High Court: ಹಿಜಾಬ್ ವೀಡಿಯೋಗಾಗಿ ಮಕ್ಕಳ ಬೆನ್ನು ಬೀಳದಂತೆ 60ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ವಿರುದ್ಧ PIL ಸಲ್ಲಿಕೆ

PIL In Karnataka High Court: ಅಬ್ದುಲ್ ಮನ್ಸೂರ್, ಮುಹಮ್ಮದ್ ಖಲೀಲ್ ಮತ್ತು ಆಸಿಫ್ ಅಹ್ಮದ್ ಎಂಬವರು ಮಾಧ್ಯಮ ಸಂಸ್ಥೆಗಳ ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.. ಅರ್ಜಿಯಲ್ಲಿ ಪ್ರಸ್ತುತ ಮಾಧ್ಯಮದಲ್ಲಿರುವ ಕೆಲವು ಸಂಘಟನೆಗಳ ಹಿತಾಸಕ್ತಿಗಳಿಂದ ವಿದ್ಯಾರ್ಥಿನಿಯರನ್ನು ಅವಮಾನ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

 • Share this:
  ಉಡುಪಿಯ ಸರಕಾರಿ ಕಾಲೇಜು(Udupi Government College) ಒಂದರಲ್ಲಿ ಶುರುವಾಗಿ ಈಗ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ(National Level) ಬಹಳ ಸದ್ದು ಮಾಡುತ್ತಿರುವ ಹಿಜಾಬ್(HIjab) ವಿವಾದ ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುತ್ತಿದೆ. ರಾಜಕೀಯ(Political) ಸ್ವರೂಪ ಪಡೆದು ಕೊಂಡಿರುವ ಹಿಜಾಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಸಂಕೇತವನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್(High Court) ಮಧ್ಯಂತರ ಆದೇಶ ನೀಡಿ ವಿಚಾರಣೆ ನಡೆಸುತ್ತಿದ್ದರು ರಾಜ್ಯದಲ್ಲಿ ಪ್ರಸ್ತುತ ಹಿಜಾಬ್ ವಿವಾದ ತೆರೆಮರೆಗೆ ಸರಿಯುತ್ತಿಲ್ಲ.. ಇದಲ್ಲದೆ ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ಸಹ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ..

  ಇದು ಇಷ್ಟು ಸಾಲದು ಎಂಬಂತೆ ಪ್ರತಿನಿತ್ಯ ಹಿಜಾಬ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ.. ಇದರ ಜೊತೆಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಕೆಲವು ಮಾಧ್ಯಮ ಸಂಸ್ಥೆಗಳ ವರದಿಗಾರರು ಹಿಜಾಬ್ ನ ವಿಡಿಯೋ ಹಾಗೂ ಫೋಟೋ ತೆಗೆಯಲು ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಬೆನ್ನುಬಿದ್ದಿದ್ದಾರೆ. ಹೀಗಾಗಿ ಫೋಟೋ ಹಾಗೂ ವಿಡಿಯೋ ಗಾಗಿ ಮಹಿಳೆಯರ ಬೆನ್ನು ಬೀಳದಂತೆ ಮಾಧ್ಯಮ ಸಂಸ್ಥೆಗಳ ವಿರುದ್ಧ ಅರ್ಜಿಯನ್ನ ಹೈಕೋರ್ಟ್ ಗೆ  ದಾಖಲಿಸಲಾಗಿದೆ.

  60ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ವಿರುದ್ಧ ಅರ್ಜಿ

  ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಯಾದ ಬಳಿಕ ಕೆಲವು ದಿನಗಳ ಹಿಂದೆ ಖಾಸಗಿ ಮಾಧ್ಯಮದ ವರದಿಗಾರನೊಬ್ಬ ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂದೆ ಬಿದ್ದು ವಿಡಿಯೋ ತೆಗೆಯಲು ಪ್ರಯತ್ನ ಪಟ್ಟಿದ್ದ.. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ವರದಿಗಾರನ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಹಲವರು ಈ ವರದಿಗಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು..

  ಇದನ್ನೂ ಓದಿ: 8ನೇ ದಿನವೂ ವಾದ-ಪ್ರತಿವಾದ ಆಲಿಸಿದ ಪೀಠ; ನಾಳೆಗೆ ವಿಚಾರಣೆ ಮುಂದೂಡಿಕೆ

  ಇದರ ಬೆನ್ನಲ್ಲೇ ಹಿಜಾಬ್ ಧರಿಸಿ ಹೋಗುವ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನ ವೀಡಿಯೋಗಾಗಿ ಅವರ ಬೆನ್ನು ಬೀಳದಂತೆ ಅರವತ್ತಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳ ವಿರುದ್ಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ..ಅರ್ಜಿಯಲ್ಲಿ ಮಾಧ್ಯಮ ಸಂಸ್ಥೆಗಳ ಹೊರತಾಗಿ ಫೇಸ್ಬುಕ್, ಟ್ವಿಟರ್, ಗೂಗಲ್, ಯಾಹೂ ಮತ್ತು ಇನ್‍ಸ್ಟಾಗ್ರಾಂ, ಯುಟ್ಯೂಬ್ ಮತ್ತು ವಾಟ್ಸ್ ಆ್ಯಪ್ ಇವುಗಳನ್ನೂ ಪ್ರತಿವಾದಿಗಳೆಂದು ಹೆಸರಿಸಲಾಗಿದೆ.

  ಧರ್ಮ ಹಾಗೂ ಸಂಸ್ಕೃತಿಯ ನಂಬಿಕೆಯನ್ನ ಅವಮಾನಿಸಲಾಗುತ್ತಿದೆ ಎಂದು ದೂರು

  ಇನ್ನು ಅಬ್ದುಲ್ ಮನ್ಸೂರ್, ಮುಹಮ್ಮದ್ ಖಲೀಲ್ ಮತ್ತು ಆಸಿಫ್ ಅಹ್ಮದ್ ಎಂಬವರು ಮಾಧ್ಯಮ ಸಂಸ್ಥೆಗಳ ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.. ಅರ್ಜಿಯಲ್ಲಿ ಪ್ರಸ್ತುತ ಮಾಧ್ಯಮದಲ್ಲಿರುವ ಕೆಲವು ಸಂಘಟನೆಗಳ ಹಿತಾಸಕ್ತಿಗಳಿಂದ ವಿದ್ಯಾರ್ಥಿನಿಯರನ್ನು ಅವಮಾನ ಮಾಡಲಾಗುತ್ತಿದೆ. ಅಲ್ಲದೆ ವಿದ್ಯಾರ್ಥಿನಿಯರ ಧರ್ಮ ನಂಬಿಕೆ ಗುರುತು ಮತ್ತು ಸಂಸ್ಕೃತಿಯನ್ನು ಅವಮಾನ ಮಾಡಲಾಗುತ್ತಿದೆ.

  ಅಷ್ಟೇ ಅಲ್ಲದೇ ಯುವಸಮುದಾಯವನ್ನು ಹಿಂಸಾತ್ಮಕ ಕ್ರಮ ಮತ್ತು ಪ್ರಕೃತಿ ಕ್ರಮಗಳಿಗೆ ಕಾರಣವಾಗುವಂತೆ ಪ್ರಚೋದನೆ. ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

  ಶಾಲಾ ಗೇಟ್ ಗಳ ಮುಂದೆ ಹಿಜಾಬ್ ತೆಗೆಸುತ್ತಿರುವುದು ಆಕ್ರೋಶ

  ಇನ್ನು ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಬಳಿಕ ಶಾಲೆ-ಕಾಲೇಜುಗಳಿಗೆ ಬರುತ್ತಿರುವ ವಿದ್ಯಾರ್ಥಿನಿಯರನ್ನು ಶಾಲಾ-ಕಾಲೇಜುಗಳ ಗೇಟ್ ಮುಂದೆ ತಡೆದು ನಿಲ್ಲಿಸಲಾಗುತ್ತಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆ-ಕಾಲೇಜು ಒಳಗೆ ಪ್ರವೇಶಿಸದಂತೆ ತಡೆದು, ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಸಾರ್ವಜನಿಕವಾಗಿ ಶಾಲಾ ಗೇಟುಗಳ ಹೊರಗೆ ನಿಲ್ಲಿಸಿ ಹಿಜಾಬ್, ಬುರ್ಖಾ ತೆಗೆಯುವಂತೆ ಮಾಡುವ ಮೂಲಕ ಅವರನ್ನು ಅವಮಾನಿಸುತ್ತಿರುವ ರೀತಿಯಿಂದ ಮುಸ್ಲಿಂ ಸಮುದಾಯದ ಸದಸ್ಯರಿಗೆ ನೋವುಂಟಾಗಿದೆ, ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

  ಇದನ್ನೂ ಓದಿ: 14 ದಿನ ನ್ಯಾಯಾಂಗ ಬಂಧನ: ನಟ ಚೇತನ್ ವಿರುದ್ಧ ದಾಖಲಾಗಿರುವ FIRನಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ

  ಕಳೆದ ಒಂದು ತಿಂಗಳಿನಿಂದ ಕ್ಯಾಮರಾಮೆನ್‍ಗಳು ಮತ್ತು ವರದಿಗಾರರು ಶಾಲಾ ಕಾಲೇಜುಗಳ ಆವರಣಗಳ ಒಳಗೆ ಮತ್ತು ಸುತ್ತಮುತ್ತ  ಇದ್ದುಕೊಂಡು ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದಂತೆ ಅವರ ಹಿಂದೆ ಬಿದ್ದು ಫೋಟೋ, ವೀಡಿಯೋ ತೆಗೆಯುವುದಲ್ಲದೆ ಅವರು ಹಿಜಾಬ್ ತೆಗೆಯುವ ವೇಳೆಯೂ ಚಿತ್ರೀಕರಣ ನಡೆಸಿ ಅವರನ್ನು ಅವಮಾನಿಸುವುದಲ್ಲದೆ ಪ್ರಜಾಪ್ರಭುತ್ವದ ಮೌಲ್ಯಗಳನ್ನೂ ಗೌಣವಾಗಿಸಿದ್ದಾರೆ,'' ಎಂದು ಅರ್ಜಿಯಲ್ಲಿ ಹೇಳಲಾಗಿದೆ
  Published by:ranjumbkgowda1 ranjumbkgowda1
  First published: