Hassan: ಸರ್, ನಮಗೆ ಪುಸ್ತಕ ಯಾವಾಗ ಕೊಡ್ತೀರಿ? C T Ravi ಅವರನ್ನ ಪ್ರಶ್ನಿಸಿದ 10ನೇ ಕ್ಲಾಸ್ ವಿದ್ಯಾರ್ಥಿ

ಶಾಲೆ ಆರಂಭವಾಗಿ ಒಂದು ತಿಂಗಳು‌ ಕಳೆದರೂ ಸಮಾಜ ವಿಜ್ಞಾನ ಹಾಗೂ ಕನ್ನಡ ಪುಸ್ತಕ ನೀಡಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಸಿ.ಟಿ.ರವಿ

ಸಿ.ಟಿ.ರವಿ

  • Share this:
ಯಾರ್ ಯಾರ ಹಣೆಯಲ್ಲಿ ಯೋಗ ಬರೆದಿರುತ್ತೆ ಅವರು ಸಿಎಂ ಆಗ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C T Ravi) ಹೇಳಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಲ್ಕೂರು ಗ್ರಾಮದಲ್ಲಿ ರಣಘಟ್ಟ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ ಆಗಮಿಸಿದ್ದ ವೇಳೆ ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ (BY Vijayendra) ಸಿಎಂ ಆಗ್ತಾರೆ ಎಂಬ ಸಚಿವ ನಾರಾಯಗೌಡ (Minister Narayanagowda) ಹೇಳಿಕೆಗೆ ಬಗ್ಗೆ ಪ್ರತಿಕ್ರಿಯೆಸಿದ ಅವರು ಯೋಗ ಬರೆದಿದ್ದರೆ ಯಾರೂ ಬೇಕಾದ್ರು ಸಿಎಂ ಆಗಬಹುದು ಎಂದರು. ಪ್ರತಾಪ್ ಸಿಂಹ (MP Pratap Simha) ಪತ್ರಕರ್ತರಾಗಿದ್ದರು, ಯೋಗ ಇತ್ತು ಮೈಸೂರು ಸಂಸದರಾದರು. ಯೋಗ ಇದ್ದರೆ ಏನು ಬೇಕಾದ್ರು ಆಗಬಹುದು. ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮುಖ್ಯಮಂತ್ರಿ ಆಗಬೇಕು ಅಂತ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಯೋಗ ಕೂಡಿ ಬಂತು ಮುಖ್ಯಮಂತ್ರಿಯಾದರು ಎಂದು ಹೇಳಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ತೆರಳುತ್ತಿದ್ದ ಸಂದರ್ಭದಲ್ಲಿ ಶಾಲೆ‌ ಮುಗಿಸಿ ಮನೆಗೆ ತೆರಳುತ್ತಿದ್ದ ಕೆಲ ಶಾಲೆಯ ವಿದ್ಯಾರ್ಥಿಗಳು ಸಿ.ಟಿ.ರವಿ ಭೇಟಿ ಮಾಡಲು ನಿಂತಿದ್ದರು. ಅವರ ಬಳಿ ಸಿ.ಟಿ.ರವಿ ಹೋಗುತ್ತಿದ್ದಂತೆ ಸರ್ ನಮಗೆ ಪುಸ್ತಕ ಯಾವಾಗ ಕೊಡ್ತೀರಿ? ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಹತ್ತನೇ ತರಗತಿ ವಿದ್ಯಾರ್ಥಿಗಳು ಪ್ರಶ್ನಿಸಿದರು.

ಸರ್, ಆದಷ್ಟು ಬೇಗ ಪುಸ್ತಕ ಕೊಡಿ

ಶಾಲೆ ಆರಂಭವಾಗಿ ಒಂದು ತಿಂಗಳು‌ ಕಳೆದರೂ ಸಮಾಜ ವಿಜ್ಞಾನ ಹಾಗೂ ಕನ್ನಡ ಪುಸ್ತಕ ನೀಡಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಇದನ್ನೂ ಓದಿ:  Belagavi: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ- ಕೈ, ಕೇಸರಿ ನಾಯಕರ ಮತಬೇಟೆ ಜೋರು

ಮಕ್ಕಳಿಗೆ ಭರವಸೆ ನೀಡಿದ ಸಿ.ಟಿ.ರವಿ

ಇದಕ್ಕೆ ಸಮಜಾಯಿಷಿ ನೀಡಿದ ಸಿ.ಟಿ.ರವಿ ಇಂದು ಶಾಲೆಯಲ್ಲಿ ಬಿಸಿಯೂಟ ಇತ್ತ,  ಏನು ಊಟ ಎಂದು ಪ್ರಶ್ನಿಸಿದರು. ಅನ್ನ ಸಾಂಬಾರ್ ಊಟ ಮಾಡಿದೆವು ಎಂದು ವಿದ್ಯಾರ್ಥಿಗಳು ಹೇಳಿದರು. ತರಕಾರಿ ಇರಲಿಲ್ವಾ ಎಂದು ಮರು ಪ್ರಶ್ನೆ ಮಾಡಿದ ಸಿ. ಟಿ.ರವಿಗೆ ಇತ್ತು ಸರ್ ಎಂದ ಮಕ್ಕಳ ಉತ್ತರಿಸಿದರು. ನೀವು ಬುದ್ಧಿವಂತರಿದ್ದೀರಿ. ಆದಷ್ಟು ಬೇಗ ಪುಸ್ತಕ ಕೊಡುತ್ತಾರೆ. ನೀವು ಪಾಸಾಗ್ತೀರಾ, ಮನೆಗೆ ಹೋಗಿ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಯೋಗ ಬರೆಯುವವರು ರಾಜ್ಯದ ಜನ. ಅವರು ಬರದರೆ ಏನು ಬೇಕಾದರೂ ಆಗಬಹುದು. ಯಾರು ಬೇಕಾದರೂ ಆಗಬಹುದು. ಭವಿಷ್ಯದಲ್ಲೇ ಬಿಜೆಪಿಗೆ ಒಳ್ಳೆಯ ದಿನಗಳಿವೆ. ಬಿಜೆಪಿ ಜೊತೆಗೆ ಯಾರು ಇರ್ತಾರೆ ಅವರೆಲ್ಲರಿಗೂ ಒಳ್ಳೆಯ ದಿನಗಳು ಗ್ಯಾರೆಂಟಿ ಸಿಗುತ್ತವೆ ಎಂದು ಭವಿಷ್ಯ ನುಡಿದರು.

ಚಡ್ಡಿ ಹೇಳಿಕೆಗೆ ತಿರುಗೇಟು

ಆರ್‌ ಎಸ್‌ಎಸ್ ಚಡ್ಡಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, 1925 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಒಂದು ಶಾಖೆಯ ಮೂಲಕ ಆರಂಭವಾಯಿತು. ವಿದ್ಯುಕ್ತವಾಗಿ ದೊಡ್ಡ ಸ್ಟೇಜ್ ಹಾಕಿ ಪ್ರಾರಂಭವಾದುದ್ದಲ್ಲ. ಭಗವಾದ್ ಧ್ವಜ, ಒಂದು ಶಾಖೆ. ಅದರಲ್ಲಿ ಕಬ್ಬಡಿ ಆಟದ ಮೂಲಕ‌ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿತು.‌

ಜಾತೀಯತೆ, ಅಸ್ಪೃಶ್ಯತೆ ಇರಬಾರದು. ರಾಷ್ಟ್ರ ಭಕ್ತಿ ಪ್ರೇರಣೆ ಸಿಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ‌ದೇಶಕ್ಕಾಗಿ ಕೆಲಸ ಮಾಡುವ ಒಂದು ದೊಡ್ಡ ಪಡೆಯನ್ನು ನಿರ್ಮಾಣ ಮಾಡಿತು. ನೂರಾರು ಸ್ವಯಂ ಸೇವಕ‌ ಸಂಘಟನೆಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಪ್ರೇರಣೆಯಿಂದ ಹುಟ್ಟಿವೆ.

ಪ್ರಧಾನಮಂತ್ರಿ, ಕೇಂದ್ರ ಸಚಿವರು, ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು. ಇದಕ್ಕಿಂತ ಇನ್ನೇನು ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವಕ್ಕೆ ಯಾವುದು ಶೋಭೆ?

ಒಂದು ಕುಟುಂಬದಲ್ಲಿ ಹುಟ್ಟಿದವರನ್ನೇ ನಾಯಕರಾಗಿ ಮಾಡುವಂತಹ ವಂಶಪಾರಂಪರ್ಯದ ರಾಜನೀತಿ, ಪ್ರಜಾಪ್ರಭುತ್ವಕ್ಕೆ ಶೋಭೆಯೋ, ಕುಟುಂಬದ ಬಡಜನರನ್ನು, ವಿವಿಧ ಜಾತಿಯ ಜನರನ್ನು ಮೇಲಕ್ಕೆ ತಂದು ಅವರಿಗೆ ಉನ್ನತ ಹುದ್ದೆ ಕೊಡುವುದು. ಪ್ರಜಾಪ್ರಭುತ್ವದ ಶೋಭೆನೋ, ಪ್ರಾಕೃತಿಕ ವಿಕೋಪವಾದಾಗ ಜೀವದ ಹಂಗು ತೊರೆದು ಕೆಲಸ ಮಾಡುವಂತಹದ್ದು ನಿಜವಾದ ಶೋಭೆ ತರುತ್ತದೆ.

ಏನೇ ಬಂದರು, ನನಗೆ, ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅಣ್ಣ-ತಮ್ಮಂದಿರಿಗೆ ಇರಲಿ ಅನ್ನೋದು ಶೋಭೆ ತರುವುದಿಲ್ಲ. ಆ ದೃಷ್ಟಿಯಲ್ಲಿ ನಮ್ಮನ್ನು ಚಡ್ಡಿ ಅಂತ ಕರೆಯುತ್ತಿದ್ದಾರೆ. ನಾವು ರಾಷ್ಟ್ರಭಕ್ತಿ ಚಡ್ಡಿಯವರು, ನಾವು ದೇಶ ದ್ರೋಹ ಮಾಡುವವರು ಅಲ್ಲ, ದೇಶ ದ್ರೋಹ ಮಾಡುವವರಿಗೆ ಬೆಂಬಲವನ್ನು ಕೊಡುವವರಲ್ಲ, ಕಾಂಗ್ರೆಸ್‌ನವರು ಮಾಡಲು ಕೆಲಸ ಇಲ್ಲ ಅಂತ ಹೇಳಿ ಚಡ್ಡಿ ಸುಡುತ್ತಿದ್ದಾರೆ.

ಇದನ್ನೂ ಓದಿ: Ramanagara: ಹಳಿತಪ್ಪಿದ ಆಡಳಿತ ವ್ಯವಸ್ಥೆ, ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!

ಹಳೆ ಚಡ್ಡಿ ಕಳಿಸಿ ಅವರಿಗೆ

ಚಡ್ಡಿ ಸುಡಬಹುದು, ಸುಡಲಿ ಆದರೆ ನಮ್ಮ ರಾಷ್ಟ್ರ ಭಕ್ತಿಯ ವಿಚಾರವನ್ನು ಯಾರು ಸುಡಲು ಆಗಲ್ಲ, ರಾಜ್ಯದ ಜನರಿಗೆ ಈಗಾಗಲೇ ಹೇಳಿದ್ದೀವಿ, ಯಾರ‌ದ್ದು ಹಳೇ ಚಡ್ಡಿ ಇದೆ ಅವೆಲ್ಲವನ್ನು ಕಳ್ಸಿ ಅಂಥ, ಕೆಪಿಸಿಸಿ ಕಚೇರಿಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ನಲಪಾಡ್ ಮನೆಗು ಕಳುಹಿಸಬಹುದು, ಯಾರದಾದ್ದರೂ ಹಳೇ ಚಡ್ಡಿ ವೇಸ್ಟ್ ಆಗಿ ಮನೇಲಿ ಬಿದ್ದಿದೆ. ಎಲ್ಲವನ್ನೂ ಪಾರ್ಸೆಲ್ ಮಾಡಿ ಕಳಸಿ. ಅವರು ಚಡ್ಡಿ ಸುಟ್ಕಂಡು ಇರಲಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಖಂಡಿತ ದಡ್ಡರಲ್ಲ

ಸಿದ್ದರಾಮಯ್ಯ ಅವರು ದಡ್ಡರಲ್ಲ ಬಹಳ ಬುದ್ದಿವಂತರು, ಅವರದ್ದು ಓಲೈಕೆ ರಾಜಕಾರಣ, ಹಿಡಿಗಂಟಾಗಿ ಯಾವ ವೋಟು ಸಿಗುತ್ತೆ ಅಂಥ ಅವರಿಗೆ ಗೊತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಟಿಪ್ಪು ಸುಲ್ತಾನ್ ಬಗ್ಗೆ ವ್ಯತ್ಯಾಸ ಗೊತ್ತಿಲ್ಲದೆ ಇರುವಷ್ಟು ದಡ್ಡ ಅಂಥ ಹೇಳಲು ಆಗುತ್ತಾ? ಖಂಡಿತ ಸಿದ್ದರಾಮಯ್ಯ ಅವರು ದಡ್ಡರಲ್ಲ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ, ಈ ರಾಜ್ಯಕ್ಕೆ ಅತ್ಯಂತ ಹೆಚ್ಚು ಕೊಡುಗೆ ಕೊಟ್ಟಿದ್ದು ಅಂಥ ಅವರಿಗೆ ಗೊತ್ತು, ಆದರೂ ಅವರ ಬಾಯಲ್ಲಿ ಟಿಪ್ಪು ಸುಲ್ತಾನ್ ಹೆಸರು ಬರುತ್ತೆ. ಯಾಕೆ ಅಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಟಿಪ್ಪು ಸುಲ್ತಾನ್ ಹೆಸರಿಗೆ ಇರುವಷ್ಟು ವೋಟ್ ಬ್ಯಾಂಕಿಲ್ಲ.‌ ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ದ್ರೋಹಿ ಅಂತ ಅವರಿಗೂ ಚೆನ್ನಾಗಿ ಗೊತ್ತು. ಟಿಪ್ಪು ಹೆಸರಿನಲ್ಲಿ ಒಂದು ಮತೀಯ ವೋಟ್ ಬ್ಯಾಂಕ್ ಇದೆ. ಆ ವೋಟ್ ಬ್ಯಾಂಕ್‌ ದುರಾಸೆಗೆ ಅವರು ಸುಳ್ಳು ಹೇಳ್ತಾರೆ. ಆರ್‌ಎಸ್‌ಎಸ್ ಬಗ್ಗೆ ಆಪಾದನೆ ಮಾಡುವುದು ಆ ವೋಟ್ ಬ್ಯಾಂಕಿಗಾಗಿ ಎಂದು ಕುಟುಕಿದರು.ಸಿದ್ದರಾಮಯ್ಯ ದೇಶ ಒಡೆದ ಜಿನ್ನಾ ಅವರ ಹೆಸರು ಹೇಳಿದ್ರೆ ಆಶ್ಚರ್ಯ ಪಡಬೇಡಿ, ಕುಲಕ್ಕೆ ಮೂಲ ಕೊಡಲಿ ಕಾವು ಅನ್ನೋ ಗಾದೆ ಮಾತಿದೆ. ದೇಶಕ್ಕೆ, ದೇಶ ಒಡೆಯುವ ಸಂಚಿಗೆ ನೀವು ಕೊಡಲಿ ಕಾವು ಆಗಬೇಡಿ ಅಂತ ಹೇಳಿದ್ದಿನಿ. ಅವರು ಈಗ ನಡೆದುಕೊಳ್ಳುತ್ತಿರುವ ರೀತಿ, ದೇಶ ಒಡೆಯುವಂತಹ ಕೊಡಲಿಗೆ ಕಾವು ಆಗುತ್ತಿದ್ದಾರೆ ಎಂದು ಟೀಕಿಸಿದರು.
Published by:Mahmadrafik K
First published: