Hijab Controversy: 'ಶ್ರೀರಾಮ್' ಮಧ್ಯೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಯುವತಿಯ ಅದೃಷ್ಟವೇ ಬದಲಾಗಿ ಹೋಯ್ತು!

ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಎದುರು ನಿಂತು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಜಮಿಯತ್ ಉಲಾಮಾ-ಇ-ಹಿಂದ್ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. 

ಘೋಷಣೆ ಕೂಗಿದ ವಿದ್ಯಾರ್ಥಿನಿ

ಘೋಷಣೆ ಕೂಗಿದ ವಿದ್ಯಾರ್ಥಿನಿ

 • Share this:
  ಮಂಡ್ಯ: ರಾಜ್ಯದಲ್ಲಿ (state) ಈಗ ಹಿಜಾಬ್ ವಿವಾದ (Hijab Controversy) ತಾರಕಕ್ಕೇರಿದೆ. ಹಿಜಾಬ್ ವಿವಾದ ಈಗ ಕೇವಲ ರಾಜ್ಯವಷ್ಟೇ ಅಲ್ಲದೇ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ದಿಯಾಗಿ ಮಾರ್ಪಟ್ಟಿದೆ. ರಾಜಕೀಯ ನಾಯಕರ ವಾದ-ವಿವಾದ, ಧರ್ಮದ ಕಿಡಿ ಹೊತ್ತಿಸಿದೆ. ಇತ್ತ ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕೂಗು ತೀವ್ರಗೊಂಡಿದೆ. ಯುವಕರು ಕೇಸರಿ ಶಾಲು ಧರಿಸಿ ಹಿಜಾಬ್ ನಿಷೇಧಕ್ಕೆ ಪಟ್ಟು ಹಿಡಿದಿದ್ದಾರೆ. ವಿವಾದ ಹೆಚ್ಚುತ್ತಿರುವ ನಡುವೆಯೇ ನಿನ್ನೆಯಷ್ಟೇ ಮಂಡ್ಯದಲ್ಲಿ ಹಿಜಾಬ್ (Hijab) ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಕೇಸರಿ ಶಾಲು ಹಾಕಿದ್ದ ಹುಡುಗರ ವಿರುದ್ಧ ಸೆಟೆದು ನಿಂತಿದ್ದಳು. ಮಂಡ್ಯದ (Mandya) ಪಿಇಎಸ್ (PES) ಕಾಲೇಜಿನಲ್ಲಿ (college) ಹಿಜಾಬ್  ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಯೊಬ್ಬಳ ಎದುರು ನಿಂತ ಯುವಕರ ಗುಂಪೊಂದುಜೈ ಶ್ರೀರಾಮ್’ (Jai Shri Ram) ಎಂದು ಘೋಷಣೆ ಕೂಗಿದ್ದರು. ಇದರಿಂದ ಕೋಪಗೊಂಡಿದ್ದ ವಿದ್ಯಾರ್ಥಿನಿ ಯುವಕರ ಗುಂಪಿನ ಎದುರು ನಿಂತು ಕೈ ಎತ್ತಿಅಲ್ಲಾಹು ಅಕ್ಬರ್’ (Allah Akbar) ಎಂದು ಘೋಷಣೆ ಕೂಗಿದ್ದಾಳೆ. ಈ ವಿಡಿಯೋ ವೈರಲ್ ಆಗುವ ಮೂಲಕ ಸಾಕಷ್ಟು ಸಂಚಲನ ಮೂಡಿಸಿತ್ತು.

   ವಿದ್ಯಾರ್ಥಿನಿಗೆ ಜಮಿಯತ್ ಉಲಾಮಾ-ಇ-ಹಿಂದ್ 5 ಲಕ್ಷ ರೂ. ಬಹುಮಾನ ಘೋಷಣೆ

  ಈಗ ವಿದ್ಯಾರ್ಥಿನಿಗೆ ದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಗಳಲ್ಲಿ ಒಂದಾಗಿರುವ ಜಮಿಯತ್ ಉಲಾಮಾ-ಇ-ಹಿಂದ್ 5 ಲಕ್ಷ ರೂ. ಬಹುಮಾನ ಘೋಷಿಸಿದೆ. ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಎದುರು ನಿಂತು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಭಾರತದ ಪ್ರಮುಖ ಇಸ್ಲಾಮಿಕ್ ಸಂಘಟನೆಗಳಲ್ಲಿ ಒಂದಾಗಿರುವ ಜಮಿಯತ್ ಉಲಾಮಾ-ಇ-ಹಿಂದ್ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಈ ಬಗ್ಗೆ ಮಾತನಾಡಿದ್ದ ವಿದ್ಯಾರ್ಥಿನಿ ತನಗೆ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ತನ್ನ ಸಹಪಾಠಿಗಳು ಮತ್ತು ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಳು.

  ಜಮಿಯತ್ ಉಲಾಮಾ ಇ ಹಿಂದ್ ಸಂಘಟನೆ ಟ್ವೀಟ್‌

  ಈ ಬಗ್ಗೆ ಜಮಿಯತ್ ಉಲಾಮಾ ಇ ಹಿಂದ್ ಸಂಘಟನೆ ಟ್ವೀಟ್‌ ಮಾಡಿದ್ದು, ಹಿಜಾಬ್ ಕುರಿತು ಕರ್ನಾಟಕದಲ್ಲಿ ಭುಗಿಲೆದ್ದಿರುವ ತೀವ್ರ ಪ್ರತಿಭಟನೆಗಳ ನಡುವೆಯೂ ತನ್ನ ಸಾಂವಿಧಾನಿಕ ಮತ್ತು ಧಾರ್ಮಿಕ ಹಕ್ಕನ್ನು ಪಡೆಯಲು ಬೀಬಿ ಮುಸ್ಕಾನ್ ಖಾನ್ ಧೈರ್ಯ ಮಾಡಿದ್ದಾರೆ ಎಂದು ಬರೆದುಕೊಂಡಿದೆ.


  ಇದನ್ನೂ ಓದಿ: ಮಹಿಳೆಯರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ; ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ


  ಕೆ‌ಎಂಸಿಸಿಯಿಂದ ವಿದ್ಯಾರ್ಥಿನಿಗೆ ಐಕಾನ್ ಲೇಡಿ ಆಫ್ ಹಿಜಾಬ್ ಬಿರುದು

  ಇತ್ತ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ವಿದ್ಯಾರ್ಥಿನಿಯನ್ನು ಸನ್ಮಾನಿಸಿರುವ ಆಲ್ ಇಂಡಿಯಾ ಕೆಎಂಸಿಸಿ ಅಧ್ಯಕ್ಷ ನೌಷದ್, ಆಕೆಗೆ ನೆನಪಿನ ಕಾಣಿಕೆ ನೀಡಿದ್ದಾರೆ. ಕೆ‌ಎಂಸಿಸಿ ಆಕೆಗೆ ಐಕಾನ್ ಲೇಡಿ ಆಫ್ ಹಿಜಾಬ್ ಎಂದು ಬಿರುದು ನೀಡಿದೆ.

  ‘ಜೈ ಶ್ರೀರಾಮ್’ ಘೋಷಣೆ ಕೂಗಿದವರ ವಿರುದ್ಧ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿರುವ ವಿದ್ಯಾರ್ಥಿನಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಹೊರ ಹೊಮ್ಮಿದ್ದಾಳೆ.

  ಅಲ್ಲಾಹು ಅಕ್ಬರ್ ಘೋಷಣೆ  ಕೂಗಿದ ವಿದ್ಯಾರ್ಥಿನಿ

  ಇನ್ನು ಮಂಡ್ಯದಲ್ಲಿ ವಿದ್ಯಾರ್ಥಿನಿಯ ಸುತ್ತಲೂ ಕೇಸರಿ ಶಾಲು ಹೊದ್ದು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದ ಹುಡುಗರು ಸುತ್ತುವರಿದಿದ್ದರು. ಈ ಘಟನೆಯ ವೈರಲ್ ವಿಡಿಯೋದಲ್ಲಿ ಹುಡುಗಿ ಅಲ್ಲಾಹು ಅಕ್ಬರ್ ಎಂದು ಕೂಗುವ ಮೂಲಕ ಪ್ರತಿಕ್ರಿಯಿಸುತ್ತಾ ಕಾಲೇಜಿನೊಳಗೆ ಹೊರಟು ಹೋಗಿದ್ದಾಳೆ. ಹಾಗೇ ಆಕೆ ತಾನು ಹಿಜಾಬ್ ಧರಿಸುವ ಹಕ್ಕನ್ನು ಸಮರ್ಥಿಸಿಕೊಂಡಿದ್ದನ್ನು ವಿಡಿಯೋದಲ್ಲಿ ನೋಡಬಹುದು.

  ಇದನ್ನೂ ಓದಿ: ಹೈಕೋರ್ಟ್ ನಲ್ಲಿ ಹಿಜಾಬ್ ಕುರಿತು ಇಂದು ಮಹತ್ವದ ವಿಚಾರಣೆ; ಶಾಂತಿ ಕಾಪಾಡುವಂತೆ ಸಿಎಂ ಮನವಿ

  ಈ ಮಧ್ಯೆ ಹಿಜಾಬ್ ವಿವಾದ ಭುಗಿಲೆದ್ದಿದ್ದು, ರಾಜ್ಯದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ಶಾಲಾ-ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಗಳು ಮತ್ತು ಕರ್ನಾಟಕದ ಜನರು ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ನಾನು ಮನವಿ ಮಾಡುತ್ತೇನೆ. 3 ದಿನಗಳವರೆಗೆ ಎಲ್ಲಾ ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದೇನೆ. ಸಂಬಂಧಪಟ್ಟ ಎಲ್ಲರೂ ಸಹಕರಿಸಿ ಎಂದು ಟ್ವೀಟ್ ಮಾಡಿದ್ದರು. ಇನ್ನೂ 2 ದಿನಗಳ ಕಾಲ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.
  Published by:renukadariyannavar
  First published: