ಸಮನ್ವಯ ಸಮಿತಿ ಸಭೆಗೂ ಮುನ್ನ ಸ್ಟಾಟರ್ಜಿ ಮೀಟಿಂಗ್; ಸಮಿತಿಯಲ್ಲಿ ಎಚ್.ವಿಶ್ವನಾಥ್​ಗಿಲ್ಲ ಸ್ಥಾನ?

news18
Updated:August 31, 2018, 2:08 PM IST
ಸಮನ್ವಯ ಸಮಿತಿ ಸಭೆಗೂ ಮುನ್ನ ಸ್ಟಾಟರ್ಜಿ ಮೀಟಿಂಗ್; ಸಮಿತಿಯಲ್ಲಿ ಎಚ್.ವಿಶ್ವನಾಥ್​ಗಿಲ್ಲ ಸ್ಥಾನ?
news18
Updated: August 31, 2018, 2:08 PM IST
ಚಿದಾನಂದ ಪಟೇಲ್, ನ್ಯೂಸ್ 18 ಕನ್ನಡ

ಬೆಂಗಳೂರು (ಆಗಸ್ಟ್ 31): ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕಾಗಿ ರಚನೆಗೊಂಡಿರುವ ಸಮನ್ವಯ ಸಮಿತಿ ಸಭೆ ಇಂದು ಸಂಜೆ ನಡೆಯುತ್ತಿದೆ. ಸಭೆಯಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಮಾತನಾಡಬೇಕು ಎಂಬುದರ ಕುರಿತು ಚರ್ಚಿಸಲು ಕಾಂಗ್ರೆಸ್ ಮುಖಂಡರು ಸಂಜೆ ಸ್ಟಾಟರ್ಜಿ ಸಭೆ ನಡೆಸಲಿದ್ದಾರೆ.

ಸಂಜೆ 4.30 ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸಮನ್ವಯ ಸಮಿತಿ ಸಭೆಯಲ್ಲಿ‌ ಚರ್ಚಿಸಬೇಕಾದ ವಿಷಯಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಜೆಡಿಎಸ್ ನಡೆ, ಸಿಎಂ ತೀರ್ಮಾನಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಯಾವೆಲ್ಲ ವಿಚಾರಗಳ ಚರ್ಚೆಗೆ ಬರಲಿವೆ?

ಸಮನ್ವಯ ಸಮಿತಿಯಲ್ಲಿ ಚರ್ಚಿಸದೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಬಗ್ಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ ಚರ್ಚೆ ನಡೆಯಲಿದೆ. ಹಾಗೆಯೇ, ಸಿದ್ದರಾಮಯ್ಯ ಅವರು ಇತ್ತೀಚಿಗೆ ನೀಡಿದ ಹೇಳಿಕೆಗಳು, ಕಾಂಗ್ರೆಸ್ ಶಾಸಕರ ಹೇಳಿಕೆಗಳ ಬಗ್ಗೆ ಮಾತುಕತೆ ನಡೆಯಲಿದೆ. ಸೋತ ಜೆಡಿಎಸ್​ ಅಭ್ಯರ್ಥಿಗೆ ಸಿಗುತ್ತಿರುವ ಮಾನ್ಯತೆ ಕಾಂಗ್ರೆಸ್​ ಶಾಸಕರಿಗೆ ಸಿಗುತ್ತಿಲ್ಲ ಎಂಬ ದೂರನ್ನು ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕರು ನೀಡಲಿದ್ದಾರೆ. ಹಾಗೆಯೇ ವರ್ಗಾವಣೆ ವಿಚಾರದಲ್ಲಿ ಆದ ಒಪ್ಪಂದದಂತೆ ಜೆಡಿಎಸ್​ ನಡೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಸಚಿವರ ಇಲಾಖೆಗಳಲ್ಲೂ ಸಿಎಂ ಓವರ್ ಟೇಕ್ ಮಾಡಿ, ವರ್ಗಾವಣೆ ಮಾಡುತ್ತಿದ್ದಾರೆ ಎಂದು ವಸತಿ ಸಚಿವ ಯು.ಟಿ ಖಾದರ್, ಸೇರಿದಂತೆ ಅನೇಕ‌ ಸಚಿವರ ದೂರು ನೀಡಲಿದ್ದಾರೆ. ಅಂತಿಮವಾಗಿ ಸಚಿವ ಸಂಪುಟ ವಿಸ್ತರಣೆ, ನಿಗಮ, ಮಂಡಳಿಗಳಿಗೆ ನೇಮಕ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಲ ಜಾರಿ ವಿಚಾರಗಳು ಪ್ರಧಾನವಾಗಿ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಗೆ ಬರಲಿವೆ.

ಸಮಿತಿಯಲ್ಲಿ ವಿಶ್ವನಾಥ್​ಗಿಲ್ಲ ಸ್ಥಾನ?

ಸಮನ್ವಯ ಸಮಿತಿಗೆ ಸೇರ್ಪಡೆ ಆಗುವ ಕನಸು ಕಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರ ಕನಸು ಕನಸ್ಸಾಗೇ ಉಳಿಯಲಿದೆ. ವಿಶ್ವನಾಥ್ ಸೇರ್ಪಡೆಗೆ ಸಿದ್ದರಾಮಯ್ಯ ಮೊದಲೇ ವಿರೋಧಿಸಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡರು ಕೂಡ ಮನಸು ಮಾಡುತ್ತಿಲ್ಲ ಎನ್ನಲಾಗಿದೆ.
Loading...

ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೆ ಸೇರಿಸಿಕೊಂಡರೆ ಅನವಶ್ಯಕವಾಗಿ ಕಿರಿಕಿರಿ ಹೆಚ್ಚುತ್ತದೆ. ಈಗಾಗಲೇ ಸಮಿತಿಯಲ್ಲಿ ಕುಮಾರಸ್ವಾಮಿ ಮತ್ತು ಡ್ಯಾನಿಷ್ ಅಲಿ‌ ಇದ್ದಾರೆ.
ವಿಶ್ವನಾಥ ಸೇರ್ಪಡೆಯಿಂದ ಆಗುವ ಲಾಭವೇನೂ ಇಲ್ಲ. ಸಿದ್ದರಾಮಯ್ಯಗೆ ಮುಜುಗರ ಮಾಡಲು ವಿಶ್ವನಾಥ್ ಸೇರ್ಪಡೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಎಲ್ಲಾ ಕಾರಣಕ್ಕೆ ಸದ್ಯಕ್ಕೆ ವಿಶ್ವನಾಥ್ ಅವರನ್ನು ಸಮಿತಿಗೆ ಸೇರಿಸಿಕೊಳ್ಳುವುದು ಅನುಮಾನವಾಗಿದೆ. ಒಂದು ವೇಳೆ ವಿಶ್ವನಾಥ್ ಸೇರಿದ್ದರೆ, ಕಾಂಗ್ರೆಸ್​ನ ದಿನೇಶ್​ ಗುಂಡೂರಾವ್ ಅವರಿಗೂ ಸೇರುವ ಅವಕಾಶವಿತ್ತು. ಆದರೆ, ಈಗ ವಿಶ್ವನಾಥ್ ಸೇರುವುದು ಅನುಮಾನವಾಗಿರುವದರಿಂದ ಗುಂಡೂರಾವ್ ಆಸೆಗೂ ಕಲ್ಲು ಬಿದ್ದಂತಾಗಿದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ