ಗದಗ(ಫೆ.17): ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಯುವಕರು ಸಹ ಭಯ ಪಡುತ್ತಿದ್ದಾರೆ. ಹೌದು ಬೈಕ್ ಮೇಲೆ ಹೊಗುತ್ತಿರುವವರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ. ಈವಾಗ ಆಗಿದ್ದು ಅದೇ. ಬೈಕ್ ಮೇಲೆ ಹೋಗುವಾಗ ಅಟ್ಯಾಕ್ ಮಾಡಿದ ಬಿಡಾಡಿ ದನಗಳಿಂದ ಸ್ವಲ್ಪದರಲ್ಲಿ ಜೀವ ಉಳಿದುಕೊಂಡಿವೆ.
ಗದಗ- ಬೆಟಗೇರಿ ಅವಳಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಬೆಟಗೇರಿ ಪ್ರದೇಶದಲ್ಲಿ ಹಿಂಡು ಹಿಂಡಾಗಿ ಬಿಡಾಡಿ ದನಗಳು ರಸ್ತೆಯಲ್ಲಿ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿವೆ. ಪಾದಾಚಾರಿಗಳು ಹಾಗೂ ಬೈಕ್ ಮೇಲೆ ಹೋಗುವವರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ.
ಬೆಟಗೇರಿ ನಿವಾಸಿಗಳಾದ ಈರಣ್ಣ ಎನ್ನುವವರು ಟಿವಿಎಸ್ ಬೈಕ್ ಮೇಲೆ ಬರುವಾಗ ಏಕಾಏಕಿ ಅಟ್ಯಾಕ್ ಮಾಡಿವೆ. ಅದರ ಪರಿಣಾಮ ಆತನ ಬೈಕ್ ಜಖಂಗೊಂಡಿದೆ. ಈರಣ್ಣನಿಗೆ ತಲೆ, ಕಾಲು ಹಾಗೂ ಎದೆ ಬಲವಾದ ಗಾಯವಾಗಿವೆ. ಕೂಡಲೇ ಆತನನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇನ್ನೂ ಇನ್ನೋರ್ವ ಬೆಟಗೇರಿ ನೇಕಾರ ಕಾಲೋನಿಯ ನಿವಾಸಿಯಾದ ಪ್ರಕಾಶ ಎನ್ನುವಾತ ಕೂಡಾ ಬೈಕ್ ಮೇಲೆ ಬರುವಾಗ ದನಗಳು ದಾಳಿ ಮಾಡಿವೆ. ಆತನ ತಲೆ, ಕೈ ಹಾಗೂ ಕಾಲಿಗೆ ಗಾಯವಾಗಿದ್ದು, ಎದೆಗೆ ಬಲವಾದ ಗಾಯವಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ.
ಬಿಡಾಡಿ ದನಗಳು ದಾಳಿ ಮಾಡಿರುವದರಿಂದ ಪ್ರಕಾಶ ಅವರ ಜೀವನ ನಡೆಸುವದೇ ಕಷ್ಟಸಾಧ್ಯವಾಗಿದೆ. ಮನೆಯ ಯಜಮಾನ ಪ್ರಕಾಶ ಮನೆಯಲ್ಲಿ ವೃದ್ಧ ತಾಯಿ ಪತ್ನಿ ಹಾಗೂ ಮೂವರು ಮಕ್ಕಳು ಈವರನ್ನು ಸಾಕುವ ಜವಾಬ್ದಾರಿ ಇವರ ಮೇಲೆಯೇ ಇದೆ. ಈವಾಗ ಬಿಡಾಡಿ ದನಗಳು ಮಾಡಿರೋ ಗಾಯದಿಂದ ಬೆಡ್ ರೆಸ್ಟ್ ಪಡೆಯುತ್ತಿದ್ದಾರೆ. ನಮ್ಮ ಕುಟುಂಬ ನಿರ್ವಹಣೆ ಮಾಡೋದು ಹೇಗೆ ಅಂತಿದ್ದಾರೆ.
ನಗರಸಭೆ ವಿರುದ್ಧ ಜನರ ಆಕ್ರೋಶ
ನಗರಸಭೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಇನ್ನೂ ಮಕ್ಕಳು, ಮಹಿಳೆಯರು, ವಯೋವೃದ್ಧರು ಎನ್ನದೆ ಅಟ್ಯಾಕ್ ಮಾಡ್ತಾಯಿವೆ. ಹೀಗಾಗಿ ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಣ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ