HOME » NEWS » State » STRICT ACTION AGAINST THOSE WHO SPEAK AGAINST BJP PARTY MINISTER R ASHOK WARNS MAK

ಪಕ್ಷದ ಶಿಸ್ತುಕ್ರಮ ಉಲ್ಲಂಘಿಸಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ; ಸಚಿವ ಆರ್​. ಅಶೋಕ್​ ಎಚ್ಚರಿಕೆ

ಯಾರಿಗೇ ಏನೇ ಅಸಮಾಧಾನವಿದ್ದರೂ ಪಕ್ಷದ ಚೌಕಟ್ಟಿನೊಳಗೆ ಮಾತನಾಡಬೇಕು. ವರಿಷ್ಟರ ಗಮನಕ್ಕೆ ತರಬೇಕು. ಶಿಸ್ತು ಉಲ್ಲಂಘಿಸಿ ಮಾತನಾಡುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆರ್​. ಅಶೋಕ್​ ತಿಳಿಸಿದ್ದಾರೆ.

news18-kannada
Updated:January 6, 2021, 3:01 PM IST
ಪಕ್ಷದ ಶಿಸ್ತುಕ್ರಮ ಉಲ್ಲಂಘಿಸಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ; ಸಚಿವ ಆರ್​. ಅಶೋಕ್​ ಎಚ್ಚರಿಕೆ
ಆರ್ ಅಶೋಕ್.
  • Share this:
ಬೆಂಗಳೂರು (ಜನವರಿ 06); ಬಿಜೆಪಿ ಪಕ್ಷದ ಶಿಸ್ತುಕ್ರಮವನ್ನು ಉಲ್ಲಂಘಿಸಿ ಮಾತನಾಡುವ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಕೋರ್​ ಕಮಿಟಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಆರ್​. ಅಶೋಕ್​ ಪಕ್ಷದ ಎಲ್ಲಾ ಶಾಸಕರಿಗೂ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ಹಿರಿಯ ಶಾಸಕ ಹಾಗೂ ಮಾಜಿ ಸಚಿವರಾದ ಬಸನಗೌಡ ಪಾಟೀಲ ಯತ್ನಾಳ್ ಆಗಿಂದಾಗ್ಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಯತ್ನಾಳ್ ಬೆನ್ನಿಗೆ ಕೆ.ಎಸ್​. ಈಶ್ವರಪ್ಪನಂತಹ ಹಿರಿಯ ನಾಯಕರು ಸಹ ಬಿಎಸ್​ವೈ ವಿರುದ್ಧ ಆಗಿಂದಾಗ್ಗೆ ತಮ್ಮ ಬೇಸರವನ್ನು ಮುಕ್ತವಾಗಿ ಹೊರಹಾಕುತ್ತಲೇ ಇದ್ದಾರೆ. ಪಕ್ಷದೊಳಗಿನ ಈ ಬೆಳವಣಿಗೆ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವುದಂತೂ ಸತ್ಯ. ಹೀಗಾಗಿ ಸಚಿವ ಆರ್​. ಅಶೋಕ್ ಎಲ್ಲಾ ಶಾಸಕರಿಗೂ ಎಚ್ಚರಿಕಯೊಂದನ್ನು ರವಾನಿಸಿದ್ದಾರೆ.

ಈ ಸಂಬಂಧ ಇಂದು ಮಾತನಾಡಿರುವ ಸಚಿವ ಆರ್​. ಅಶೋಕ್​, "ಎರಡು ದಿನಗಳ ಕಾಲ ಸಿಎಂ ಶಾಸಕರ ಜೊತೆಗೆ ಸಭೆ ನಡೆಸಿದ್ದಾರೆ. ಎಲ್ಲಾ ಶಾಸಕರ ಜೊತೆಗೆ ಸಿಎಂ ಮಾತನಾಡಿದ್ದಾರೆ. ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಇದ್ರೆ ಹೇಳಿ ಎಂದು ಶಾಸಕರುಗಳನ್ನ ಸಿಎಂ ಕೇಳಿಕೊಂಡಿದ್ದಾರೆ. ನಾನು ಸೇರಿದಂತೆ ಪಕ್ಷದ ಮೇಲೆ ಏನೇ ಆರೋಪ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಹೊರಗಡೆ ಮಾತನಾಡಿದ್ರೆ ಸಹಿಸಲ್ಲ.

ಇದನ್ನೂ ಓದಿ: ಉತ್ತರಪ್ರದೇಶ; 50 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ-ಕೊಲೆ, 2 ಆರೋಪಿಗಳ ಬಂಧನ

ಯಾರಿಗೇ ಏನೇ ಅಸಮಾಧಾನವಿದ್ದರೂ ಪಕ್ಷದ ಚೌಕಟ್ಟಿನೊಳಗೆ ಮಾತನಾಡಬೇಕು. ವರಿಷ್ಟರ ಗಮನಕ್ಕೆ ತರಬೇಕು. ಶಿಸ್ತು ಉಲ್ಲಂಘಿಸಿ ಮಾತನಾಡುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯದ ಬೆಳವಣಿಗೆಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರಿಗೆ ಪಿನ್ ಟು ಪಿನ್ ಮಾಹಿತಿ ನೀಡಲಾಗಿದೆ. ಯಾಕೆಂದರೆ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಘಟಕಕ್ಕೆ ಇಲ್ಲ. ಕೇಂದ್ರದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.
Published by: MAshok Kumar
First published: January 6, 2021, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories