ಚಿತ್ರದುರ್ಗ(ಮಾ.15): ಗ್ರಾಮಗಳಲ್ಲಿ ವಾಸಿಸೋ ಜನ, ಜಾನುವಾರುಗಳಿಗೆ ಇತ್ತೀಚೇಗೆ ಬೀದಿ ನಾಯಿಗಳ (Stray dogs) ಕಾಟ ಹೆಚ್ಚಾಗಿ, ಅವುಗಳಿಂದ ರಕ್ಷಣೆ ಪಡೆಯೋಕೆ ಹರಸಾಹಸ ಪಡಬೇಕಾದ ಸ್ಥಿತಿ ಎದುರುರಾಗಿದೆ. ರೊಪ್ಪದಲ್ಲಿ ಕೂಡಿ ಹಾಕಿದ್ದ ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಐದು ಕುರಿಗಳನ್ನ(Sheep) ಕೊಂದು ಹಾಕಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಕಾಡಲ್ಲಿರಬೇಕಾದ ಕಾಡು ಪ್ರಾಣಿಗಳು ನಾಡಿಗೆ ಬಂದು ಉಪಟಳ ನೀಡುತ್ತಿದ್ದವು. ಅವುಗಳ ಆರ್ಭಟ, ಉಪಟಳಕ್ಕೆ ಚಿತ್ರದುರ್ಗ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಪ್ರಾಣಿಗಳು (Animals) ಸೇರಿ ಮನುಷ್ಯರ ಜೀವಕ್ಕೂ ಕೂಡ ಹಾನಿಯಾಗಿರುವ ಉದಾಹಾರಣೆಗಳಿವೆ.
ಅಲ್ಲದೇ ಅನೇಕ ಹಳ್ಳಿಗಳಲ್ಲಿ ಆಹಾರ ಅರಸಿ ಬಂದ ಚಿರತೆ, ಕರಡಿಗಳು ಜಾನುವಾರುಗಳ ಮೇಲೆ ಮಾರಣಾಂತಿಕ ದಾಳಿ ಮಾಡಿವೆ. ಇದರಿಂದ ಅನೇಕ ಮೇಕೆ, ಕುರಿ, ಹಸು, ಹೆಮ್ಮೆ, ಎತ್ತುಗಳು ಸಾವನ್ನಪ್ಪಿವೆ. ಇಂತಹ ಘಟನೆಗಳು ನಡೆದಾಗ ಆಯಾ ಊರುಗಳಲ್ಲಿ ಆತಂಕದ ವಾತವರಣ ಸೃಷ್ಠಿಯಾಗಿ ಜನರು ಹೊರಗೆ ಬಂದು ಓಡಾಡದೆ, ಸಂಜೆ ಆಗುತ್ತಿದ್ದಂತೆ ಮನೆ ಸೇರಿಕೊಳ್ಳುವ ಪರಿಸ್ಥಿತಿಯನ್ನೂ ಅನುಭವಿಸಿದ್ದಾರೆ.
ಕಾಡುಪ್ರಾಣಿಗಳಿಂದಲೂ ತೊಂದರೆ
ಅಂತಹ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದನ್ನೂ ಮೀರಿ ಜನರು ಅವರ ಆತಂಕ ದೂರ ಮಾಡಿಕೊಳ್ಳೋಕೆ ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವ ನೆಪದಲ್ಲಿ ಸಿಕ್ಕ ಸಿಕ್ಕ ಕರಡಿ, ಚಿರತೆಗಳನ್ನ ಹೊಡೆದು ಸಾಯಿಸಿರುವ ಹಲವು ಉದಾಹರಣೆಗಳಿವೆ.
ಬೀದಿ ನಾಯಿಗಳ ಉಪಟಳ
ಈಗ ಸದ್ಯಕ್ಕೆ ಕಾಡು ಪ್ರಾಣಿಗಳ ಉಪಟಳವೇನೋ ಕಡಿಮೆ ಆಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅವುಗಳಿಂದ ರಕ್ಷಣೆ ಪಡೆಯೋಕೆ ಜನರು ಹೈರಾಣಾಗಿ ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆತಾಲ್ಲೂಕಿನ ಬೊಮ್ಮಸಮುದ್ರ ಗ್ರಾಮದ ರೊಪ್ಪದಲ್ಲಿ ಕೂಡಿದ್ದ 4 ಕುರಿ, 1ಟಗರಿನ ಮೇಲೆ ಬೀದಿ ನಾಯಿಗಳು ನಾಯಿದಾಳಿ ನಡೆಸಿವೆ.
ದಾಳಿ ಮಾಡಿ ಸಾಯಿಸಿಬಿಡುತ್ತವೆ ಬೀದಿನಾಯಿಗಳು
ದಾಳಿಯಲ್ಲಿ ಐದೂ ಕುರಿ ಸಾವನ್ನಪ್ಪಿವೆ. ಇವು ಗ್ರಾಮದ ರೈತ ತಿಪ್ಪೇಸ್ವಾಮಿ ಎಂಬುವರಿಗೆ ಸೇರಿದ್ದು, ಅದೇ ಗ್ರಾಮದ ಕರಿಯಣ್ಣ ಎಂಬುವವರ ಜಮೀನ ರೊಪ್ಪದಲ್ಲಿ ತಂಗಲು ನಿನ್ನೆ ರಾತ್ರಿಯಿಂದ ಕೂಡಿಹಾಕಿದ್ದರು. ಬಳಿಕ ರೈತ ತಿಪ್ಪೇಸ್ವಾಮಿ ಊಟ ಮಾಡಲು ಗ್ರಾಮಕ್ಕೆ ಬಂದ ಸಂರ್ಭದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ ಐದು ಕುರಿಗಳ ಮೇಲೆ ದಾಳಿ ನಡೆಸಿ ಸಾಯಿಸಿವೆ.
ಸುಮಾರು 50 ಸಾವಿರ ನಷ್ಟ
ಈ ಬಗ್ಗೆ ಮಾತನಾಡಿದ ರೈತ ತಿಪ್ಪೇಸ್ವಾಮಿ, ಬೀದಿನಾಯಿಗಳ ಉಪಟಳದ ಗ್ರಾಮದಲ್ಲಿ ಹೆಚ್ಚಿದೆ. ನಾಯಿ ದಾಳಿಯಿಂದ ನನ್ನ ಐದು ಕುರಿಗಳು ಸಾವನಪ್ಪಿ ಸುಮಾರು 50 ಸಾವಿರನಷ್ಟವಾಗಿದೆ ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಬೇಟಿ ನೀಡಿರುವ ಪಶು ವೈದ್ಯ ಡಾ.ನರೇಶ್ ಪರಿಶೀಲನೆ ನಡೆಸಿದ್ರು.
ಇದನ್ನೂ ಓದಿ: Kannada School: ಕನ್ನಡ ಶಾಲೆ ಉಳಿಸಲು ವಿಭಿನ್ನ ಯತ್ನ: Smart Class ಆಗಿ ಬದಲಾದ ಹಳೆ ಸರ್ಕಾರಿ ಬಸ್
ಇದೇ ವೇಳೆ ಮರಣೋತ್ತರ ಪರೀಕ್ಷೆ ನಡೆಸಿ ನಾಯಿ ದಾಳಿಯಿಂದ ಕುರಿಗಳು ಸಾವನಪ್ಪಿವೆ ಎಂದು ತಿಳಿಸಿದ್ದು, ಪಶು ಇಲಾಖೆಯಿಂದ ಅಮೃತ ಯೋಜನೆಯಡಿ ಸರ್ಕಾರದಿಂದ ಪ್ರತಿ ಕುರಿಗೆ 5ಸಾವಿರ ಬರಲಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಕಾಡು ಪ್ರಾಣಿಗಳ ಬದಲಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು ಅವುಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆ ಕ್ರಮ ವಹಿಸಬೇಕಿದೆ.
ಇದನ್ನೂ ಓದಿ: Power Cut: ಇಂದು ಎಲ್ಲಿ ಎಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ..? ಏರಿಯಾಗಳ ಪಟ್ಟಿ ಇಲ್ಲಿದೆ ನೋಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ