BBMP: ಬೀದಿ ಬದಿಯ ಆಹಾರಗಳೂ ಇನ್ಮುಂದೆ ಆನ್​​ಲೈನ್​ನಲ್ಲಿ ಲಭ್ಯ: ಪಾಲಿಕೆ ಸಾಲವನ್ನೂ ನೀಡುತ್ತೆ

ಬಿಬಿಎಂಪಿಯಿಂದ ಬೀದಿಬದಿ ಆಹಾರ ಮಾರಾಟಗಾರರ ಸರ್ವೇ ನಡೆಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರು ಇದ್ದಾರೆ. ಬೀದಿಬದಿ ವ್ಯಾಪಾರಕ್ಕೆ ಪಾಲಿಕೆ ಎರಡು ಲಕ್ಷ ಸಾಲ ನೀಡಲು ಮುಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು:  ಸ್ಟಾರ್ ಹೋಟೆಲ್‌ಗಳು, ಹೈ-ಫೈ ರೆಸ್ಟೋರೆಂಟ್‌ ಗಳಿಗೆ ಮಾತ್ರ ಸೀಮಿತವಾಗಿದ್ದ ಆನ್‌ಲೈನ್ ಆಹಾರ ಮಾರಾಟಕ್ಕೆ (Online Food Delivery) ಬೀದಿ ಬದಿಯ ಆಹಾರ (Street Food) ಮಾರಾಟಗಾರರು ಪ್ರವೇಶಿಸುವ ಸಲುವಾಗಿ ಬಿಬಿಎಂಪಿ (BBMP) ಹೊಸ ಯೋಜನೆ ತರಲು ಮುಂದಾಗಿದೆ. ಇಷ್ಟು ದಿನ  ಹೋಟೆಲ್​​ಗಳಿಂದ ಮಾತ್ರ ಅನ್ ಲೈನ್ ನಲ್ಲಿ ಅಹಾರ ಡೆಲಿವರಿ ಪಡೆಯುತ್ತಿದ ಸಿಲಿಕಾನ್ ಸಿಟಿ ಜನರಿಗೆ ಬೀದಿ ಬದಿಯ ಅಹಾರವೂ ಅನ್ ಲೈನ್ ಮೂಲಕ ಸವಿಯಲು ಯೋಜನೆ ಜಾರಿಗೆ ತರ್ತಿದೆ.

ಬಿಬಿಎಂಪಿಯಿಂದ ಅನ್ ಲೈನ್ ಅ್ಯಪ್ ಗಳ ಜೊತೆ ಒಡಂಬಡಿಕೆ !

ಅನೇಕ ಜನರಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ, ಜೊಮಾಟೋದಂತಹ ಆಹಾರ ಸರಬರಾಜು ಆ್ಯಪ್‌ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಅಂತಹದ್ದೊಂದು ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದ್ದು, ಸ್ವಿಗ್ಗಿ, ಜೊಮಾಟೋ ಸೇರಿ ಇನ್ನಿತರೆ ಆಹಾರ ಸರಬರಾಜು ಆ್ಯಪ್‌ಗಳು ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯೋಜನೆ ಜಾರಿಗೆ ತರ್ತಿದೆ.

ಬೀದಿ ಬದಿಯ ಅಹಾರ ಮಾರಾಟಕ್ಕೆ ಉತ್ತೇಜನ

ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ಬೀದಿಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಬೀದಿ ಬದಿಯ ವ್ಯಾಪಾರಿಗಳು ತಮ್ಮ ಅಹಾರ ಪಾದರ್ಥಗಳನ್ನೂ ಇನ್ನೂ ಮುಂದೆ ಅನ್ ಲೈನ್ ಅ್ಯಪ್ ಮುಖಾಂತರ ಮಾರಾಟ ಮಾಡಬಹುದಾಗಿದೆ. ಇನ್ನೂ ಕೇಂದ್ರ ಸರ್ಕಾರದ ಈ ಯೋಜನೆಯನ್ನು, ನಗರದಲ್ಲಿನ ಬೀದಿ ಬದಿಯ ಅಹಾರ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶ ಪಾಲಿಕೆಯದ್ದಾಗಿದೆ. ಈ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಎಲ್ಲಾ ರೀತಿಯ ಸಿದ್ಧತೆ ನಡಿಸ್ತಿದೆ.

ಇದನ್ನೂ ಓದಿ: BBMP: ರಾಜ್ಯ, ಕೇಂದ್ರ ಸರ್ಕಾರಕ್ಕೆ GST ಉಂಡೇನಾಮ ಹಾಕಿದ ಬಿಬಿಎಂಪಿ & ಗುತ್ತಿಗೆದಾರರು!

ಬಿಬಿಎಂಪಿಯೇ ತರಬೇತಿ ನೀಡಲಿದೆ

ನಗರದಲ್ಲಿ ಬೀದಿ ಬದಿಯ ಅಹಾರ ಮಾರಾಟಗಾರರ ಲೆಕ್ಕ ಮಾಡಿ ಇವರುಗಳಿಗೆ  ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವುದು, ಗ್ರಾಹಕರಿಗೆ ಆಹಾರ ನೀಡಬೇಕಾದಾಗ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಒಟ್ಟು 7 ದಿನಗಳ ತರಬೇತಿ ನೀಡಲಾಗುತ್ತಿದೆ. ಹೀಗೆ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ. ವ್ಯಯಿಸಲಿದೆ. ಆ ಹಣವನ್ನು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ನೀಡಲಾಗಿರುವ ಅನುದಾನದಿಂದ ಪಡೆಯಲಾಗುತ್ತದೆ ಅಂತ ಬಿಬಿಎಂಪಿ ವಿಶೇಷ ಅಯುಕ್ತರು ತಿಳಿಸಿದ್ದಾರೆ.

ಸಾಲವನ್ನೂ ನೀಡಲಿದೆ

ಈ‌ ಹಿನ್ನೆಲೆ ಬಿಬಿಎಂಪಿಯಿಂದ ಬೀದಿಬದಿ ಆಹಾರ ಮಾರಾಟಗಾರರ ಸರ್ವೇ ನಡೆಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರು ಇದ್ದಾರೆ. ಜತೆಗೆ ಆಹಾರ ಮಾರಾಟಗಾರರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ. ಬೀದಿ ಬದಿ ಆಹಾರ ಮಾರಾಟಗಾರರ ಆಹಾರವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಆಹಾರ ಸರಬರಾಜು ಆ್ಯಪ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇನ್ನೂ ಬೀದಿಬದಿ ವ್ಯಾಪಾರಕ್ಕೆ ಪಾಲಿಕೆಯಿಂದ ಎರಡು ಲಕ್ಷ ಸಾಲ ನೀಡಲು ಮುಂದಾಗಿದೆ. ಹೀಗೆ ಎಲ್ಲಾ ಅಂದು ಕೊಂಡಂತೆ ಆದರೆ ಇದೆ ಅಗಸ್ಟ್ 15 ಕ್ಕೆ ಈ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಸಿದ್ದತೆ ಮಾಡಿಕೊಂಡಿದೆ.
Published by:Kavya V
First published: