• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Puttur: ಕಾರ್​​ಗೆ ಡಿಕ್ಕಿಯಾದ ನಾಯಿ ಬಂಪರ್​​ನೊಳಗೆ ಪ್ರತ್ಯಕ್ಷ; 70 ಕಿಲೋ ಮೀಟರ್ ಪ್ರಯಾಣಿಸಿದ ಶ್ವಾನ

Puttur: ಕಾರ್​​ಗೆ ಡಿಕ್ಕಿಯಾದ ನಾಯಿ ಬಂಪರ್​​ನೊಳಗೆ ಪ್ರತ್ಯಕ್ಷ; 70 ಕಿಲೋ ಮೀಟರ್ ಪ್ರಯಾಣಿಸಿದ ಶ್ವಾನ

ಕಾರ್​ ಬಂಪರ್​​ನಿಂದ ಹೊರ ಬಂದ ಶ್ವಾನ

ಕಾರ್​ ಬಂಪರ್​​ನಿಂದ ಹೊರ ಬಂದ ಶ್ವಾನ

ಮನೆಗೆ ಬಂದ ಬಳಿಕ ಕಾರ್ ಪರಿಶೀಲಿಸಿದಾಗ ಬಂಪರ್​ನೊಳಗೆ ನಾಯಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಮೆಕ್ಯಾನಿಕ್​ ಅವರನ್ನು ಕರೆಸಿ ನಾಯಿಯನ್ನು ಹೊರಕ್ಕೆ ತೆಗೆಯಲಾಗಿದೆ.

  • Share this:

ಮಂಗಳೂರು: ಕಾರ್​ಗೆ (Car) ಡಿಕ್ಕಿಯಾದ ನಾಯಿಯೊಂದು (Dog) ಬಂಪರ್​ನೊಳಗೆ (Car bumper) ಪತ್ತೆಯಾದ ವಿಚಿತ್ರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur, Dakshina Kannada) ನಡೆದಿದೆ. ಡಿಕ್ಕಿಯಾದ ಬಳಿಕ ಬಂಪರ್​​ನೊಳಗೆ ಕುಳಿತ ನಾಯಿ ಸುಮಾರು 70 ಕಿಲೋ ಮೀಟರ್ ಪ್ರಯಾಣಿಸಿದೆ. ಆದ್ರೆ ಇದ್ಯಾವ ವಿಷಯ ಕಾರ್​ ಚಾಲಕನಿಗೆ (Car Driver) ಗೊತ್ತಾಗಿಲ್ಲ. ಪುತ್ತೂರಿನ ಕಬಕ (Kabaka, Puttur) ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರಿಗೆ ಸೇರಿದ ಕಾರ್​​ ಬಂಪರ್​ನೊಳಗೆ ನಾಯಿ ಸೇರಿಕೊಂಡಿತ್ತು. ಸುಬ್ರಹ್ಮಣ್ಯ ಟಿ.ಎಸ್. ಕುಟುಂಬ ಸುಬ್ರಹ್ಮಣ್ಯದಿಂದ ಪುತ್ತೂರಿಗೆ (Subramanya To Puttur) ಬರುವ ಮಾರ್ಗದಲ್ಲಿ ಈ ಘಟನೆ ನಡೆದಿದೆ.


ಸುಬ್ರಹ್ಮಣ್ಯ-ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರ್​​ಗೆ ನಾಯಿ ಡಿಕ್ಕಿ ಹೊಡೆದಿತ್ತು. ಕೂಡಲೇ ಕಾರ್ ನಿಲ್ಲಿಸಿದ ಸುಬ್ರಹ್ಮಣ್ಯ ಕೆಳಗಿಳಿದು ನೋಡಿದ್ದಾರೆ. ಆದರೆ ನಾಯಿ ಎಲ್ಲಿಯೂ ಕಂಡಿಲ್ಲ. ನಾಯಿ ಹೋಗಿರಬಹುದು ಎಂದು ತಿಳಿದು ಕಾರ್ ಚಲಾಯಿಸಿಕೊಂಡು ಮನೆಗೆ ಹಿಂದಿರುಗಿದ್ದಾರೆ.


ಮನೆಗೆ ಬಂದ ಬಳಿಕ ಕಾರ್ ಪರಿಶೀಲಿಸಿದಾಗ ಬಂಪರ್​ನೊಳಗೆ ನಾಯಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಮೆಕ್ಯಾನಿಕ್​ ಅವರನ್ನು ಕರೆಸಿ ನಾಯಿಯನ್ನು ಹೊರಕ್ಕೆ ತೆಗೆಯಲಾಗಿದೆ.


ಬೀದಿ ನಾಯಿಗಳ ಮೇಲೆ ಕಲ್ಲು ಎಸಿದ್ದೀರಿ ಜೋಕೆ


ಬೆಂಗಳೂರು: ಶ್ವಾನಗಳು (Dogs) ಮಾನವರಿಗೆ ಅತ್ಯಂತ ಆತ್ಮೀಯವಾಗಿರುವ ಪ್ರಾಣಿ. ಎಷ್ಟೋ ಮನೆಗಳಲ್ಲಿ ಸಾಕು ನಾಯಿಗಳನ್ನು ಅವರ ಕುಟುಂಬದ ಸದಸ್ಯರಂತೆ ಟ್ರೀಟ್ ಮಾಡುತ್ತಾರೆ. ನಾಯಿಗಳನ್ನೇ ಮಕ್ಕಳಂತೆ ಸಾಕುವವರೂ ನಮ್ಮ ಮಧ್ಯೆ ಇದ್ದಾರೆ.


ಕಾರ್​ ಬಂಪರ್​​ನಿಂದ ಹೊರ ಬಂದ ಶ್ವಾನ


ಆದರೆ ಬೀದಿನಾಯಿಗಳ ಮೇಲೆ ಈ ರೀತಿಯ ಅಕ್ಕರೆ ಅಪರೂಪ. ಹಾಗಂತ ಬೀದಿ ನಾಯಿಗಳ ಮೇಲೆ ತಮಾಷೆಗೆ ಕಲ್ಲು ಎಸೆದರೂ ಸಂಕಷ್ಟ ಎದುರಿಸಬೇಕಾಗುತ್ತದೆ.


ಬೆಂಗಳೂರಿನಲ್ಲಿ ಬೀದಿ ನಾಯಿಗಳ ಮೇಲೆ ಕಲ್ಲು ಎಸೆದ ಆರೋಪಡಿ ವ್ಯಕ್ತಿಯೊಬ್ಬರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಅಶೋಕನಗರದಲ್ಲಿ 58 ವರ್ಷದ ವೈದ್ಯರೊಬ್ಬರು ಮೇಲೆ ಪಕ್ಕದ ಮನೆಯ ಭದ್ರತಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ:  Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ


ದೂರಿನಲ್ಲಿ ಏನಿದೆ?


ನಮ್ಮ ಮನೆಯ ಎದುರು ಬಂದಿದ್ದ ನಾಯಿಗಳ ಮೇಲೆ ಸೆಕ್ಯೂರಿಟಿ ಗಾರ್ಡ್ ಕಲ್ಲು ಎಸೆದಿದ್ದಾನೆ. ಇದರಿಂದ ಎರಡು ನಾಯಿಗಳು ಗಾಯಗೊಂಡಿವೆ. ಸೆಕ್ಯೂರಿಟಿ ಗಾರ್ಡ್ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವೈದ್ಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


2020ರಿಂದ ಇಲ್ಲಿಯವರೆಗೆ 52 ಸಾವಿರ ಜನರಿಗೆ ಬೀದಿ ನಾಯಿ ಕಡಿತ


2020ರಿಂದ ಇಲ್ಲಿಯವರೆಗೆ ಬಿಬಿಎಂಪಿ (Bruhat Bengaluru Mahanagara Palike- BBMP) ವ್ಯಾಪ್ತಿಯಲ್ಲಿ 52,262 ಜನರು ಬೀದಿ ನಾಯಿಗಳ (Street Dogs) ಕಡಿತಕ್ಕೆ ಒಳಗಾಗಿರುವ ಮಾಹಿತಿ ಪಾಲಿಕೆಯ ಸಮೀಕ್ಷೆಯಲ್ಲಿ (Survey) ಬಹಿರಂಗಗೊಂಡಿದೆ.




ಈ ಸಂಬಂಧ ಬೀದಿ ಬದಿ ಶ್ವಾನಗಳ ಜನನ ನಿಯಂತ್ರಣದ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ನಡೆಸುವಂತೆ ಪಾಲಿಕೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ (AWBI- Animal Welfare Board of India) ಮನವಿ ಮಾಡಿಕೊಂಡಿದೆ.


ರೇಬಿಸ್ ಲಸಿಕೆ ತ್ವರಿತ ಪೂರೈಕೆಗೆ ಮನವಿ


ಹೆಚ್ಚಿನ ಸಂಖ್ಯೆಯ NGOಗಳ ಜೊತೆ ಸೇರಿ ಶ್ವಾನಗಳ ಸಂತಾನಹರಣ ಚಿಕಿತ್ಸೆ, ರೇಬಿಸ್ ಲಸಿಕೆಯನ್ನು ತ್ವರಿತಗತಿಯಲ್ಲಿ ಪೂರೈಸುವ ಕಾರ್ಯ ನಡೆಸಬೇಕೆಂದು ಪಾಲಿಕೆ ಮನವಿ ಮಾಡಿದೆ.


ವಿಳಂಬ ಪಾವತಿ ಹಿನ್ನೆಲೆ ಪಾಲಿಕೆ (BBMP) ಜೊತೆ ಕೆಲಸ ಮಾಡಲು ಬಹುತೇಕ NGO ಮತ್ತು ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕಾರಣದಿಂದ NGOಗಳು ಮುಂದಾಗುತ್ತಿಲ್ಲ ಎಂದು ವರದಿಯಾಗಿದೆ.

Published by:Mahmadrafik K
First published: