High Court: ಬೀದಿನಾಯಿ ದಾಳಿಗೆ ಮಗು ಬಲಿ; ಬೆಳಗಾವಿ ಜಿಲ್ಲಾ ಪಂಚಾಯತ್​ಗೆ ₹10 ಲಕ್ಷ ದಂಡ!

ಬೀದಿ ನಾಯಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಸ್ಥಳೀಯ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಹೈಕೋರ್ಟ್​ ಹೇಳಿದೆ.  

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಬೀದಿನಾಯಿಗಳ ದಾಳಿಯಿಂದ (Stray Dogs Attack) 1 ವರ್ಷ 10 ತಿಂಗಳ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆಗೆ ಸಾಂತ್ವನ ಹೇಳಿದ ಕರ್ನಾಟಕ ಹೈಕೋರ್ಟ್ (Karnataka High Court), ಅವರಿಗೆ ₹ 10 ಲಕ್ಷ ಪರಿಹಾರ ನೀಡುವಂತೆ ಬೆಳಗಾವಿ ಜಿಲ್ಲಾ ಪಂಚಾಯತ್‌ಗೆ (Belagavi Zilla Panchayat) ಆದೇಶಿಸಿದೆ. ಬೀದಿ ನಾಯಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಸ್ಥಳೀಯ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಹೈಕೋರ್ಟ್​ ಹೇಳಿದೆ.  ಅಲ್ಲದೆ, 2012ರಲ್ಲಿ ಮಾಸ್ಟರ್ ಜಿಷ್ಣು ಪ್ರಕರಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ನೀಡಿರುವ ನಿರ್ದೇಶನಗಳು ಜಿಲ್ಲೆ, ತಾಲೂಕು, ಗ್ರಾಮ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಎಂದು ನ್ಯಾಯಾಲಯ ಘೋಷಿಸಿದೆ.  

ಮಗುವಿನ ತಂದೆಗೆ ಪರಿಹಾರ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ದಾಳಿಯು ಇತರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿರುವ ಬೀದಿ ನಾಯಿಗಳ ದಾಳಿಗಿಂತ ಭಿನ್ನವಾಗಿರಬಾರದು. ಬಿಬಿಎಂಪಿ ಮೇಲೆ ವಿಧಿಸಿರುವ ಬಾಧ್ಯತೆಗಳು ಇತರ ಸ್ಥಳೀಯ ಸಂಸ್ಥೆಗಳಿಗೆ ಸಮಾನವಾಗಿ ಅನ್ವಯಿಸುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿ ಗ್ರಾಮದ ಮೇಸ್ತ್ರಿ 32 ವರ್ಷದ ಯೂಸುಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಈ ಆದೇಶ ನೀಡಿದ್ದಾರೆ. ನವೆಂಬರ್ 11, 2018 ರಂದು ತನ್ನ ಕಿರಿಯ ಮಗ ಅಬ್ಬಾಸ್ ಅಲಿ ಯೂಸುಬ್ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದ್ದಕ್ಕಾಗಿ ಅರ್ಜಿದಾರರು ಅಧಿಕಾರಿಗಳಿಂದ ₹ 25 ಲಕ್ಷ ಪರಿಹಾರವನ್ನು ಕೋರಿದ್ದರು.

ಇದನ್ನೂ ಓದಿ: Handcuff Rules: ಬಂಧನದ ವೇಳೆ ಸುಮ್ ಸುಮ್ಮನೆ ಕೈಗೆ ಕೋಳ ಹಾಕಿದ್ರೆ ಪೊಲೀಸರಿಗೆ ಲಕ್ಷ ಲಕ್ಷ ದಂಡ: ಹೈಕೋರ್ಟ್

ಬೆಳಗಾವಿ ಜಿಲ್ಲಾ ಪಂಚಾಯತ್ ವಾದ

ಸಾವಿಗೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಬೆಳಗಾವಿ ಜಿಲ್ಲಾ ಪಂಚಾಯತ್ ಮತ್ತು ಬಾಳೇಕುಂದ್ರಿ ಗ್ರಾಮ ಪಂಚಾಯತ್ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಯಾವುದೇ ನಾಗರಿಕರಿಗೆ ಯಾವುದೇ ಗಾಯ/ಸಾವಿಗೆ ಸಾರ್ವಜನಿಕ ಕಾನೂನಿನ ಪರಿಹಾರದ ಅಡಿಯಲ್ಲಿ ಸ್ಥಳೀಯ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು. ಮರಣದ ದಿನಾಂಕದಿಂದ 6% ಬಡ್ಡಿಯೊಂದಿಗೆ ಪರಿಹಾರದ ಮೊತ್ತವನ್ನು ಪಾವತಿಸಲು ಜಿಲ್ಲಾ ಪಂಚಾಯತ್‌ಗೆ ನಿರ್ದೇಶಿಸಿದ ನ್ಯಾಯಾಲಯ, ಅರ್ಜಿದಾರರು ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದರು. ಅರ್ಜಿದಾರರಿಗೆ ವ್ಯಾಜ್ಯದ ವೆಚ್ಚವಾಗಿ ಜಿಲ್ಲಾ ಪಂಚಾಯತ್ ₹ 20,000 ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಬೆಳಗಾವಿ ಮಹಾನಗರ ಪಾಲಿಕೆ ಸುದ್ದಿ

ಬೆಳಗಾವಿ ಮೇಯರ್, ಉಪಮೇಯರ್ ಆಯ್ಕೆ ಮಾಡಿ ಎಂದು ಪ್ರತಿಭಟನೆ (Protest) ‌ಮಾಡೋ ಹಂತಕ್ಕೆ ತಲುಪಿದೆ.   2021ರ  ಸೆಪ್ಟೆಂಬರ್ 6ರಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ ಅಗಿದೆ. ಜನರಿಗೆ ಅನೇಕ ಭರವಸೆ ‌ನೀಡಿ‌ ಆಯ್ಕೆಯಾಗಿದ್ದ ಸದಸ್ಯರು ಈಗ ಅತಂತ್ರರಾಗಿದ್ದಾರೆ.  ಇಂದು, ನಾಳೆ ಅಧಿಕಾರ ಸಿಗುತ್ತೆ ಅಂತ 9 ತಿಂಗಳು ಕಳೆದು ಹೋಗಿದೆ. ಸ್ಥಳೀಯ ಸಂಸ್ಥೆಯಿಂದ  ವಿಧಾನ ಪರಿಷತ್  ಚುನಾವಣೆ ಸಂದರ್ಭದಲ್ಲಿ ಮತದಾನದ ಹಕ್ಕು ನೀಡಲಾಗಿತ್ತು. ಅಧಿಕಾರ ಇಲ್ಲದೇ ಜನರ ಕೆಲಸ ಮಾಡಲು ಆಗದೇ ಪರದಾಟ ಸ್ಥಿತಿ ಈಗ ಇದೆ. ಬಿಜೆಪಿ ಸದಸ್ಯರು ಬಹಿರಂಗ ಪ್ರತಿಭಟನೆಯು ನಡೆಸದ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್, ಪಕ್ಷೇತರ ಪಾಲಿಕೆ ಸದಸ್ಯರಿಂದ ಆರ್ ಸಿ ಕಚೇರಿ ಬಳಿ ಧರಣಿ ನಡೆಸಿದರು. ಶೀಘ್ರದಲ್ಲೇ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಆಗ್ರಹ ಮಾಡಿದ್ರು.ಧರಣಿಯಲ್ಲಿ 15 ಕ್ಕೂ ಹೆಚ್ಚು ಪಾಲಿಕೆ ಸದಸ್ಯರು ಭಾಗವಹಿಸಿದರು.‌ ಶೀಘ್ರವಾಗಿ ಕ್ರಮ ವಹಿಸದೇ ಇದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ವಿಚಾರ ಹೈಕೋರ್ಟ್‌ನಲ್ಲಿದೆ ಅಂತಾ ಅಧಿಕಾರಿಗಳ ಸಬೂಬು. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡದ ಅಧಿಕಾರಿಗಳು.
Published by:Kavya V
First published: