ಬೆಂಗಳೂರಿನ ಬಾರ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ

news18
Updated:August 29, 2018, 11:32 PM IST
ಬೆಂಗಳೂರಿನ ಬಾರ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ
news18
Updated: August 29, 2018, 11:32 PM IST
ನ್ಯೂಸ್ 18 ಕನ್ನಡ 

ಬೆಂಗಳೂರು ( ಆಗಸ್ಟ್ 29) :  ರಾಜಧಾನಿ ಬೆಂಗಳೂರಿನಲ್ಲಿ ತಂಬಾಕು ಪದಾರ್ಥಗಳ ಸೇವನೆ ಮತ್ತು ಧೂಮಪಾನವನ್ನು ನಿಷೇಧಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಪಾಲಿಕೆ ನಿರ್ಧರಿಸಿದೆ.

ಧೂಮಪಾನ ಮಾಡದವರನ್ನು ಮತ್ತು ಮಹಿಳೆಯರು ಹಾಗೂ ಮಕ್ಕಳನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸಲು ಸ್ಮೋಕ್ ಫ್ರೀ ಬೆಂಗಳೂರು ಅಭಿಯಾನಕ್ಕೆ ಬಿಬಿಎಂಪಿ ಚಾಲನೆ ನೀಡಿದೆ. ಕ್ಲಬ್, ಬಾರ್, ಹೋಟೆಲ್ ಮತ್ತು ರೆಸ್ಟೋರೆಂಟ್, ರಸ್ತೆ ಬದಿಯ ಅಂಗಡಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾರಾಟ, ಸರಬರಾಜು ಹಾಗೂ ಧೂಮಪಾನ ನಿಷೇಧಿಸಲಾಗಿದೆ.

ಈ ಕುರಿತು ಬಿಬಿಎಂಪಿ ಅಯುಕ್ತ ಮಂಜುನಾಥ ಪ್ರಸಾದ್ ಅವರು ಸುತ್ತೋಲೆ ಹೊರಡಿಸಿದ್ದು, ಕಾನೂನು ಉಲ್ಲಂಘಿಸುವ ಬಾರ್, ರೆಸ್ಟೋರೆಂಟ್ ಗಳ ಲೈಸೆನ್ಸ್ ರದ್ದು ಮಾಡುವುದಾಗಿ ಹೇಳಿದ್ದಾರೆ. ಕರ್ನಾಟಕ ಧೂಮಪಾನ ನಿಷೇಧ ಕಾಯ್ದೆ ಹಾಗೂ ಕೊಟ್ಪಾ ಕಾಯ್ದೆಯ ಸೆಕ್ಷನ್ ನಾಲ್ಕರ ಅಡಿಯಲ್ಲಿ ಅನಧಿಕೃತವಾಗಿ ಮಾರಾಟ ಮಾಡಿದ್ರೆ ಕ್ರಮ ಕೈಗೊಳ್ಳುವ ಅವಕಾಶವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮೂವತ್ತಕ್ಕಿಂತ ಹೆಚ್ಚು ಆಸನ ವ್ಯವಸ್ಥೆ ಇರುವ ಬಾರ್, ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ವಲಯ ನಿರ್ಮಿಸಿ ನಿರ್ಬಂಧನೆಗಳನ್ನು ಅನುಸರಿಸಿ ಧೂಮಪಾನ ಮಾಡಬಹುದು.ಆದರೆ ಮುಂಚಿತವಾಗಿ ಪಾಲಿಕೆ ಆರೋಗ್ಯ ಇಲಾಖೆಯಡಿ ರಚಿಸಿರುವ ತಂಬಾಕು ನಿಯಂತ್ರಣ ಕೋಶ" ದಿಂದ ಅನುಮತಿ ಪಡೆದಿರಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.ಹೋಟೆಲ್, ಬಾರ್ ಎಂಡ್ ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ವಲಯ ಸ್ಥಾಪನೆಗೆ ಪಾಲಿಕೆ ಅನುಮತಿ ಖಡ್ಡಾಯ. ಬಿಬಿಎಂಪಿಯ ಆರೋಗ್ಯ ಇಲಾಖೆಯಲ್ಲಿನ ತಂಬಾಕು ನಿಯಂತ್ರಣ ಕೋಶದಿಂದ ಅನುಮತಿ ಪಡೆಯುವುದು ಅಗತ್ಯ. ಅನಧಿಕೃತವಾಗಿ ಧೂಮಪಾನ ವಲಯಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ ಕಮಿಷನರ್ ಮಂಜುನಾಥ್ ಪ್ರಸಾದ್
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ