• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Haveri: ಮಸೀದಿ ಮೇಲೆ ಕಲ್ಲು, ಸಿಎಂ ತವರು ಜಿಲ್ಲೆ ಧಗಧಗ! ಈಗ ಹೇಗಿದೆ ಪರಿಸ್ಥಿತಿ?

Haveri: ಮಸೀದಿ ಮೇಲೆ ಕಲ್ಲು, ಸಿಎಂ ತವರು ಜಿಲ್ಲೆ ಧಗಧಗ! ಈಗ ಹೇಗಿದೆ ಪರಿಸ್ಥಿತಿ?

ಕಲ್ಲು ತೂರಾಟ

ಕಲ್ಲು ತೂರಾಟ

ಇಂದು ರಟ್ಟಿಹಳ್ಳಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯುತ್ತಿತ್ತು. ಅವರು ರ್ಯಾಲಿ ಮಾಡುವ ಮಾರ್ಗ ಬಿಟ್ಟು ಕಾರಂಜಿ ಸರ್ಕಲ್​ಗೆ ಹೋಗಿದ್ದಾರೆ. ಈ ವೇಳೆ ಕಲ್ಲು ತೂರಾಟ ನಡೆದಿದ್ದು, ಪರಿಣಾಮ ಹಾನಿಯಾಗಿದೆ.

 • News18 Kannada
 • 2-MIN READ
 • Last Updated :
 • Haveri, India
 • Share this:

ಹಾವೇರಿ: ರಾಯಣ್ಣ ಪುತ್ಥಳಿ (Sangolli Rayanna) ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದನ್ನು ವಿರೋಧಿಸಿ ಇಂದು ಹಿಂದೂಪರ ಸಂಘಟನೆಗಳು (Hindu Groups) ಕರೆ ನೀಡಿದ್ದ ಬೃಹತ್ ಬೈಕ್ ರ್ಯಾಲಿ (Bike Rally ) ವೇಳೆ ಮತ್ತೆ ಕಲ್ಲು ತೂರಾಟ (Stone Pelting) ನಡೆದಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಕಾರಂಜಿ ಸರ್ಕಲ್ ನಲ್ಲಿ ನಡೆದಿದೆ. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನಲೆ ಪೋಲಿಸರಿಂದ ಹೈ ಅಲರ್ಟ್ ಘೋಷಣೆ ಮಾಡಿದ್ದು, ಪರಿಸ್ಥಿತಿಯನ್ನು ಅತೋಟಿಗೆ ತಂದಿದ್ದಾರೆ. ರ್ಯಾಲಿ ವೇಳೆ ಗದ್ದಲ, ಗಲಾಟೆ ಜೋರಾಗಿ ನಡೆದಿದ್ದು, ಕಲ್ಲು ತೂರಾಟ ನಡೆಸಲಾಗಿದೆ. ಅಂಗನವಾಡಿ ಸೇರಿದಂತೆ ಹಲವು ಅನ್ಯಕೋಮಿನ ಮನೆಯ ಕಲ್ಲು ತೂರಾಟ ನಡೆಸಲಾಗಿದ್ದು, ಘಟನೆಯಲ್ಲಿ ಮಹಿಳೆಯರು (Women) ಗಾಯಗೊಂಡಿದ್ದಾರೆ. ಗಲಭೆ ಮಾಡಲೆಂದೇ ಹೊರಭಾಗದಿಂದ ಕೆಲ ಪುಂಡರು ಆಗಮಿಸಿದ್ದರು ಎನ್ನಲಾಗಿದ್ದು, ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸ್​ (Police) ಬಿಗಿ ಭದ್ರತೆ ನಿಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಏನಿದು ಪ್ರಕರಣ?


ಕಳೆದ ಐದು ದಿನಗಳ ಹಿಂದೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಮೆರವಣಿಗೆ ನಡೆಸಲಾಗಿತ್ತು. ಆದರೆ ಈ ವೇಳೆ ಮೆರವಣಿಗೆ ಸಾಗುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದರು ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದವು. ಅಲ್ಲದೆ, ಕಲ್ಲು ಹಿಡಿದು ಗದ್ದಲ ಮಾಡುವ ದೃಶ್ಯಗಳನ್ನು ಬಿಡುಗಡೆ ವಿಹೆಚ್​​ಪಿ ಸಂಘಟನೆಯ ಕಾರ್ಯಕತೃರು ಬಿಡುಗಡೆ ಮಾಡಿದ್ದರು. ಇದೇ ವೇಳೆ ಶೋಭಾಯಾತ್ರೆಗೆ ಕರೆ ನೀಡಿದ್ದರು.


ಕಲ್ಲು ಹಿಡಿದು ಗದ್ದಲ ಮಾಡುವ ದೃಶ್ಯ


ಇದನ್ನೂ ಓದಿ: Karnataka Election 2023: HDKಗೆ ಟಕ್ಕರ್​ ಕೊಡಲು DK ಬ್ರದರ್ಸ್ ರಣತಂತ್ರ; ರಾಮನಗರದಿಂದ ಸುರೇಶ್​ ಸ್ಪರ್ಧೆಗೆ ವೇದಿಕೆ ಸಿದ್ಧ!


ಪೋಲಿಸರು ಸುಮ್ಮನಿದ್ದಿದ್ದು ಯಾಕೆ?


ಇಂದು ಆಯೋಜಿಸಲಾಗಿದ್ದ ಶೋಭಾ ಯಾತ್ರೆಯ ಸ್ಥಳಕ್ಕೆ ಸಚಿವ ಬೈರತಿ ಬಸವರಾಜ್, ಬಿ.ಸಿ ಪಾಟೀಲ್ ಹಾಗೂ ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ಆಗಮಿಸಿ ಚಾಲನೆ ನೀಡಿದ್ದರು. ಈ ವೇಳೆ ಕಲ್ಲು ಹಿಡಿದು ದಾಂಧಲೆ ಮಾಡಿದ ಯುವಕರನ್ನು ಬಂಧಿಸಬೇಕು.


ಅವರ ಉಪಟಳ ಕಂಡು ಪೋಲಿಸರು ಸುಮ್ಮನಿದ್ದಿದ್ದು ಯಾಕೆ? ಅವರ ಮೇಲೆ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ ರಟ್ಟಿಹಳ್ಳಿ ಪಟ್ಟಣದ ಬೀರಲಿಂಗೇಶ್ವರ ಮುಖ್ಯ ದ್ವಾರದಿಂದ ಬೈಕ್ ಯಾರ್ಲಿ ಏರ್ಪಡಿಸಿದ್ದರು. ರ್ಯಾಲಿಯಲ್ಲಿ 300ಕ್ಕೂ ಅಧಿಕ ಬೈಕ್ ಗಳು ಭಾಗಿಯಾಗಿದ್ದವು.
ಮಸೀದಿ ಮೇಲೂ ಕಲ್ಲು ತೂರಾಟ


ಸಂಗೊಳ್ಳಿ ರಾಯಣ್ಣ ಪರ ಘೋಷಣೆ ಕೂಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಕೇಸರಿ ಬಾವುಟ ಹಿಡಿದು ಮೆರವಣಿಗೆ ನಡೆಸಿದ್ದರು. ಆದರೆ ರ್ಯಾಲಿ ಬೃಹತ್ ಬೈಕ್​ ರ್ಯಾಲಿ ಸಂದರ್ಭದಲ್ಲಿ ಸಿಕ್ಕ ಆಟೋ ಚಾಲಕನ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿ ಹೊಡೆದಾಟ ನಡೆಸಿದ್ದರು.


ಅಲ್ಲದೆ ಅನ್ಯಕೋಮಿನ ಕೆಲ ಯುವಕರು ಮಸೀದಿ ಮೇಲೂ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಕಾರು ಒಂದರ ಗ್ಲಾಸ್​​ ಹಾಗೂ ಮನೆಯ ಗ್ಲಾಸ್​ ಪುಡಿ ಪುಡಿಯಾಗಿದೆ. ರಟ್ಟಿಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: Bengaluru: ಶೌಚಾಲಯಕ್ಕೆ ಹೋಗಿದ್ದಾಗ ಬ್ಯಾಗ್​ನಲ್ಲಿತ್ತು ₹1 ಕೋಟಿ ಚಿನ್ನ; ಸಿನಿಮೀಯ ಶೈಲಿಯಲ್ಲಿ ಚಿನ್ನದ ಗಟ್ಟಿ ಕಳವು


ಗಲಾಟೆಯಲ್ಲಿ 8 ರಿಂದ 10 ಮನೆ, ಕಾರು ಜಖಂಗೊಂಡಿದೆ


ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾವೇರಿ ಎಸ್​​ಪಿ ಶಿವಕುಮಾರ್​ ಗುಣಾರ್​, ಇಂದು ರಟ್ಟಿಹಳ್ಳಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯುತ್ತಿತ್ತು. ಅವರು ರ್ಯಾಲಿ ಮಾಡುವ ಮಾರ್ಗ ಬಿಟ್ಟು ಕಾರಂಜಿ ಸರ್ಕಲ್​ಗೆ ಹೋಗಿದ್ದಾರೆ. ಈ ವೇಳೆ ಕಲ್ಲು ತೂರಾಟ ನಡೆದಿದ್ದು, ಪರಿಣಾಮ ಹಾನಿಯಾಗಿದೆ.


ಕಲ್ಲು ತೂರಾಟದಿಂದ ವಾಹನಗಳಿಗೆ ಹಾನಿ


ಗಲಾಟೆಯಲ್ಲಿ 8 ರಿಂದ 10 ಮನೆ, ಕಾರು ಜಖಂಗೊಂಡಿದೆ. ನಮ್ಮ ಪೋಲಿಸರು ಪರಿಸ್ಥಿತಿಯನ್ನು ಹತೋಟೆಗೆ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 15 ಯುವಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಪ್ರಕರಣ ಸಂಬಂಧ ಕ್ರಮ ಜರುಗಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Published by:Sumanth SN
First published: