• Home
  • »
  • News
  • »
  • state
  • »
  • ಕೋವಿಡ್ ಸೆಂಟರ್​ಗಳಾಗಿದ್ದ ಹಾಸ್ಟೆಲ್​ಗಳಿಗೆ ತೆರಳಲು ವಿದ್ಯಾರ್ಥಿಗಳ ಹಿಂದೇಟು; ಬೆಂಗಳೂರು ವಿವಿ ವಸತಿ ನಿಲಯ ಖಾಲಿ ಖಾಲಿ

ಕೋವಿಡ್ ಸೆಂಟರ್​ಗಳಾಗಿದ್ದ ಹಾಸ್ಟೆಲ್​ಗಳಿಗೆ ತೆರಳಲು ವಿದ್ಯಾರ್ಥಿಗಳ ಹಿಂದೇಟು; ಬೆಂಗಳೂರು ವಿವಿ ವಸತಿ ನಿಲಯ ಖಾಲಿ ಖಾಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಸ್ಟೆಲ್ ನಲ್ಲಿ ಕೋವಿಡ್ ಮುಂಚೆ ಕೊಠಡಿಯಲ್ಲಿ ಮೊದಲು ಮೂರು-ನಾಲ್ಕು ವಿದ್ಯಾರ್ಥಿಗಳಿಗೆ ವಾಸ್ತವ್ಯವಿರುತ್ತಿತ್ತು. ಇದೀಗ ಕೊಠಡಿಯಲ್ಲಿ ಒಬ್ಬರು ಇಲ್ಲವೇ  ಇಬ್ಬರಿಗೆ ಮಾತ್ರ ಅವಕಾಶವಿದೆ. ಆದರೆ ಬೆಂಗಳೂರು ವಿವಿಯ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಕೊಠಡಿಗೆ ಒಬ್ಬರಿಗೆ ಮಾತ್ರ ಅವಕಾಶವಿದ್ದು ಊಟದ ವ್ಯವಸ್ಥೆಯನ್ನು ಮಾಡಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಪದವಿ ಕಾಲೇಜುಗಳ ಜೊತೆ ಹಾಸ್ಟೆಲ್​ಗಳು ಆರಂಭಗೊಂಡಿದ್ದರೂ ವಿದ್ಯಾರ್ಥಿಗಳಿಲ್ಲದೇ ಖಾಲಿ‌ ಖಾಲಿ ಹೊಡೆಯುತ್ತಿವೆ. ಇದರ ಜೊತೆಗೆ ಸರ್ಕಾರದ ಈ ಮಾರ್ಗಸೂಚಿಯಿಂದಾಗಿ ಕೊರೋನಾ ಸೆಂಟರ್, ಆರೈಕೆ ಕೇಂದ್ರಗಳಾಗಿದ್ದ ಹಾಸ್ಟೆಲ್​ಗಳಿಗೆ ಹೋಗಲು ವಿದ್ಯಾರ್ಥಿಗಳು ಇನ್ನಷ್ಟು ಹಿಂದೇಟು ಹಾಕುತ್ತಿದ್ದಾರೆ.


ಕೊರೋನಾ‌ ಕೇಸ್ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ ನವೆಂಬರ್ 17ರಿಂದ ರಾಜ್ಯದಾದ್ಯಂತ ಕಾಲೇಜು ಪುನರ್ ಆರಂಭ ಮಾಡಲಾಯಿತು. ಆದರೆ ಇದಾಗಿ ಐದು ದಿನಗಳೇ‌ ಕಳೆದರೂ ಕಾಲೇಜು ಕಡೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ. ಇನ್ನು ಕಾಲೇಜಿಗೆ ಬಂದ ಅಲ್ಪಸ್ವಲ್ಪ ವಿದ್ಯಾರ್ಥಿಗಳು ಈಗಿನ ಸರ್ಕಾರದ ಮಾರ್ಗಸೂಚಿ ನೋಡಿ ಭಯಗೊಂಡಿದ್ದಾರೆ. ಕಾಲೇಜಿಗೆ ಹೋಗಿ ಬರಬಹುದು. ಆದರೆ, ಕೋವಿಡ್ ಸೆಂಟರ್, ಆರೈಕೆ ಕೇಂದ್ರವಾಗಿದ್ದ ಹಾಸ್ಟೆಲ್​ಗಳಲ್ಲಿ ಮತ್ತೆ ವಾಸ್ತವ್ಯ ಹೂಡಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ‌. ಕೋವಿಡ್ ಸೆಂಟರ್, ಆರೈಕೆ ಕೇಂದ್ರಗಳಾಗಿದ್ದ ಹಾಸ್ಟೆಲ್​ಗಳು, ಅದರಲ್ಲಿದ್ದ ಹಾಸಿಗೆ, ಬೆಡ್​ಶೀಟ್ ಅನ್ನು ಸ್ಯಾನಿಟೈಸ್ ಮಾಡಿದ್ದರೂ ಬಳಸಬಹುದು ಎಂಬ ಸೂಚನೆ ಇದೀಗ ಹಾಸ್ಟೆಲ್‌ಗೆ‌ ಬಂದ ಬಳಿಕ ವಿದ್ಯಾರ್ಥಿಗಳಿಗೆ ಭಯ ಬೀಳುತ್ತಿದ್ದಾರೆ.


ಸೋಂಕಿತರು ಬಳಸಿದ ಹೊದಿಕೆ, ಬೆಡ್​ಶೀಟ್​, ದಿಂಬು ಮರುಬಳಕೆ ಮಾಡಬೇಕು.‌ ಸೋಪು, ಬಿಸಿನೀರಿನಿಂದ ತೊಳೆದು ಮರುಬಳಕೆ ಮಾಡಿ, ಡೆಟಾಲ್, ಸ್ಯಾವಲಾನ್ ಮಿಶ್ರಿತ ಬಿಸಿನೀರು ಬಳಸಿ ಎಂದು ಸಮಾಜ ಕಲ್ಯಾಣ ಇಲಾಖೆಯಿಂದ ಆದೇಶಕ್ಕೆ‌ ರಾಜ್ಯದಲ್ಲಿ ವಿದ್ಯಾರ್ಥಿಗಳು ಒಪ್ಪದೇ ಹಾಸ್ಟೆಲ್ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾಲೇಜು ಆರಂಭವಾದ ನಂತರ  ರಾಜಧಾನಿಯಲ್ಲಿ ಐದು ದಿನದಲ್ಲಿ 168 ಕೊರೋನಾ ಕೇಸ್​ಗಳಲ್ಲಿ 117 ವಿದ್ಯಾರ್ಥಿಗಳಿಗೆ ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 51 ಕಾಲೇಜು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.


ನ.1ರಿಂದ ನ.21ರವರೆಗೆ 500ಕ್ಕೂ ಹೆಚ್ಚು ಕಾಲೇಜಿನಲ್ಲಿ 38,653 ಜನರಿಗೆ ಟೆಸ್ಟ್ ಮಾಡಿದ್ದು, ಇದರಲ್ಲಿ 26,205 ವಿದ್ಯಾರ್ಥಿಗಳು, 5,378 ಉಪನ್ಯಾಸಕರು, 2680 ಕಾಲೇಜು ಸಿಬ್ಬಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಕೊರೋನಾ ಗುಮ್ಮದಿಂದಾಗಿ ಬೆಂಗಳೂರು ವಿವಿ ಹಾಸ್ಟೆಲ್ ಖಾಲಿ ಖಾಲಿ ಹೊಡೆಯುತ್ತಿದೆ. ಕಡಿಮೆ ಸಂಖ್ಯೆಯಲ್ಲಿ ಆಗಮಿಸಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೆಡ್ ವ್ಯವಸ್ಥೆಯೇ ಇಲ್ಲ. ಕಳೆದ ವರುಷ ನೀಡಿದ ಬೆಡ್ ಗಳ ಬಳಕೆ ಮಾಡಲಾಗುತ್ತಿದೆ. ತಮ್ಮ‌ ಸ್ವಂತ ಖರ್ಚಿನಲ್ಲಿ ಬೆಡ್ ಶೀಟ್, ಬ್ಲಾಂಕೆಟ್,  ತಂದಿರುವ ವಿದ್ಯಾರ್ಥಿಗಳು, ಹಾಸ್ಟೆಲ್ ತೆರೆದರೂ ಊಟದ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ.


ಇದನ್ನು ಓದಿ: ಐಎಂಎ ಪ್ರಕರಣ; ಸಿಬಿಐ ವಶಕ್ಕೆ ಮಾಜಿ ಸಚಿವ ರೋಷನ್ ಬೇಗ್; 14 ದಿನಗಳ ಕಾಲ ನ್ಯಾಯಾಂಗ ಬಂಧನ


ಡಿ.1ರವರೆಗೆ ಪಿಜಿ ವಿದ್ಯಾರ್ಥಿಗಳು ಊಟದ ವ್ಯವಸ್ಥೆ ತಾವೇ ಮಾಡಿಕೊಳ್ಳಬೇಕಿದೆ ಎಂದು ವಿವಿ ಪಿಜಿ ವಿದ್ಯಾರ್ಥಿ ಧನಂಜಯ ಪ್ರತಿಕ್ರಿಯೆ ನೀಡುತ್ತಾರೆ. ಹಾಸ್ಟೆಲ್ ನಲ್ಲಿ ಕೋವಿಡ್ ಮುಂಚೆ ಕೊಠಡಿಯಲ್ಲಿ ಮೊದಲು ಮೂರು-ನಾಲ್ಕು ವಿದ್ಯಾರ್ಥಿಗಳಿಗೆ ವಾಸ್ತವ್ಯವಿರುತ್ತಿತ್ತು. ಇದೀಗ ಕೊಠಡಿಯಲ್ಲಿ ಒಬ್ಬರು ಇಲ್ಲವೇ  ಇಬ್ಬರಿಗೆ ಮಾತ್ರ ಅವಕಾಶವಿದೆ. ಆದರೆ ಬೆಂಗಳೂರು ವಿವಿಯ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಕೊಠಡಿಗೆ ಒಬ್ಬರಿಗೆ ಮಾತ್ರ ಅವಕಾಶವಿದ್ದು ಊಟದ ವ್ಯವಸ್ಥೆಯನ್ನು ಮಾಡಿದೆ.


ಒಟ್ಟಿನಲ್ಲಿ ಕೊರೋನಾ ಗುಮ್ಮ, ಕೋವಿಡ್ ಕೇರ್ ಸೆಂಟರ್ ಕುರಿತು ಸರ್ಕಾರದ ಮಾರ್ಗಸೂಚಿಯಿಂದ ಕಾಲೇಜಿಗೆ ಬರುವವರ ಸಂಖ್ಯೆ ಇನ್ನಷ್ಟು ಇಳಿಮುಖ ಕಂಡಿದೆ.

Published by:HR Ramesh
First published: