ಶಾಲಾ ಶುಲ್ಕ ಕಟ್ಟದ ಹಿನ್ನಲೆ ವಿದ್ಯಾರ್ಥಿ ಮೇಲೆ ಎಂಜಲು ನೀರು ಎರಚಿ ಹಲ್ಲೆ

ಮನನೊಂದಿರುವ ಮನೋಜ್ ಮನೆ ಬಿಟ್ಟು ಹೋಗಿದ್ದು, ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ

zahir | news18
Updated:December 6, 2018, 4:02 PM IST
ಶಾಲಾ ಶುಲ್ಕ ಕಟ್ಟದ ಹಿನ್ನಲೆ ವಿದ್ಯಾರ್ಥಿ ಮೇಲೆ ಎಂಜಲು ನೀರು ಎರಚಿ ಹಲ್ಲೆ
ಸಾಂದರ್ಭಿಕ ಚಿತ್ರ
zahir | news18
Updated: December 6, 2018, 4:02 PM IST
ಚಾಮರಾಜನಗರ ( ಡಿ.6):  ಶಾಲಾ ಶುಲ್ಕ ಕಟ್ಟದ ವಿದ್ಯಾರ್ಥಿ ಮೇಲೆ ಆಡಳಿತ ಮಂಡಳಿ ಅಮಾನವೀಯ ರೀತಿಯಲ್ಲಿ ವರ್ತಿಸಿದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಆಡಳಿತ ಮಂಡಳಿ ಖಜಾಂಚಿ ಎಸ್.ಎನ್.ಪ್ರಸಾದ್ ವಿದ್ಯಾರ್ಥಿ ಮನೋಜ್ ಮೇಲೆ ಎಂಜರು ನೀರು ಎರಚಿ ಹೇಯವಾಗಿ ವರ್ತಿಸಿದ್ದಾರೆ.

ಕೊಳ್ಳೇಗಾಲದ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮನೋಜ್ ಶುಲ್ಕ ಕಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಖಜಾಂಚಿ ತಮ್ಮ ಮಗನ ಮೇಲೆ ಎಂಜಲನ್ನು ಎರಚಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರಿಂದ ಮನನೊಂದಿರುವ ಮನೋಜ್ ಮನೆ ಬಿಟ್ಟು ಹೋಗಿದ್ದು, ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಕಾರ್ಡ್​ ಬಳಸದೇ ಎಟಿಎಂನಿಂದ ಹಣ ಪಡೆಯಬಹುದು: ಹೇಗಂತೀರಾ?

ಮನೋಜ್ ಮೇಲೆ ಅಮಾನವೀಯ ರೀತಿಯಲ್ಲಿ ಕೃತ್ಯ ಎಸೆಗಿರುವ ಪ್ರಸಾದ್ ವಿರುದ್ಧ ಪೋಷಕರು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: 6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ