Cow Feeding Puppies: ಯಾದಗಿರಿಯಲ್ಲಿ ನಾಯಿ ಮರಿಗಳಿಗೆ ಹಾಲುಣಿಸುವ ಗೋಮಾತೆ.. ಅಪರೂಪದ ಬಾಂಧವ್ಯ

ತಾಯಿ ಶ್ವಾನಕ್ಕೆ ತನ್ನ ನಾಲ್ಕು ಮರಿಗಳಿಗೆ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಾಯಿ ಮರಿಗಳು ಆಕಳಿನ ಮೊಲೆ ಹಾಲು ಕುಡಿಯಲು ಮುಂದಾಗಿದ್ದಾವೆ.

ಮರಿಗಳಿಗೆ ಹಾಲುಣಿಸುತ್ತಿರುವ ಹಸು

ಮರಿಗಳಿಗೆ ಹಾಲುಣಿಸುತ್ತಿರುವ ಹಸು

  • Share this:
ಯಾದಗಿರಿ: ನಿತ್ಯವೂ ಹಸಿವಿನಿಂದ ಬಳಲುತ್ತಿರುವ ಶ್ವಾನ ಮರಿಗಳಿಗೆ(Puppies)  ಗೋವು ( Cow) ತಾಯಿಯ ಪ್ರೀತಿ (mother love) ತೋರಿ ಶ್ವಾನ ಮರಿಗಳಿಗೆ ಹೊಟ್ಟೆ ತುಂಬಿಸುವ ಮೂಲಕ ಮಾತೃಪ್ರೆಮ ಮೆರೆಯುತ್ತಿದೆ. ಪೇಠ ಅಮ್ಮಾಪುರ ಗ್ರಾಮದಲ್ಲಿ ಗೋ ಮಾತೆಯ ತಾಯಿಯ ಪ್ರಿತಿಯ ದೃಶ್ಯವು ಕಾಣಬಹುದು.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಈ ಮನಕಲುಕುವ  ತಾಯಿ ಪ್ರೀತಿ ಕಾಣಬಹುದಾಗಿದೆ.ಕನಕಪ್ಪ ಕಟ್ಟಿಮನಿ ಅವರಿಗೆ ಸೇರಿದ ಗೋವು ಕಳೆದ ಐದು ದಿನಗಳಿಂದ ಶ್ವಾನ ಮರಿಗಳಿಗೆ ಹಾಲು ಉಣಿಸುತ್ತಿದೆ.

ಶ್ವಾನಗಳಿಗೆ ಹಾಲುಣಿಸುವ ಹಸು 

ಹಸಿವಿನಿಂದ ಬಳಲುತ್ತಿರುವರನ್ನು ಕಂಡು ಅದೆಷ್ಟೋ ಜನರು ಯಾವುದೇ ಸಹಾಯ ಮಾಡದೆ ಅವರ ಸಹವಾಸ ಯಾಕೆ ನಾವು ಮಾಡೋಣವೆಂದು ಹಾಗೆ ಹೋಗುತ್ತಾರೆ. ಆದರೆ ಮಾನವೀಯ ಗುಣವುಳ್ಳವರು ಹಸಿವಿನ ಕಷ್ಟ ಅರಿತು ಹೊಟ್ಟೆ ತುಂಬಿಸಿ ಮಾನವೀಯ ಕಾಳಜಿ ತೊರುತ್ತಾರೆ.ಆದರೆ, ಮಾನವೀಯ ಕಾಳಜಿ ತೊರಿ ಹಸಿವು ನಿಗಿಸುವ ಸಂಖ್ಯೆ ಈಗ ವಿರಳವಾಗಿದೆ.ಅದೆನೆ ಇರಲಿ ,,ಜನರು ಹಸಿವಿನಿಂದ ಬಳಲುತ್ತಿದ್ದರೆ ಸಹಾಯ ಹಸ್ತ ಚಾಚು ಚಾಚಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ, ಪೇಠ ಅಮ್ಮಾಪುರ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಶ್ವಾನಗಳ ಹಸಿವಿನ ಕೂಗಿಗೆ ಗೋವು ಶ್ವಾನಗಳಿಗೆ ಹಸಿವು ನಿಗಿಸುತ್ತಿದೆ.



ಮರಿಗಳಿಗೆ ಏನೋ ಪ್ರೀತಿ 

ಶ್ವಾನವು 4 ಮರಿಯನ್ನು ಹಾಕಿದ್ದು ನಾಲ್ಕು ಮರಿಗಳಿಗೆ ಹಾಲು ಕೊರತೆಯಾಗುತ್ತಿದೆ.ತಾಯಿ ಶ್ವಾನಕ್ಕೆ ತನ್ನ ನಾಲ್ಕು ಮರಿಗಳಿಗೆ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಾಯಿ ಮರಿಗಳು ಆಕಳಿನ ಮೊಲೆ ಹಾಲು ಕುಡಿಯಲು ಮುಂದಾಗಿದ್ದಾವೆ. ಮೊದಲ ದಿನವು ಗೋ ಮಾತೆಯು ಶ್ವಾನ ಮರಿಗಳಿಗೆ ಹಾಲು ಉಣಿಸಿ ಹೊಟ್ಟೆ ತುಂಬಿಸಿತು.ಇದನ್ನೇ ರೂಢಿ ಮಾಡಿಕೊಂಡ ಶ್ವಾನ ಮರಿಗಳು ಗೋ ಮಾತೆ ಕಂಡು ಬೆನ್ನಟ್ಟಿ ಹಾಲು ಸೇವನೆ ಮಾಡುತ್ತಿದ್ದಾವೆ.ಬೆಳಿಗ್ಗೆ ಹಾಗೂ ಸಂಜೆ ಎರಡು ವೇಳೆ ಗೋ ಮಾತೆ ಹಾಲುಣಿಸುತ್ತಿದೆ.

ಇದನ್ನೂ ಓದಿ: Cows: ಗೋವುಗಳ ಮೇಲೆ ಅದೇನು ಪ್ರೀತಿ! ಆಕಳುಗಳಿಗಾಗಿ ಬೆಡ್​ರೂಮ್​ ನಿರ್ಮಿಸಿದ್ದಾಳೆ ಈ ಮಹಿಳೆ!

ಈ ದೃಶ್ಯ ಕಂಡು ಜನರು ನಿಬ್ಬೆರಗಾಗಿದ್ದಾರೆ

ಆಕಳು ಹೊರಗಡೆ ಮೇವು ತಿಂದು ಬಂದ ನಂತರ ಗ್ರಾಮದ ವಾಲ್ಮೀಕಿ ವೃತ್ತದ ಸಮೀಪದಲ್ಲಿ ಇರುವ ಶ್ವಾನ ಮರಿಗಳನ್ನು ಹೂಡಿಕೆಕೊಂಡು ಬಂದು ಶ್ವಾನ ಮರಿಗಳಿಗೆ ಹಾಲುಣಿಸುತ್ತದೆ.ಒಂದು ವೇಳೆ ಶ್ವಾನಗಳು ಕಾಣದಿದ್ದರೆ ಗೋವು ಕನಕಪ್ಪ ಮನೆಗೆ ಬರುತ್ತದೆ ಅವ್ಯಾಗ ಶ್ವಾನ‌ ಮರಿಗಳು ಗೋವು ಇದ್ದ ಕಡೆ ಕನಕಪ್ಪ ಮನೆ ಕಡೆ ಬಂದು ಹಾಲುಣಿಸುತ್ತದೆ.ಗೋವು ತನ್ನ ಕರುವಿಗೆ ಹಾಲು ಕುಡಿಸುವದನ್ನು ಬಿಟ್ಟಿದೆಯಂತೆ.ತನ್ನ ಕರುವಿಗೆ ಹಾಲುಣಿಸದಿದ್ದರು ನಾಲ್ಕು ಶ್ವಾನ ಮರಿಗಳಿಗೆ ಹಾಲುಣಿಸಿ ತಾಯಿ ಮಮತೆ ತೊರುತ್ತಿದೆ.ಗೋ ಮಾತೆಯೆ ಶ್ವಾನ ಮರಿಗಳಿಗೆ ತಾಯಿ ಸ್ವರೂಪಿಯಾಗಿದೆ.ಈ ದೃಶ್ಯ ಕಂಡು ಜನರು ನಿಬ್ಬೆರಗಾಗಿದ್ದಾರೆ.

ವಿಡಿಯೋ ವೈರಲ್​​

ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ.ಆದರೆ, ಈ ಗೋ ಮಾತೆಯು ತದ್ವಿರುದ್ಧವಾಗಿರುವ ಗೋವು ಹಾಗೂ ಶ್ವಾನಗಳ ಮಾತೃ ಪ್ರೇಮದಿಂದ ಯಾವುದೇ ಪ್ರಾಣಿ ಇರಲಿ ತಾಯಿ ಹೃದಯ ಪ್ರಿತಿ  ಮಹತ್ವ ಸಾರುತ್ತದೆ. ಈ ದೃಶ್ಯವನ್ನು ಮಲ್ಲು ಕೊಳ್ಳುರು ಮೊಬೈಲ್ ಕ್ಯಾಮರಾದಲ್ಲಿ ಸೇರೆ ಹೀಡಿದಿದ್ದು.ಗೋ ಮಾತೆಯ ಶ್ವಾನಗಳ ಪ್ರಿತಿಯ ವಿಡಿಯೋ ಎಲ್ಲಡೇ ವೈರಲ್ ಆಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪೇಠ ಅಮ್ಮಾಪುರ ಗ್ರಾಮದ ಮುಖಂಡ ಮಲ್ಲಿಕಾರ್ಜುನರೆಡ್ಡಿ ಮಾತನಾಡಿ,ಕಳೆದ ಐದು ದಿನಗಳಿಂದ ಆಕಳು ನಾಲ್ಕು ಶ್ವಾನ ಮರಿಗಳಿಗೆ ಹಾಲು ಕುಡಿಸುತ್ತಿದೆ.ಗೋವು ಮರಿ ಇದ್ದ ಕಡೆ ತೆರಳಿ ಮೊಲೆ ಹಾಲು ಕುಡಿಸುತ್ತದೆ ಒಂದು ಕಡೆ ಮರಿಗಳು ಇರದಿದ್ದರೆ ಮರಿಗಳು ನಂತರ ಗೋವು ಇದ್ದ ಕಡೆ ಗೋವಿನ ಮೊಲೆ ಹಾಲು ಸೇವನೆ ಮಾಡಲು ಹೂಡಿಕಿಕೊಂಡು ಬಂದು  ಗೋವು ಮಾತೆಯ ಹಾಲು ಕುಡಿಯುತ್ತವೆ.ಕಳೆದ ಐದು ದಿನಗಳಿಂದ ಗೋವು ಶ್ವಾನ‌ ಮರಿಗಳಿಗೆ ಹಾಲು ಕುಡಿಸುತ್ತದೆ.
Published by:Kavya V
First published: