆಯೊಂದಿಗೆ ಎಸ್ಕೇಪ್​​ ಆದ ಮೂವರ ಹೆಂಡಿರ ಮುದ್ದಿನ ಗಂಡ! ಮೂರನೇ ಪತ್ನಿ ಬಿಚ್ಚಿಟ್ಳು ಸೀಕ್ರೆಟ್!


ಅತಿಥಿ ಶಿಕ್ಷಕನ ಹುಚ್ಚಾಟಕ್ಕೆ ಶಾಲೆಯ ನೂರಾರು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಘಟನೆ ನಡೆದ ಕೂಡಲೇ ಮಕ್ಕಳನ್ನು ತರಗತಿಯಿಂದ ಹೊರಗೆ ಕಳುಹಿಸಿದ್ದಾರೆ. ಆ ಬಳಿಕ ಗ್ರಾಮಸ್ಥರು ಶಿಕ್ಷಕಿಯ ಸಹಾಯಕ್ಕೆ ಬಂದಿದ್ದು, ಶಿಕ್ಷಕನ ಹುಚ್ಚಾಟವನ್ನು ನಿಯಂತ್ರಣ ಮಾಡಿದ್ದಾರೆ. ಕೂಡಲೇ ಆಂಬುಲೆನ್ಸ್‌ ಗೆ ಮೂಲಕ ರಕ್ತದ ಮಡುವಿನಲ್ಲಿದ್ದ ಬಾಲಕ ಮತ್ತು ಆತನ ತಾಯಿಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಬಾಲಕ ಸಾವನ್ನಪ್ಪಿದ್ದು, ಶಿಕ್ಷಕಿ ಆರೋಗ್ಯ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ


ಬೆಂಗಳೂರು (Bengaluru) ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು 23 ವರ್ಷದ ವಾಣಿ ಎಂದು ಗುರುತಿಸಲಾಗಿದ್ದು, ವಿವಿಪುರ (VV Puram) ಬಳಿ ಇರುವ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Bengaluru Institute Of Technology) ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Published by:Sumanth SN
First published: