Ramanagara: ವಿದ್ಯಾರ್ಥಿ ಮೇಲೆ ಸಬ್ ಇನ್ಸ್‌ಪೆಕ್ಟರ್‌ ಹಲ್ಲೆ; ಠಾಣೆಗೆ ಮುತ್ತಿಗೆಹಾಕಿ‌ ಪ್ರತಿಭಟನೆ, SP ಸ್ಪಷ್ಟನೆ

ನಮ್ಮ ಹುಡುಗನದ್ದು ಯಾವ ತಪ್ಪಿಲ್ಲ, ಆದರೂ ಹೊಡೆದಿದ್ದಾರೆ. ಹಾಗಾಗಿ ಇವತ್ತು ಪ್ರತಿಭಟನೆ ನಡೆಸಿದ್ದೇವೆ. ಈಗ ಕ್ಷಮೆ ಕೇಳಿದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟಿದ್ದೇವೆಂದು ತಿಳಿಸಿದರು.

SP

SP

  • Share this:
ರಾಮನಗರದ ಗೌಸಿಯಾ ಕಾಲೇಜು ಆವರಣದಲ್ಲಿ (Ghousia college Ground) ಕಳೆದ ದಿನ ತಿರುಮಲ - ಮಲ್ಲಿಕಾರ್ಜುನ್ ಹಾಗೂ ಕಾರ್ತಿಕ್ ಎಂಬುವರ ನಡುವೆ ಗಲಾಟೆ ನಡೆದಿದೆ. ತಿರುಮಲಾ ಎಂಬಾತ ಮಾತನಾಡುತ್ತ ಮಚ್ಚನ್ನ ಹೊರ ತೆಗೆದು ಹಲ್ಲೆ ಮಾಡಲು ಮುಂದಾಗಿರುವ ಘಟನೆ ನಡೆದಿದೆ. ಈ ವಿಡಿಯೋ (Video) ಅಲ್ಲಿನ ಹೋಟೆಲ್ ನ ಸಿಸಿಟಿವಿಯಲ್ಲಿ (Hotel CCTV Camera) ಸೆರೆಯಾಗಿದೆ. ಇನ್ನು ಈ ಬಗ್ಗೆ ರಾಮನಗರ ಟೌನ್ ಪೊಲೀಸರು (Ramanagara Town Police) ತಕ್ಷಣ ಕ್ರಮವಹಿಸಿ ತಿರುಮಲಾ ಎಂಬಾತನನ್ನು ಅರೆಸ್ಟ್ (Arrest) ಮಾಡಿದ್ದಾರೆ. ಆದರೆ ಕಾಂಗ್ರೆಸ್ NSUI ವಿದ್ಯಾರ್ಥಿ ಕಾರ್ತಿಕ್ ಗೆ ಸಬ್ ಇನ್ಸ್‌ಪೆಕ್ಟರ್‌ ಮುರಳಿ ಹೊಡೆದರು ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು (Congress Activist) ಠಾಣೆಯ ಎದುರು ಕುಳಿತು ಕಪ್ಪುಪಟ್ಟಿ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದರು.

ಈ ಹಿನ್ನೆಲೆ ಸ್ಥಳಕ್ಕೆ ಡಿವೈಎಸ್‌ಪಿ ಮೋಹನ್ ಕುಮಾರ್ ಆಗಮಿಸಿ ಪ್ರತಿಭಟನಾಕಾರರನ್ನ ಸಮಾಧಾನ ಪಡಿಸಿ ಸಬ್ ನ್ಸ್‌ಪೆಕ್ಟರ್ ಮುರಳಿ ಅವರಿಂದ ಕ್ಷಮೆ ಕೇಳಿಸಿದ ಹಿನ್ನೆಲೆ ಪ್ರತಿಭಟನೆಯನ್ನ ಕಾಂಗ್ರೆಸ್ ಕಾರ್ಯಕರ್ತರು ಕೈಬಿಡುತ್ತಾರೆ.

ಕ್ಷಮೆ ಕೇಳಿದ ಪ್ರತಿಭಟನೆ ಕೈಬಿಟ್ಟ ಕಾರ್ಯಕರ್ತರು

ಇನ್ನು ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿ, ನಮ್ಮ ಹುಡುಗನದ್ದು ಯಾವ ತಪ್ಪಿಲ್ಲ, ಆದರೂ ಹೊಡೆದಿದ್ದಾರೆ. ಹಾಗಾಗಿ ಇವತ್ತು ಪ್ರತಿಭಟನೆ ನಡೆಸಿದ್ದೇವೆ. ಈಗ ಕ್ಷಮೆ ಕೇಳಿದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟಿದ್ದೇವೆಂದು ತಿಳಿಸಿದರು. ಇನ್ನು ಎಸ್‌ಪಿ ಸಂತೋಷ್ ಬಾಬು ಮಾತನಾಡಿ ಈಗಾಗಲೇ ತಿರುಮಲ ಎಂಬಾತನನ್ನ ಬಂಧಿಸಿದ್ದೇವೆ, ಮುಂದೆ ಯಾವುದೇ ಅನಾಹುತ ನಡೆಯದ ಹಾಗೇ ಕ್ರಮವಹಿಸುತ್ತೇವೆಂದು ತಿಳಿಸಿದರು.

ಇದನ್ನೂ ಓದಿ: Crime News: ಇನ್ನೊಂದು ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವಕನ ಕತ್ತು ಸೀಳಿ ಕೊಲೆ

ರಾಮನಗರದಲ್ಲಿ ಹೆಚ್ಚಾಗಿದೆ ರೌಡಿ ಚಟುವಟಿಕೆ, ವಿದ್ಯಾರ್ಥಿಗಳೇ ಟಾರ್ಗೆಟ್

ರೇಷ್ಮೆನಗರಿ ರಾಮನಗರದಲ್ಲಿ ರೌಡಿ ಚಟುವಟಿಕೆಗಳು ಬಹಳ ಹೆಚ್ಚಾಗಿದೆ. ಅದರಲ್ಲಿಯೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳೇ ಪುಡಿಪುಂಡರ ಟಾರ್ಗೆಟ್ ಆಗ್ತಿದ್ದಾರೆ. ನಗರದ ಡಿಗ್ರಿ ಕಾಲೇಜು ಗಳ ಬಳಿ ಪ್ರತಿದಿನವೂ ಅಡ್ಡ ಮಾಡಿಕೊಂಡು ವಿದ್ಯಾರ್ಥಿಗಳಿಗೆ ತೊಂದರೆ ಕೊಡ್ತಿದ್ದಾರೆ.

ಜೊತೆಗೆ ಕಾಲೇಜು ಆವರಣದಲ್ಲಿ ಯುವತಿಯರಿಗೆ ತೊಂದರೆ ಕೊಡುವುದು ಸಹ ಸಾಮಾನ್ಯವಾಗಿದೆ. ಆದರೆ ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹ ಕಟ್ಟುನಿಟ್ಟಾಗಿ ಕ್ರಮವಹಿಸುತ್ತಿದ್ದಾರೆ. ಆದರೂ ಸಹ ಯಾವುದೇ ಭಯವಿಲ್ಲದೇ ತಮ್ಮ ಕಿತಾಪತಿಯನ್ನ ಪುಂಡರು ಮುಂದುವರಿಸಿದ್ದಾರೆ.

ಕಾಲೇಜು ಆವರಣದಲ್ಲಿ ಪುಂಡರ ಅಟ್ಟಹಾಸ, ವಿದ್ಯಾರ್ಥಿಗಳಲ್ಲಿ ಭಯ

ಕಾಲೇಜು ಆವರಣದಲ್ಲಿ ಪೋಲಿ ಪುಂಡರು ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತ ಕಿರಿಕಿರಿ ಮಾಡ್ತಿದ್ದಾರೆ.‌ ಅದರಲ್ಲಿಯೂ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ದಿನನಿತ್ಯ ತೊಂದರೆ ಕೊಡುವ ಪುಂಡರು ರೌಡಿಸಂ ಚಟುವಟಿಕೆಗಳ ಕಡೆಗೆ ಪ್ರಚೋದನೆ ಕೊಡ್ತಿದ್ದಾರೆ. ‌

ಕಾಲೇಜು ಆವರಣದಲ್ಲಿ ಲಾಂಗು, ಮಚ್ಚು ಜಳಪಳಿಸುತ್ತಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಂತಲೂ ಹೆಚ್ಚಾಗಿ ಕಾಲೇಜಿನಲ್ಲಿ ಓದದ ಪುಂಡರೇ ಹೆಚ್ಚು ಕಾಲೇಜು ಆವರಣದಲ್ಲಿ ದರ್ಬಾರ್ ಮಾಡ್ತಿರುವ ಪ್ರಸಂಗಗಳು ನಡೆಯುತ್ತಿವೆ.

SP ಖಡಕ್ ಸಂದೇಶ

ಈ ವಿಚಾರವಾಗಿ ರಾಮನಗರ SP ಸಂತೋಷ್ ಬಾಬು ಖಡಕ್ ಆಗಿ ಆದೇಶ ಮಾಡಿದ್ದು, ಯಾವುದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಲಿಪುಂಡರಿಂದ ತೊಂದರೆಯಾಗಬಾರದು. ಅಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕಾನೂನು ಕ್ರಮವಹಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Chikkamagaluru Rain: ಮಲೆನಾಡಲ್ಲಿ ಮುಂದುವರೆದ ಮಳೆಯ ರೌದ್ರನರ್ತನ, ವರುಣನ ಅಬ್ಬರಕ್ಕೆ ಮನೆ ಕುಸಿತ

ಆದರೆ ಇತ್ತೀಚಿನ ದಿನಗಳಲ್ಲಿ ಕಾಲೇಜಿನ‌ ವಿದ್ಯಾರ್ಥಿಗಳ ನಡುವೆ ರಾಜಕೀಯ ಪುಡಾರಿಗಳು ಸಹ ತಮ್ಮ ಬೇಳೆಬೇಯಿಸಿಕೊಳ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟ್ಟಿದ್ದರೆ. ಹಾಗಾಗಿ ಮೊದಲು ಅಂತಹ ವ್ಯಕ್ತಿಗಳ‌ ಬಗ್ಗೆ ಎಚ್ಚರಿಕೆವಹಿಸಬೇಕಿದೆ.
Published by:Mahmadrafik K
First published: