ಶಾಪಿಂಗ್​​ ಮಾಲ್​ಗಳಲ್ಲಿ ಮೊಬೈಲ್ ನಂಬರ್​​​​ ಶೇರ್​ ಮಾಡಬೇಡಿ; ನಗರ ಪೊಲೀಸ್​ ಆಯುಕ್ತ​​ ಭಾಸ್ಕರ್​​ ರಾವ್​​

ಪ್ರಸ್ತುತ ಮಾಲ್​​ಗಳಲ್ಲಿ ನಂಬರ್​​ ನೀಡಿ ಹ್ಯಾಕಿಂಗ್​ಗೊಳಗಾದ ಹತ್ತಾರು ಸಾವಿರ ಜನ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ಧಾರೆ. ಇದಕ್ಕೆಲ್ಲ ಮೊಬೈಲ್ ನಂಬರ್ ನೀಡುವುದೇ ಕಾರಣ. ವಿನಾಕಾರಣ ಎಲ್ಲಿಯೂ ಮೊಬೈಲ್ ನಂಬರ್ ಹಂಚಿಕೊಳ್ಳಬೇಡಿ ಎಂದಿದ್ಧಾರೆ.

news18-kannada
Updated:December 15, 2019, 8:37 PM IST
ಶಾಪಿಂಗ್​​ ಮಾಲ್​ಗಳಲ್ಲಿ ಮೊಬೈಲ್ ನಂಬರ್​​​​ ಶೇರ್​ ಮಾಡಬೇಡಿ; ನಗರ ಪೊಲೀಸ್​ ಆಯುಕ್ತ​​ ಭಾಸ್ಕರ್​​ ರಾವ್​​
ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್
  • Share this:
ಬೆಂಗಳೂರು(ಡಿ.15): ಶಾಪಿಂಗ್​​​ ಮಾಲ್​​ಗಳಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್​​ ನಂಬರ್​​ ಶೇರ್​​ ಮಾಡಬೇಡಿ ಎಂದು ನಗರ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್​ ಸಾರ್ವಜನಿಕರಿಗೆ ಹೇಳಿದ್ಧಾರೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್​​ ಕ್ರೈಮ್​​ ಸಂಬಂಧ ಟ್ವೀಟ್​ ಮಾಡಿರುವ ಭಾಸ್ಕರ್​​ ರಾವ್​​, ಶಾಂಪಿಗ್​​ಗೆ ಹೋದಾಗ ಮಾಲ್​​ ಮತ್ತು ಶಾಪ್​ಗಳಲ್ಲಿ ಮೊಬೈಲ್​​ ನಂಬರ್​​ ಹಂಚಿಕೊಳ್ಳಬೇಡಿ. ಇದರಿಂದ ಸೈಬರ್​​ ಅಪರಾಧಗಳು ತಡೆಗಟ್ಟಬಹುದು ಎಂದು ಹೇಳಿದ್ದಾರೆ.ಶಾಪಿಂಗ್​ ಮಾಡುವಾಗ ಮಾಲ್​ಗಳಲ್ಲಿ ನಿಮ್ಮ ಮೊಬೈಲ್​ ನಂಬರ್​ ಕೇಳುತ್ತಾರೆ. ನಾವು ನಂಬರ್​​ ನೀಡಿದರೆ, ಇದರ ಮೂಲಕ ನಮ್ಮ ಆಧಾರ್ ನಂಬರ್​​ ಮತ್ತು ಮನೆ ಅಡ್ರೆಸ್​​ ಪಡೆಯುತ್ತಾರೆ. ಹೀಗೆ ಸಂಗ್ರಹಿಸಿದ ನಮ್ಮ ಡಾಟಾ ಹಣಕ್ಕೆ ಮಾರುತ್ತಾರೆ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ಧಾರೆ.

ಇನ್ನು ಈ ಟ್ವೀಟ್​​ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ಧಾರೆ.​​ ಆಗ ಟ್ವಿಟ್ಟಿಗರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಭಾಸ್ಕರ್​ ರಾವ್​​, ಡಾಟಾ ಮಾರಾಟ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಇದರಿಂದ ಹ್ಯಾಕಿಂಗ್​​ ಕೂಡ ಮಾಡಲಾಗುತ್ತಿದೆ. ನಿಮ್ಮ ಖಾಸಗಿ ನಂಬರ್​ ಯಾರೊಂದಿಗೂ ಶೇರ್​ ಮಾಡಬೇಡಿ ಎಂದು ತಿಳಿಸಿದ್ಧಾರೆ.ಪ್ರಸ್ತುತ ಮಾಲ್​​ಗಳಲ್ಲಿ ನಂಬರ್​​ ನೀಡಿ ಹ್ಯಾಕಿಂಗ್​ಗೊಳಗಾದ ಹತ್ತಾರು ಸಾವಿರ ಜನ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ಧಾರೆ. ಇದಕ್ಕೆಲ್ಲ ಮೊಬೈಲ್ ನಂಬರ್ ನೀಡುವುದೇ ಕಾರಣ. ವಿನಾಕಾರಣ ಎಲ್ಲಿಯೂ ಮೊಬೈಲ್ ನಂಬರ್ ಹಂಚಿಕೊಳ್ಳಬೇಡಿ ಎಂದಿದ್ಧಾರೆ.
Published by: Ganesh Nachikethu
First published: December 15, 2019, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading