HOME » NEWS » State » STRATEGY READY FOR DEFEAT 15 DISQUALIFIED MLAS IN THIS ASSEMBLY BYPOLLS SAYS HD KUMARASWAMY IN BANGALORE SCT

ಸಿದ್ದರಾಮಯ್ಯ ನನ್ನ ಶತ್ರುವಲ್ಲ, ಸರ್ಕಾರ ಬೀಳಿಸಿದ 15 ಅನರ್ಹರ ಸೋಲಿಗೆ ರಣತಂತ್ರ ಸಿದ್ಧ; ಎಚ್​.ಡಿ. ಕುಮಾರಸ್ವಾಮಿ

ನನಗೆ ಬಿಜೆಪಿ ಮೇಲೆ ವ್ಯಾಮೋಹ ಇಲ್ಲ. ಕಾಂಗ್ರೆಸ್ ಮೇಲೂ ವ್ಯಾಮೋಹವಿಲ್ಲ. ಆ ಎರಡೂ ಪಕ್ಷಗಳಿಗೆ ಬೇಕಾಗಿದ್ದಾಗ ನಮ್ಮ ಮೇಲೆ ವ್ಯಾಮೋಹ ಬರುತ್ತದೆ. ಆದರೆ, ನಮ್ಮ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

news18-kannada
Updated:November 14, 2019, 3:49 PM IST
ಸಿದ್ದರಾಮಯ್ಯ ನನ್ನ ಶತ್ರುವಲ್ಲ, ಸರ್ಕಾರ ಬೀಳಿಸಿದ 15 ಅನರ್ಹರ ಸೋಲಿಗೆ ರಣತಂತ್ರ ಸಿದ್ಧ; ಎಚ್​.ಡಿ. ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಂಗಳೂರು (ನ. 14):  ಕಾಂಗ್ರೆಸ್ ನನ್ನ ಪ್ರಮುಖ ಶತ್ರುವಲ್ಲ. ನನ್ನ ಮತ್ತು ಸಿದ್ದರಾಮಯ್ಯನವರ ನಡುವೆ ಹೋರಾಟ ಇರಬಹುದು. ಆದರೆ, ಅವರು ನನ್ನ ಶತ್ರುವಲ್ಲ. ನಮ್ಮ ಸರ್ಕಾರ ಪತನಕ್ಕೆ ಕಾರಣವಾದ 15 ಶಾಸಕರು ಚುನಾವಣೆಯಲ್ಲಿ ಸೋಲಬೇಕು. ಅದಕ್ಕೆ ಬೇಕಾದ ತಂತ್ರವನ್ನು ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

14 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿರುವ ಎಚ್​.ಡಿ. ಕುಮಾರಸ್ವಾಮಿ, ನನಗೆ ಬಿಜೆಪಿ ಮೇಲೆ ವ್ಯಾಮೋಹ ಇಲ್ಲ. ಕಾಂಗ್ರೆಸ್ ಮೇಲೂ ವ್ಯಾಮೋಹವಿಲ್ಲ. ಆ ಎರಡೂ ಪಕ್ಷಗಳಿಗೆ ಬೇಕಾಗಿದ್ದಾಗ ನಮ್ಮ ಮೇಲೆ ವ್ಯಾಮೋಹ ಬರುತ್ತದೆ. ನಮ್ಮ ಸರ್ಕಾರ ಬೀಳಲು ಅನರ್ಹ ಶಾಸಕ ಡಾ. ಸುಧಾಕರ್ ಕಾರಣ. ಈಗ ಅವರೇ ನನ್ನ ಭೇಟಿ ಮಾಡಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ನನಗೆ ಆತ್ಮೀಯ, ಅವರ ಮೇಲೆ ನನಗೆ ಸಿಟ್ಟಿಲ್ಲ ಅಂತಿದ್ದಾರೆ. ಸುಧಾಕರ್ ಅವರ ಇತಿಹಾಸವೇನೆಂದು ನನಗೆ ಗೊತ್ತಿದೆ. ನನ್ನ ಬಗ್ಗೆ ಏನೆಲ್ಲ ಮಾತಾಡಿದ್ದಾನೆ ಎಂಬುದು ಕೂಡ ಗೊತ್ತಿದೆ. ಈಗ ಇದ್ದಕ್ಕಿದ್ದಂತೆ ಅವರಿಗೆ ನನ್ನ ನೆನಪಾಗಿದೆ ಎಂದು  ವ್ಯಂಗ್ಯವಾಡಿದ್ದಾರೆ.

ನಾಳೆಯಿಂದಲೇ ಪ್ರಚಾರ ಶುರು:

ನಾನು ನಾಳೆಯಿಂದ ಚುನಾವಣಾ ಅಖಾಡಕ್ಕೆ ಇಳಿಯುತ್ತೇನೆ. ನಾನು ರಾಜಕೀಯಕ್ಕೆ ಸುಮ್ಮನೆ ಬಂದವನಲ್ಲ. ಆರಂಭದಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಯಾವ ಪಕ್ಷದವರು ಏನು ಮಾಡಿದ್ದಾರೆ ಎಂದು ಚರ್ಚೆ ಮಾಡೋಣ. ನಮ್ಮದು ಸಣ್ಣ ಪಕ್ಷ ಇರಬಹುದು. ಆದರೆ, ನಮ್ಮ ಪಕ್ಷವನ್ನು ಬುಡಸಮೇತ ಕೀಳೋದಕ್ಕೆ ಯಾರಿಂದಲೂ ಆಗೋದಿಲ್ಲ. ಅದರ ಮೂಲ ಎಲ್ಲಿದೆ ಅಂತ ಅವರಿಗೆ ಗೊತ್ತಿದೆ. ಆ ಕಾರಣದಿಂದಲೇ ಅಂತಹ ಪ್ರಯತ್ನ ಮಾಡುವುದು ಅಷ್ಟು ಸುಲಭವಲ್ಲ ಎಂದು ಅವರಿಗೆ ಅರ್ಥವಾಗಿದೆ ಎಂದು ಎಚ್​ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ನನ್ನ ಮೊಮ್ಮಗ ಪ್ರಜ್ವಲ್​ಗೆ ಆಶೀರ್ವಾದ ಮಾಡಿ ಎಂದು ಕಣ್ಣೀರಿಟ್ಟ ದೇವೇಗೌಡ

ಮಹಾಲಕ್ಷ್ಮಿ ಲೇಔಟ್​ನ ಕೆ. ಗೋಪಾಲಯ್ಯ ಬಗ್ಗೆ ನನಗೆ ಗೊತ್ತಿದೆ. ನನಗಿಂತ ನಿಮ್ಮೆಲ್ಲರಿಗೂ ಅವರ ಹಿನ್ನೆಲೆ ಗೊತ್ತಿದೆ. ಮಹಾಲಕ್ಷ್ಮಿ ಲೇಔಟ್​ನಲ್ಲಿ ನಾವು ಗೆಲ್ಲುತ್ತೇವೆ. ಗೋಪಾಲಯ್ಯನವರಿಗೆ ಸರಿಸಮನಾದ ವ್ಯಕ್ತಿಯನ್ನು ನಿಲ್ಲಿಸಬೇಕು. ಇಲ್ಲವಾದರೆ ಆತ ರೌಡಿಗಳಿಂದ ಹೆದರಿಸಿ ಓಡಿಸುತ್ತಾನೆ, ಪೊಲೀಸರಿಂದ ಬೆದರಿಕೆ ಹಾಕುತ್ತಾನೆ. ಇಲ್ಲಿಂದ ಓಡಿಹೋದ 15 ಜನರೂ ಸೋಲಬೇಕು. ಇದಕ್ಕಾಗಿ ನಾನು ರಣತಂತ್ರ ರೂಪಿಸುತ್ತೇವೆ. ಸಿದ್ದರಾಮಯ್ಯ ಮತ್ತು ನನ್ನ ಮಧ್ಯೆ ಹೋರಾಟ ಬೇರೆ. ಆದರೆ ಆ 15 ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಗುರಿ ಎಂದು ಎಚ್​ಡಿಕೆ ಶಪಥ ಮಾಡಿದ್ದಾರೆ.

ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ನಮ್ಮ ಜತೆ ನಿಷ್ಠೆಯಿಂದ ಇರುವವರು ಸಭೆಗೆ ಬರುತ್ತಾರೆ. ಉತ್ತರ ಕರ್ನಾಟಕ ಭಾಗದ ಇಬ್ಬರು ಅನುಮತಿ ಪಡೆದು ಗೈರಾಗುತ್ತಾರೆ. ಉಳಿದವರು ಎಲ್ಲರೂ ಶಾಸಕಾಂಗ ಪಕ್ಷದ ಸಭೆಗೆ ಬರುತ್ತಾರೆ. ಚುನಾವಣೆಯಲ್ಲಿ ಯಾರಿಗೆ ಏನೆಲ್ಲ ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.ನಮ್ಮ ರಾಜಕೀಯ ಜೀವನವನ್ನೇ ಮುಗಿಸಲು ಹೊರಟಿದ್ದ ರಮೇಶ್​ ಕುಮಾರ್​ಗೆ ತಕ್ಕ ಉತ್ತರ ಸಿಕ್ಕಿದೆ; ಅನರ್ಹ ಶಾಸಕ ಡಾ. ಸುಧಾಕರ್

ಹಳೇ ದ್ವೇಷ ಮುಂದುವರಿಸಿ ಪ್ರಯೋಜನವಿಲ್ಲ:

ಶರತ್ ಬಚ್ಚೇಗೌಡ ನನ್ನ ದಾಯಾದಿ ಅಲ್ಲ. ಬಚ್ಚೇಗೌಡರು ನಮ್ಮ ಪಕ್ಷದಲ್ಲಿದ್ದರು. ನಮ್ಮ ನಡುವೆ ಕೆಲವೊಂದು ರಾಜಕೀಯ ಭಿನ್ನಾಭಿಪ್ರಾಯವಿತ್ತು.ಒಕ್ಕಲಿಗರನ್ನು ಒಡೆದು ಹಾಕಬೇಕೆನ್ನುವ ಕಾರಣಕ್ಕೆ ಬಿಜೆಪಿಯವರು ಅವರಿಂದ ಏನೆಲ್ಲ ಮಾತಾಡಿಸಿದರು ಎಂಬುದು ಗೊತ್ತಿದೆ. ಹಾಗಂತ ಇನ್ನೂ ಆ ದ್ವೇಷವನ್ನು ಮುಂದುವರಿಸುವುದು ಸರಿಯಲ್ಲ. 10 ವರ್ಷದ ದ್ವೇಷವನ್ನು ಇನ್ನೂ ಮುಂದುವರಿಸೋಕೆ ಆಗುವುದಿಲ್ಲ. ರಾಜಕೀಯವಾಗಿ ಯಾರೂ ಶತ್ರೂ ಅಲ್ಲ, ಮಿತ್ರರೂ ಅಲ್ಲ. ಹೊಸಕೋಟೆಯಲ್ಲಿ ಅನಿವಾರ್ಯತೆ ಇದ್ದರೆ ಪ್ರಚಾರ ಮಾಡುತ್ತೇನೆ. ಅವರು ಕರೆದರೆ ಖಂಡಿತ ಹೋಗುತ್ತೇನೆ. ಶರತ್ ಬಚ್ಚೇಗೌಡ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬಚ್ಚೇಗೌಡ ಒಕ್ಕಲಿಗರು ಎಂಬ ಕಾರಣಕ್ಕೆ ಶರತ್ ಬಚ್ಚೇಗೌಡನಿಗೆ ನಾವು ಬೆಂಬಲ ಕೊಡುತ್ತಿಲ್ಲ. ಮುಂದೆ ನನ್ನ ಪಕ್ಷಕ್ಕೂ ಅನುಕೂಲ ಆಗಬೇಕಲ್ವ? ಎಂದು ರಾಜಕೀಯ ಲೆಕ್ಕಾಚಾರ ಮಾಡಿ ಕೊಡುತ್ತಿರುವ ಬೆಂಬಲವಲ್ಲ. ಅವರು ಪ್ರಚಾರಕ್ಕೆ ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ. ಕಳೆದ ಒಂದು ವಾರದಿಂದ ಶರತ್ ಬಚ್ಚೇಗೌಡ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಎಚ್​.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Video: ಒಸಾಮಾ ಬಿನ್ ಲಾಡೆನ್ ನಮ್ಮ ದೇಶದ ಹೀರೋ; ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿಡಿಯೋ ವೈರಲ್

ಜೆಡಿಎಸ್​ ಪಕ್ಷಕ್ಕೆ ಯಾರೂ ಮುಖ್ಯವಲ್ಲ. ನನ್ನ ಭವಿಷ್ಯಕ್ಕೆ ದೇವೇಗೌಡರು ಯಾವತ್ತೂ ಚಿಂತೆ ಮಾಡಿಲ್ಲ. ನನಗೆ ರಾಜ್ಯದ ಜನರ ಭವಿಷ್ಯ ಮುಖ್ಯ.ನಾನು ರಾಜಕೀಯಕ್ಕೆ ಬರೋದೇ ದೇವೇಗೌಡರಿಗೆ ಇಷ್ಟ ಇರಲಿಲ್ಲ. ಈ ಬಗ್ಗೆ ಚರ್ಚೆ ಮಾಡೋಕೆ ಗಾಂಧಿಭವನದಲ್ಲಿ ಸಿದ್ಧತೆ ಮಾಡುತ್ತೇನೆ. ಯಾರೆಲ್ಲ ರೆಡಿ ಇದ್ದಾರೋ ಅವರೆಲ್ಲ ಬನ್ನಿ ಎಂದು ಆಹ್ವಾನ ನೀಡಿರುವ ಕುಮಾರಸ್ವಾಮಿ, ನಾನು ರಾಜ್ಯದ ಜನರ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ದಿಗೆ 19 ಸಾವಿರ ಕೋಟಿ ರೂ. ನೀಡಿದ್ದೆ. ಇನ್ನು 6 ತಿಂಗಳು ಇದ್ದಿದ್ದರೆ ಅಭಿವೃದ್ದಿ ಏನು ಅಂತ ಗೊತ್ತಾಗುತ್ತಿತ್ತು ಎಂದಿದ್ದಾರೆ. ನಾವು ಬಿಜೆಪಿಗೆ ಶರಣಾಗಿರುವಂತೆ ಬಿಂಬಿಸಲಾಗುತ್ತಿದೆ. ನಾವು ರಾಜಕೀಯವಾಗಿ ಶರಣಾಗುವ ಪ್ರಶ್ನೆಯೇ ಇಲ್ಲ.ನಾನು ಯಾರಿಗೂ ರಾಜಕೀಯವಾಗಿ ಶರಣಾಗುವುದಿಲ್ಲ ಎಂದು ಬೆಂಗಳೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

(ವರದಿ: ಮಂಜು ಆರ್ಯ)

First published: November 14, 2019, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading