• Home
  • »
  • News
  • »
  • state
  • »
  • Udupi: ಅಜಾನ್​​ಗೆ ಮಕ್ಕಳಿಂದ ನೃತ್ಯ; ಹಿಂದೂ ಸಂಘಟನೆಗಳ ಆಕ್ರೋಶ

Udupi: ಅಜಾನ್​​ಗೆ ಮಕ್ಕಳಿಂದ ನೃತ್ಯ; ಹಿಂದೂ ಸಂಘಟನೆಗಳ ಆಕ್ರೋಶ

ಅಜಾನ್​ಗೆ ಮಕ್ಕಳಿಂದ ನೃತ್ಯ

ಅಜಾನ್​ಗೆ ಮಕ್ಕಳಿಂದ ನೃತ್ಯ

ಉಡಪಿ ಜಿಲ್ಲೆಯ ಕುಂದಾಪುರ (Kundapur, Udupi) ತಾಲೂಕಿನ ಖಾಸಗಿ ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳು ಅಜಾನ್​ಗೆ (Azan) ನೃತ್ಯ (Dance) ಮಾಡಿರೋದು ಹಿಂದೂ ಸಂಘಟನೆಗಳ (Hindu Organization) ಕೆಂಗಣ್ಣಿಗೆ ಗುರಿಯಾಗಿದೆ.

  • Share this:

ಕಳೆದ ಒಂದೂವರೆ ವರ್ಷದಿಂದ ಕರಾವಳಿ ಭಾಗದಲ್ಲಿ (Karnataka Coastal) ಕೋಮು ಸಂಘರ್ಷಕ್ಕೆ (Communal Clashes) ಹಲವು ಪ್ರಕರಣಗಳು ಸಾಕ್ಷಿಯಾಗಿವೆ. ಹಿಜಾಬ್ ವರ್ಸಸ್​ ಕೇಸರಿ ಶಾಲು (Hijab Vs Saffron Shawl), ಹಿಂದೂಯೇತರ ವರ್ತಕರಿಗೆ ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ, ಹಿಂದೂ ಕಾರ್ಯಕರ್ತರ ಕೊಲೆ (Hindu Activist Murder) ಸೇರಿದಂತೆ ಹಲವು ಘಟನೆಗಳು ನಡೆದಿವೆ. ಇದೀಗ ಉಡಪಿ ಜಿಲ್ಲೆಯ ಕುಂದಾಪುರ (Kundapur, Udupi) ತಾಲೂಕಿನ ಖಾಸಗಿ ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳು ಅಜಾನ್​ಗೆ (Azan) ನೃತ್ಯ (Dance) ಮಾಡಿರೋದು ಹಿಂದೂ ಸಂಘಟನೆಗಳ (Hindu Organization) ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಸಂಘಟನೆಗಳಿಂದ ವ್ಯಾಪಾಕ ವಿರೋಧ ವ್ಯಕ್ತವಾಗುತ್ತಿದ್ದಂತೆ  ಶಾಲಾ ಆಡಳಿತ ಮಂಡಳಿ ಕ್ಷಮೆ ಕೋರಿದೆ.


ಸದ್ಯ ಮಕ್ಕಳ ನೃತ್ಯದ (Student Dance) ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ (Social Medi) ವೈರಲ್ ಆಗಿವೆ. ಈ ಸಂಬಂಧ ಪರ ವಿರೋಧ ಚರ್ಚೆಗಳು ಆರಂಭಗೊಂಡಿವೆ.


ಏನಿದು ಪ್ರಕರಣ?


ಶಂಕರನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಉದ್ಘಾಟನಾ ಕಾರ್ಯಕ್ರಮದ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು.


ಮಕ್ಕಳು ಮಾಡಿದ ಸ್ವಾಗತ ನೃತ್ಯದಲ್ಲಿ 30 ಸೆಕೆಂಡ್​ ಅಜಾನ್​ ಬಳಸಲಾಗಿದೆ. ಈ ಸ್ವಾಗತ ನೃತ್ಯದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಹಾಡುಗಳನ್ನು ಬಳಸಲಾಗಿತ್ತು. ಈ ನೃತ್ಯದಲ್ಲಿ 30 ಸೆಕೆಂಡ್​ ಅಜಾನ್​ಗೆ ವಿದ್ಯಾರ್ಥಿಗಳು ನೃತ್ಯ ಮಾಡುತ್ತಿದ್ದಂತೆ ವೇದಿಕೆಯಲ್ಲಿ ಆಸೀನರಾಗಿದ್ದ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಕಲ್ಗದ್ದೆ ಖಂಡಿಸಿದ್ದಾರೆ.


ಹಿಂದೂ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ


ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಶಾಲೆಯತ್ತ ಆಗಮಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಈ ಸಂಬಂಧ ಆಡಳಿತ ಮಂಡಳಿ ಕ್ಷೆಮೆ ಕೇಳಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಕ್ಷಮೆ ಕೇಳದಿದ್ರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.


ಈ ವಿಷಯ ಸಂಬಂಧ ದೀರ್ಘ ಸಮಯದವರೆಗೆ ಚರ್ಚೆ ನಡೆಸಿದ ಶಾಲಾ ಆಡಳಿತ ಮಂಡಳಿ ಸದಸ್ಯರು ನಡೆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.


ಇದನ್ನೂ ಓದಿ:  Hijab Row: ಹಿಜಾಬ್ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ; ದೂರು ದಾಖಲು


ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿದ್ದೇನ?


ಕ್ರೀಡಾಕೂಟದಲ್ಲಿ ನಡೆದ ಸ್ವಾಗತ ನೃತ್ಯದಲ್ಲಿ ಮಕ್ಕಳು 30 ಸೆಕೆಂಡ್ ಅಜಾನ್​ಗೆ ಹೆಜ್ಜೆ ಹಾಕಿದ್ದಾರೆ. ಇದಾದ ನಂತರ ಬೈಬಲ್ ಮತ್ತು ಹಿಂದೂ ಶ್ಲೋಕಗಳಿಗೂ ಮಕ್ಕಳು ಹೆಜ್ಜೆ ಹಾಕಿದ್ದಾರೆ. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ. ಒಂದು ವೇಳೆ ಈ ಘಟನೆಯಿಂದಾ ನಿಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ರೆ ನಾವು ಕ್ಷಮೆ ಕೇಳುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿದ್ದಾರೆ.


ಹಿಜಾಬ್ ವಿವಾದ, ವಿಸ್ತೃತ ಪೀಠಕ್ಕೆ ವರ್ಗಾವಣೆ


ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದಾರೆ. ನ್ಯಾಯಮೂರ್ತಿ ಸುಧಾಂಶ ಧುಲಿಯಾ ಅವರು ಕರ್ನಾಟಕ ಹೈಕೋರ್ಟ್​ ನೀಡಿದ ತೀರ್ಪನ್ನು ರದ್ದುಗೊಳಿಸಿದ್ದಾರೆ. ಹಿಜಾಬ್ ವಿವಾದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆಗೊಳಿಸಲಾಗಿದೆ.


ಇದನ್ನೂ ಓದಿ:  Hijab Row: ಹಿಜಾಬ್ ಗಲಾಟೆಯಾದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಳ


ಸಮ್ಮತ ತೀರ್ಪು ಬರದ ಹಿನ್ನೆಲೆ ಕರ್ನಾಟಕ ಹೈಕೋರ್ಟ್​ ತೀರ್ಪು ಯಥಾಸ್ಥಿತಿ ಇರಲಿದೆ.  ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ಮಹಿಳೆಯರು (Women) ಧರಿಸುವ ಹಿಜಾಬ್​​ಗೆ ನಿಷೇಧ (Hijab Ban) ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್‌ನ (Supreme court) ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ (Justices Hemant Gupta and Sudhanshu Dhulia) ದ್ವಿ ಸದಸ್ಯ ಪೀಠ ಪ್ರಕಟಿಸಿದೆ.

Published by:Mahmadrafik K
First published: