ಕೋಲಾರದಲ್ಲಿ Datta Peetaಕ್ಕೆ ತೆರಳುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ; ತಾಲಿಬಾನೀಕರಣ ಸಹಿಸಲ್ಲ ಎಂದ Muthalik

ಮುಸ್ಲಿಂ ಕಿಡಿಗೇಡಿಗಳಿಂದ ಕೃತ್ಯ ನಡೆದಿದೆ. ಭಜನೆ ಮಾಡಿಕೊಂಡು ಬರುವಾಗ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಮುಸ್ಲಿಂ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು. ಇನ್ಮೇಲೆ ದಾದಾಗಿರಿ, ತಾಲಿಬಾನೀಕರಣ ಇಲ್ಲಿ ನಡೆಯೋದಿಲ್ಲ ಎಂದು ಮುತಾಲಿಕ್​ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಕೋಲಾರ & ಚಿಕ್ಕಮಗಳೂರು: ನಿನ್ನೆ ರಾತ್ರಿ ನಗರದ ಎಂಬಿ ರಸ್ತೆಯ ವಿಶಾಲ್ ಮಾರ್ಟ್ ಎದುರು ಚಿಕ್ಕಮಗಳೂರಿನ ದತ್ತಪೀಠಕ್ಕೆ (Dattapita, Chikmagalur) ತೆರಳುತ್ತಿದ್ದ ಮಿನಿ ಬಸ್ ಮೇಲೆ ಕಲ್ಲು ತೂರಾಟ (Stone’s Throw on a Bus) ನಡೆದಿದೆ. ಕಲ್ಲು ತೂರಾಟದಿಂದ ಹಿಂಭಾಗದ ಗಾಜು ಪುಡಿ ಪುಡಿ ಯಾಗಿದೆ. ಬಸ್​ ಒಳಗೆ ಮುಂಭಾಗ ಕುಳಿತಿದ್ದ ಇಬ್ಬರಿಗೆ ಗಾಯಗಳಾಗಿವೆ. ಕೃತ್ಯ ಖಂಡಿಸಿ ಹಿಂದೂ ಪರ ಸಂಘಟನೆಗಳು ತಡರಾತ್ರಿ ಪ್ರತಿಭಟನೆ (Protest) ನಡೆಸಿದವು. ಕೋಲಾರ ನಗರ ಠಾಣೆ ಎದುರು ನೂರಾರು ಯುವಕರುವ ದತ್ತ ಮಾಲಾಧಾರಿಗಳು ಪ್ರತಿಭಟನೆ ನಡೆಸಿದರು. ಬಸ್ ಮೇಲೆ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ DYSP ಗಿರಿ ಅವರು ಭೇಟಿ, ಹಿಂದೂಪರ ಸಂಘಟನೆಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಿದರು.

ಆರೋಪಿಗಳ ಸೆರೆಗೆ ವಿಶೇಷ ಪೊಲೀಸ್​ ತಂಡ

ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಪೊಲೀಸರ ಕ್ರಮದ ಬಳಿಕ ಪ್ರತಿಭಟನಾನಿರತರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ನಂತರ ಪೊಲೀಸರು ದತ್ತಪೀಠಕ್ಕೆ ತೆರಳಲು ಮತ್ತೊಂದು ಮಿನಿ ಬಸ್ ವ್ಯವಸ್ಥೆ ಮಾಡಿಕೊಟ್ಟರು. ದತ್ತಪೀಠ ದರ್ಶನಕ್ಕೆ ಕೋಲಾರದಿಂದ ಬಸ್ ನಲ್ಲಿ 24 ಮಾಲಾಧಾರಿಗಳು ಪ್ರಯಾಣ ಬೆಳೆಸಿದ್ದಾರೆ.

ಬಸ್​ ಮೇಲೆ ಕಲ್ಲು ತೂರಾಟ


ದಾದಾಗಿರಿ, ತಾಲಿಬಾನೀಕರಣ ಇಲ್ಲಿ ನಡೆಯೋದಿಲ್ಲ

ಕೋಲಾರದಲ್ಲಿ ನಡೆದ ಘಟನೆ ಸಂಬಂಧ ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಕ್ರೋಶ ವ್ಯಕ್ತಪಡಿಸಿದರು.  ಮುಸ್ಲಿಂ ಕಿಡಿಗೇಡಿಗಳಿಂದ ಕೃತ್ಯ ನಡೆದಿದೆ. ಭಜನೆ ಮಾಡಿಕೊಂಡು ಬರುವಾಗ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಮುಸ್ಲಿಂ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು. ಇನ್ಮೇಲೆ ದಾದಾಗಿರಿ, ತಾಲಿಬಾನೀಕರಣ ಇಲ್ಲಿ ನಡೆಯೋದಿಲ್ಲ. ಹಲ್ಲೆ ಪ್ರವೃತ್ತಿ ನಿಲ್ಲಿಸದಿದ್ರೆ ಒದಿತ್ತೀವಿ ಅಂತ ಎಚ್ಚರಿಕೆ ಕೊಡ್ತಾ ಇದ್ದೀವಿ ಎಂದರು. ಡಿಸಿ ಅವ್ರಿಗೆ ಹೇಳ್ತೀನಿ ಕೂಡಲೇ ಹದ್ದು ಬಸ್ತಿನಲ್ಲಿಡಬೇಕು. ಅಭಿಯಾನಕ್ಕೆ ಸೂಕ್ಷ್ಮ ಪ್ರದೇಶದಲ್ಲಿ ರಕ್ಷಣೆ ಯಾಕೆ ಕೊಡಲಿಲ್ಲ. ಮುಖ್ಯಮಂತ್ರಿ, ಗೃಹಸಚಿವರಿಗೆ ಹೇಳ್ತಾ ಇದ್ದೀನಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಬಂಧಿಸದಿದ್ರೆ ನಾನೇ ನಾಳೆ ಕೋಲಾರಕ್ಕೆ ಹೋಗುವುದಕ್ಕೆ ನಿಶ್ಚಿತ ಮಾಡಿದ್ದೇನೆ‌ ಎಂದರು.

ಇದನ್ನೂ ಓದಿ: Bitcoin Scam: ಯಾರನ್ನೂ ಬಿಡಲ್ಲ, ಎಲ್ಲರನ್ನ ಬಲಿ ಹಾಕ್ತೀವಿ: ಸುರ್ಜೆವಾಲಾಗೆ ಸಿಎಂ ಬೊಮ್ಮಾಯಿ 4 ಪ್ರಶ್ನೆ

ಘಟನೆ ಖಂಡಿಸಿ ಪ್ರತಿಭಟನೆ

ಕೋಲಾರದಲ್ಲಿ ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ನಗರದ ಶಾರದ ಮಠದಲ್ಲಿ ಮುಂಭಾಗ ಪ್ರತಿಭಟನೆ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದ ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಎಸ್​ಪಿ ಅಕ್ಷಯ್​ ಅವರಿಗೆ ಮನವಿ ಸಲ್ಲಿಸಿ, ಆರೋಪಿಗಳನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದರು.

ಮೂಡಿಗೆರೆ ಬಸ್​ ನಿಲ್ದಾಣದಲ್ಲಿ ಮಾರಾಮಾರಿ

ಇನ್ನು ಮೂಡಿಗೆರೆ ಸರ್ಕಾರಿ ಬಸ್ ನಿಲ್ದಾಣದೊಳಗೆ ಹೊಡೆದಾಟ ನಡೆದಿದೆ. ಎರಡು ಗುಂಪುಗಳ ನಡುವೆ  ಮಾರಾಮಾರಿ ಆಗಿದೆ. ಓರ್ವ ಯುವಕನಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸರಿಂದ ಓರ್ವನ ಬಂಧನವಾಗಿದೆ. ಮಾರಾಮಾರಿಯಿಂದ ಬಸ್​ ನಿಲ್ದಾಣದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿನಿಯರು, ಮಹಿಳೆಯರಿಗೆ ಭದ್ರತೆ ಇಲ್ಲ. ಬಸ್ ನಿಲ್ದಾಣದಲ್ಲಿ ಇರುವ ಸಿಸಿ ಕ್ಯಾಮಾರಗಳು ಕೆಟ್ಟು ನಿಂತಿವೆ. ಬಸ್ ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿನಿಯರು, ಮಹಿಳೆಯರಿಗೆ ಭದ್ರತೆ ಇಲ್ಲ. ಬಸ್ ನಿಲ್ದಾಣದಲ್ಲಿ ಇರುವ ಸಿಸಿ ಕ್ಯಾಮಾರಗಳು ಕೆಟ್ಟು ನಿಂತಿವೆ.ಕೂಡಲೇ ಸಿಸಿಟಿವಿ ದುರಸ್ಥಿ ಮಾಡುವಂತೆ ಸ್ಥಳಿಯರ ಆಗ್ರಹಿಸಿದರು. ಪುಂಡರ ಹಾವಳಿ ನಿಯಂತ್ರಿಸುವಂತೆ ಪೊಲೀಸರಿಗೆ  ಸ್ಥಳೀಯರ ಒತ್ತಾಯಿಸಿದರು.
Published by:Kavya V
First published: