Petrol Bunk ಮಾಲೀಕರಿಂದ ನಾಳೆ ಮುಷ್ಕರ! ವಾಹನ ಸವಾರರೇ ಈ ಸುದ್ದಿಯನ್ನು ತಪ್ಪದೇ ಓದಿ

ಯಾಕೆಂದ್ರೆ ನಾಳೆ ಪೆಟ್ರೋಲ್ ಬಂಕ್ ಮಾಲೀಕರು (Petrol Bunk Owner) ಮುಷ್ಕರ (Strike) ನಡೆಸೋದಕ್ಕೆ ಮುಂದಾಗಿದ್ದಾರೆ. ಹಾಗಿದ್ರೆ ನಾಳೆ ಪೆಟ್ರೋಲ್, ಡೀಸೆಲ್ ಸಿಗುವುದಿಲ್ವಾ? ಈ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರು ಹೇಳೋದೇನು? ಈ ಬಗ್ಗೆ ಇಲ್ಲಿದೆ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ವಾಹನ ಸವಾರರೇ (Vehicles Riders), ಈ ಸುದ್ದಿಯನ್ನು (News) ನೀವು ಮಿಸ್ (Miss) ಮಾಡದೇ ಓದಬೇಕು. ನಿಮ್ಮ ಕಾರು (Car), ಬೈಕ್ (Bike) ಇತ್ಯಾದಿ ವಾಹನಗಳಿಗೆ ಇಂದೇ ಪೆಟ್ರೋಲ್ (Petrol) ಅಥವಾ ಡೀಸೆಲ್ (Diesel) ತುಂಬಿಸಿ ಇಟ್ಟುಕೊಂಡರೆ ಉತ್ತಮ. ಇಂದು ವೆಹಿಕಲ್ ಟ್ಯಾಂಕ್‌ನಲ್ಲಿ (Vehicle Tank) ಸ್ವಲ್ಪ ಪೆಟ್ರೋಲ್, ಡೀಸೆಲ್ ಇದೆ, ನಾಳೆ ತುಂಬಿಕೊಂಡ್ರೆ ಆಯ್ತು ಅಂದ್ರೆ ನಾಳೆ ನೀವು ಕಷ್ಟಪಡೋದು ಫಿಕ್ಸ್. ಯಾಕೆಂದ್ರೆ ನಾಳೆ ಪೆಟ್ರೋಲ್ ಬಂಕ್ ಮಾಲೀಕರು (Petrol Bunk Owner) ಮುಷ್ಕರ (Strike) ನಡೆಸೋದಕ್ಕೆ ಮುಂದಾಗಿದ್ದಾರೆ. ಯಾಕೆಂದ್ರೆ ಕೇಂದ್ರ ಸರ್ಕಾರದ (Central Government) ಟ್ಯಾಕ್ಸ್ (Tax) ಕಡಿತದ ವಿರುದ್ಧ ತಿರುಗಿ ಬಿದ್ದಿರುವ ಪೆಟ್ರೋಲ್ ಬಂಕ್ ಮಾಲೀಕರು ನಾಳೆ ಮುಷ್ಕರಕ್ಕೆ ಕರೆಕೊಟ್ಟಿದ್ದಾರೆ. ಆದರೆ ನಾಳೆ ಒಂದು ದಿನದ ಮುಷ್ಕರದಿಂದ ವಾಹನ ಸವಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಅಂತ ಪೆಟ್ರೋಲ್ ಬಂಕ್ ಮಾಲೀಕರು ಅಭಯ ನೀಡಿದ್ದಾರೆ.  

ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಟ್ಯಾಕ್ಸ್ ಕಡಿತ ಮಾಡಿರುವ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರು, ನಾಳೆ ರಾಜಧಾನಿ ಬೆಂಗಳೂರಲ್ಲಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ನಾಳೆ ವಾಹನ ಸವಾರರು ಪರದಾಡುವುದು ಗ್ಯಾರಂಟಿಯಾಗಿದೆ.

ಡೀಲರ್‌ಗಳಿಗೆ 7ರಿಂದ 8 ಲಕ್ಷ ರೂಪಾಯಿ ನಷ್ಟ

ಕೇಂದ್ರ ಸರ್ಕಾರ ಎರಡು ಬಾರಿ ಟ್ಯಾಕ್ಸ್ ಕಡಿತ ಗೊಳಿಸಿದೆ. ಆದರೆ ಪ್ರತಿ ಬಾರಿ ಮುನ್ನ ಖರೀದಿಸಿಟ್ಟ ತೈಲಕ್ಕೆ ನೀಡಿದ ಟ್ಯಾಕ್ಸ್ ಮರುಪಾವತಿ ಮಾಡಿಲ್ಲ. ಹೀಗಾಗಿ ಪ್ರತೀ ಡೀಲರ್‌ಗಳಿಗೆ 7 ರಿಂದ 8 ಲಕ್ಷ ನಷ್ಟವಾಗಿದೆ ಅಂತ ಪೆಟ್ರೋಲ್ ಬಂಕ್ ಮಾಲೀಕರು ಆರೋಪಿಸಿದ್ದಾರೆ.

ಇದನ್ನೂ ಓದಿ: Petrol Price: ಇಂದು ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕ; ನಿಮ್ಮ ನಗರದ ತೈಲ ದರ ಇಲ್ಲಿದೆ

ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆಗಳು ಏನು?

ಬೇಡಿಕೆಗೆ ತಕ್ಕಂತೆ ಬಿಪಿಸಿಎಲ್ ಮತ್ತು ಹೆಚ್ಚಿಸಿಎಲ್ ಕಂಪನಿಗಳು ಪೆಟ್ರೋಲ್, ಡಿಸೇಲ್ ಪೂರೈಕೆ ಮಾಡುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅಗತ್ಯಕ್ಕೆ ಅನುಗುಣವಾಗಿ ತೈಲ ಪೂರೈಕೆ ಮಾಡುವಂತೆ ಆಗ್ರಹಿಸಿದೆ. ತೈಲ ಕಂಪನಿಗಳು ಮುಂಗಡ ಕಟ್ಟಿದ ಟ್ರ್ಯಾಕ್ಸ್ ಮರುಪಾವತಿ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದೆ.

ನಾಳೆ ವಾಹನ ಸವಾರರು ಪರದಾಡೋದು ಗ್ಯಾರಂಟಿ

ಈ ಎಲ್ಲಾ ಕಾರಣಗಳಿಂದ ನಾಳೆ ಮುಷ್ಕರಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಮುಂದಾಗಿದ್ದು, ತೈಲ ಖರೀದಿ ಕಂಪ್ಲಿಟ್ ಬಂದ್ ಆಗಲಿದೆ. ಇದರಿಂದಾಗಿ ನಾಳೆ ಪೆಟ್ರೋಲ್ ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಹೀಗಾದರೆ ನಾಳೆ ವಾಹನ ಸವಾರರು ಪರದಾಡೋದು ಗ್ಯಾರೆಂಟಿ ಎನ್ನುವಂತಾಗಿದೆ.

ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ಮಾಲೀಕರ ಅಭಯ

ಪೆಟ್ರೋಲ್ ಬಂಕ್‌ನಲ್ಲಿ ಸ್ಟಾಕ್ ಇರೋ ಪೆಟ್ರೋಲ್, ಡಿಸೇಲ್ ಮಾತ್ರ ಪೂರೈಕೆ ಮಾಡಲಾಗುತ್ತೆ. ಬಂಕ್‌ಗಳಲ್ಲಿ ಸ್ಟಾಕ್ ಇಲ್ಲ ಅಂದರೆ ಮಾತ್ರ ತೈಲ ಸಿಗೋದಿಲ್ಲ. ಪುತಿ ಬಂಕ್‌ನಲ್ಲಿ ಎರಡರಿಂದ ಮೂರು ದಿನಕ್ಕೆ ಆಗುವಷ್ಟು ತೈಲ ಸ್ಟಾಕ್ ಇರುತ್ತದೆ. ಹಾಗಾಗಿ ನಾಳಿನ ಒಂದು ದಿನದ ಮುಷ್ಕರದಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಅಂತ ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.

ಇದನ್ನೂ ಓದಿ: Anubhava Mantapa: ಯಾವ ಆಧಾರದಲ್ಲಿ ಲಿಂಗಾಯತರು, ಮುಸ್ಲಿಂರು ಅಣ್ತಮ್ಮಂದಿರು ಅಂತಾ ಹೇಳಿದ್ದರಿ? ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಶ್ನೆ

ನಾಳಿನ ಮುಷ್ಕರಕ್ಕೆ ಯಾರ್ಯಾರ ಬೆಂಬಲ ಇದೆ?

ನಾಳಿನ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರಕ್ಕೆ ಬೆಂಗಳೂರಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಿದ್ದುದೆ. ಜೊತೆಗೆ ಶೆಲ್, ನಾಯರಾ ಖಾಸಗಿ ಪೆಟ್ರೋಲಿಯಂ ಕಂಪನಿಗಳೂ ಭಾಗಿಯಾಗಲಿವೆ.
Published by:Annappa Achari
First published: