Bengaluru: ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ; ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾಲಕನ ಮೇಲೆ ನಾಯಿ ದಾಳಿ ಮಾಡುವಾಗ ಯುವಕ ಬಂದು ರಕ್ಷಿಸಿದ್ದಾರೆ. 5 ನಾಯಿಗಳಿಂದ ಬಾಲಕನ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 31) : ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ (Street Dog) ಅಟ್ಟಹಾಸ ಮುಂದುವರೆದಿದೆ. ಟಿ. ದಾಸರಹಳ್ಳಿಯ (T Dasarahalli) ಎಜಿಬಿ ಲೇಔಟ್​ನಲ್ಲಿ 3 ವರ್ಷದ ಮಗುವಿವ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್​ (Deadly Attack) ನಡೆಸಿವೆ. ಗಾಯಗೊಂಡಿರುವ ಮಗುವನ್ನು ಪೋಷಕರು ವಿಕ್ಟೋರಿಯಾ ಅಸ್ಪತ್ರೆಗೆ (Victoria Hospital) ದಾಖಲಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಯಾದಗಿರಿ ಜಿಲ್ಲೆಯ ಹುಳಕಲ್ಲು ಗ್ರಾಮದ ಬೀರಪ್ಪ-ಚಂದಮ್ಮ ದಂಪತಿ ಮಗ ಮೇಲೆ ನಾಯಿಗಳು ದಾಳಿ ನಡೆಸಿವೆ. ಆಟವಾಡುತ್ತಾ ಮನೆ ಕಡೆ ಹೊರಟ್ಟಿದ್ದ ವೇಳೆ ಬಾಲಕನ (Boy) ಮೇಲೆ ನಾಯಿಗಳು ಅಟ್ಯಾಕ್​ ಮಾಡಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ ಬಾಲಕನನ್ನು ರಕ್ಷಣೆ ಮಾಡಿದ್ದಾನೆ.  

ರಸ್ತೆಯಲ್ಲಿ ತೆರಳುತ್ತಿದ್ದಾಗ ಬಾಲಕ ಮೇಲೆ ದಾಳಿ

ಬೀದಿ ನಾಯಿಗಳು ಮಗುವಿಗೆ ಅನೇಕ ಕಡೆ ಕಚ್ಚಿದ್ದು, ಮೈ ತುಂಬಾ ಪರಚಿದೆ. ಭಾನುವಾರ ಸಂಜೆ 5.45ಕ್ಕೆ ಘಟನೆ ನಡೆದಿದೆ. ಬಾಲಕನ ಮೇಲೆ ನಾಯಿ ದಾಳಿ ಮಾಡುವಾಗ ಯುವಕ ಬಂದು ರಕ್ಷಿಸಿದ್ದಾರೆ. 5 ನಾಯಿಗಳಿಂದ ಬಾಲಕನ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ನಗರದಲ್ಲಿ ನಾಯಿಗಳ ಉಪಟಳ ಹೆಚ್ಚಿದ್ರು  ಅಧಿಕಾರಿಗಳ ಗಮನಕ್ಕೆ ತಂದ್ರು ಬಿಬಿಎಂಪಿ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಘಟನೆ ಬಳಿಕ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿ ಕಾರಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Accident: 2 ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ಸಾವು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಬೆಂಗಳೂರಲ್ಲಿ ಹೆಚ್ಚಾಗಿದೆ ಬೀದಿ ನಾಯಿಗಳ ಹಾವಳಿ

ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಈ ನಾಯಿಗಳ ಹಾವಳಿಯಿಂದ ಎಷ್ಟೋ ಮಕ್ಕಳು ಬಲಿಯಾಗುತ್ತಿದ್ದಾರೆ, ಇದರ ಬಗ್ಗೆ ಬಿಬಿಎಂಪಿ ಗಮನ ಕೊಡದೆ ಏನು ಮಾಡುತ್ತಿದೆ ಎನ್ನುವುದೇ ಒಂದು ಯಕ್ಷ ಪ್ರಶ್ನೆ. ಇನ್ನೊಂದು ಕಡೆ ಪ್ರಾಣಿ ದಯಾ ಸಂಘ ಸಂಸ್ಥೆಗಳು ಇದಕ್ಕೆಲ್ಲ ಪರಿಹಾರ ನೀಡದೆ ಏನು ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ, ಇಷ್ಟೆಲ್ಲಾ ಬೇಜವಾಬ್ದಾರಿ ಮತ್ತು ಜನ ಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎನ್ನುವುದು ಬೇಸರ ತಂದಿದೆ.

ಈ ಹಿಂದೆ ನಾಲ್ಕು ವರ್ಷದ ಬಾಲಕ ಅರುಣನ ಮೇಲೆ ಹತ್ತಕ್ಕಿಂತ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ್ದವು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ರಸ್ತೆಯಲ್ಲಿ ಮಕ್ಕಳು ಓಡಾಡೋದೇ ಕಷ್ಟ

ಬೀದಿ ನಾಯಿಗಳಿಗೆ ಸರಿಯಾದ ಲಸಿಕೆ ಸಿಗದೆ ಎಷ್ಟೋ ನಾಯಿಗಳು ಅನಾರೋಗ್ಯ ಕುತ್ತಾಗಿರುತ್ತೆ, ಇದರಿಂದ ಜನರ ಆರೋಗ್ಯಕ್ಕೂ ಹಾನಿಕಾರಕ, ನಾನು ನೋಡಿರುವ ಹಾಗೆ ಬೆಂಗಳೂರಲ್ಲಿನ ಅನೇಕ ನಗರದಲ್ಲಿ ಬೆಳ್ಳಂಬೆಳಗ್ಗೆ 6 ಗಂಟೆ ಸಮಯದಲ್ಲಿ 15ಕ್ಕೂ ಹೆಚ್ಚು ಬೀದಿನಾಯಿಗಳು ಇರುತ್ತದೆ, ಈ ರಸ್ತೆಗೆ ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡ ಓಡಾಡುವುದಕ್ಕೆ ಹೆದರಿಕೊಳ್ಳುತ್ತಾರೆ.

ಒಂದೇ ಏರಿಯಾ ಅಲ್ಲ ಬೆಂಗಳೂರಿನಲ್ಲಿರುವ ಬನಶಂಕರಿ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್ ಇನ್ನೂ ಹಲವಾರು ಏರಿಯಾಗಳಲ್ಲೂ ಬೀದಿ ನಾಯಿಗಳ ಹಟ್ಟಹಾಸ ಏರಿಕೆಯಾಗಿದೆ, ದಯವಿಟ್ಟು ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪ್ರಾಣಿ ದಯಾ ಸಂಘ ಗಮನ ಹರಿಸಿ ಸರಿಯಾದ ಕ್ರಮವನ್ನು ಆದಷ್ಟು ಬೇಗ ಕೈಗೊಂಡು ಜನರನ್ನೂ ರಕ್ಷಿಸಬೇಕು, ನಗರದ ಜನರು ಕೂಡ ಅವರವರ ಏರಿಯಾದಲ್ಲಿ ನಾಯಿಗಳ ಆರ್ಭಟ ಹೆಚ್ಚಿದಲ್ಲಿ ದಯವಿಟ್ಟು ಬಿಬಿಎಂಪಿ ಅಧಿಕಾರಿಗಳಿಗೆ ಅಥವಾ ಪ್ರಾಣಿ ದಯಾ ಸಂಘ ದ ಸಹಾಯವಾಣಿ ಸಂಖ್ಯೆ ಗೆ ಕರೆ ಮಾಡಿ.
Published by:Pavana HS
First published: