Kolar: ಇದ್ದಕ್ಕಿದ್ದಂತೆ ಪವರ್ ಕಟ್.. ಶೋಭಾಯಾತ್ರೆ ವೇಳೆ ಕಲ್ಲು ತೂರಾಟ.. ಕೋಲಾರ ಉದ್ವಿಗ್ನ!

ಕಲ್ಲು ತೂರಾಟಕ್ಕೂ ಕೆಲ ನಿಮಿಷಗಳ ಮೊದಲೇ ಕರೆಂಟ್ ಕಟ್ ಆಗಿದೆ. ಸಂಜೆ 6.30 ರಿಂದ  7.30 ರ ವರೆಗು ಜಹಾಂಗೀರ್ ಸರ್ಕಲ್ ನಲ್ಲಿ ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆಗಿದೆ.

ಕಲ್ಲೂ ತೂರಾಟದಿಂದ ಅಂಗಡಿಗಳಿಗೆ ಹಾನಿ

ಕಲ್ಲೂ ತೂರಾಟದಿಂದ ಅಂಗಡಿಗಳಿಗೆ ಹಾನಿ

  • Share this:
ಕೋಲಾರ: ಚಿನ್ನದ ನಾಡು ಕೋಲಾರ (Kolar) ಉದ್ವಿಗ್ನಗೊಂಡಿದೆ. ಶ್ರೀರಾಮ ಶೋಭಾಯಾತ್ರೆ (Shobha Yatra) ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಲಾಠಿ ಚಾರ್ಜ್ (Lathi Charge) ನಡೆದ ವೇಳೆ ಪಕ್ಕದ ರಸ್ತೆಯ ಆಟೋ ಮೊಬೈಲ್ಸ್ ಮಳಿಗೆ ಗಾಜು ಪುಡಿ ಪುಡಿಯಾಗಿವೆ. ಮುಳಬಾಗಿಲು ಪಟ್ಟಣದ ಸೋಮೇಶ್ಚರ ಪಾಳ್ಯ ರಸ್ತೆಯಲ್ಲಿ ಇಮ್ರಾನ್ ಎನ್ನುವರಿಗೆ ಸೇರಿದ ಆಟೋ ಮೊಬೈಲ್ ಶಾಪ್ ಮೇಲೆ ಕಿಡಿಗೇಡಿಗಳಿಂದ ಮಳಿಗೆ ಗಾಜಿಗೆ ಕಲ್ಲು ಎಸೆದಿದ್ದಾರೆ. ಸದ್ಯ ಸ್ಥಳದಲ್ಲಿ ಎ.ಎಸ್ಪಿ ಸಚಿನ್ ಘೊರ್ಪಡೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: Muslim Cabs: ಹಿಜಾಬ್, ಹಲಾಲ್ ಆಯ್ತು.. ಈಗ ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಕರೆ!

ಸ್ಥಳಕ್ಕೆ ಐಜಿಪಿ ಭೇಟಿ

ಮುಳಬಾಗಿಲು ಪಟ್ಟಣಕ್ಕೆ ಕೇಂದ್ರ ವಲಯ ಐಜಿಪಿ  M ಚಂದ್ರಶೇಖರ್ ಭೇಟಿ ಮುಳಬಾಗಿಲು ನಗರದ ಜಹಾಂಗೀರ್ ಮೊಹಲ್ಲಾ ಬಳಿ ಸ್ಥಳ ಪರಿಶೀಲನೆ ನಡೆಸಿದೆ. ಬಳಿಕ ಮಾತನಾಡಿದ ಅವರು, ಶೋಭಾಯಾತ್ರೆ ಅಂತ್ಯದ ಬಳಿಕ ಕಲ್ಲು ತೂರಾಟ ನಡೆದಿದೆ. ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದೇವೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ. ಘಟನೆ ನಡೆದಾಗ ವಿದ್ಯುತ್ ಸಂಪರ್ಕ ಕಡಿತ ಆಗಿದ್ದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು IGP ಚಂದ್ರಶೇಖರ್ ಹೇಳಿಕೆ ನೀಡಿದರು.

ಪವರ್​ ಕಟ್​​ ಬಗ್ಗೆ ಅನುಮಾನ

ಕಲ್ಲು ತೂರಾಟ ನಡೆದ ಸ್ಥಳದಲ್ಲಿ ಪವರ್​​​ ಕಟ್ ಬಗ್ಗೆ ಪೊಲೀಸರು ವಿವರಣೆ ಕೇಳಿದ್ದಾರೆ. ಕೆಜಿಎಪ್ ಬೆಸ್ಕಾಂ ಇಂಜಿನಿಯರ್ ಗೆ ಕೋಲಾರ ಎಸ್ಪಿ ದೇವರಾಜ್ ಮಾಹಿತಿ ಕೇಳಿದ್ದಾರೆ. ಕಲ್ಲು ತೂರಾಟಕ್ಕೂ ಕೆಲ ನಿಮಿಷಗಳ ಮೊದಲೇ ಕರೆಂಟ್ ಕಟ್ ಆಗಿದೆ. ಸಂಜೆ 6.30 ರಿಂದ  7.30 ರ ವರೆಗು ಜಹಾಂಗೀರ್ ಸರ್ಕಲ್ ನಲ್ಲಿ ಇದ್ದಕ್ಕಿದ್ದಂತೆ ಕರೆಂಟ್ ಕಟ್ ಆಗಿದೆ. ಮುಳಬಾಗಿಲು ನಗರದ ಜಹಾಂಗೀರ್ ಮೊಹಲ್ಲಾ ಸರ್ಕಲ್‍ ಗೆ ಶೋಭಾಯಾತ್ರೆ ಆಗಮನಕ್ಕೂ ಮೊದಲೇ ಪವರ್​​ ಕಟ್​​ ಆಗಿದೆ. ಇಡೀ ಘಟನೆ ಯೋಜಿತ ಕೃತ್ಯವೇ ಎಂಬ ಅನುಮಾನ ಪೊಲೀಸರನ್ನ ಕಾಡುತ್ತಿದೆ. ಕರೆಂಟ್ ಕಟ್ ನಿಂದ ಹೈ ಮಾಸ್ಕ್ ಲೈಟ್, ಬೀದಿ ದೀಪಗಳು ಆಫ್​ ಆಗಿದ್ದರು. ಸೂಕ್ಷ್ಮ ಪ್ರದೇಶದಲ್ಲಿ ಶೋಭಾಯಾತ್ರೆ ತೆರಳುವ ಮಾಹಿತಿ ಇದ್ದರು, ವಿದ್ಯುತ್ ಸಂಪರ್ಕ ಕಡಿತಗೊಂಡ ಬಗ್ಗೆ ಅನುಮಾನ ವ್ಯಕ್ತವಾಗ್ತಿದೆ.

ಇದನ್ನೂ ಓದಿ: ಧ್ವನಿವರ್ಧಕ ಬಳಕೆ ವಿವಾದ ನಡುವೆ Hubli-Dharwadದಲ್ಲಿ 268 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್

ಪೊಲೀಸರ ಲಾಠೀ ಚಾರ್ಜ್ ಬಳಿಕ ಕೆರಳಿದ ಯುವಕರ ಗುಂಪು ಕಲ್ಲು ಎಸೆಯುವ ವಿಡಿಯೊ ವೈರಲ್ ಆಗಿದೆ. ಮುಳಬಾಗಿಲು ಪಟ್ಟಣದ ಇಮ್ರಾನ್ ಮಾಲಿಕತ್ಚದ HMG ಆಟೊ ಮೊಬೈಲ್ ಸ್ಟೋರ್ ಮೇಲೆ ಕಲ್ಲು ತೂರಾಟ ನಡೆಸಿ ಗಾಜು ಜಖಂ ಮಾಡಲಾಗಿದೆ.

5 ಮಂದಿ ವಶಕ್ಕೆ

ಇಂದು ಎಂದಿನಂತೆ ಮುಳಬಾಗಿಲು ಪಟ್ಟಣದ ಜಹಾಂಗೀರ್ ಮೊಹಲ್ಲಾ ವೃತ್ತದಲ್ಲಿ ಪರಿಸ್ಥಿತಿ ಇದೆ. ಕಲ್ಲು ತೂರಾಟದಿಂದ ನೆನ್ನೆ ರಾತ್ರಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೆನ್ನೆ ರಾತ್ರಿ 5 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಮುಳಬಾಗಿಲು ನಗರ ಪೊಲೀಸರಿಂದ ವಿಚಾರಣೆ ಮುಂದುವರಿದಿದೆ.

ಶ್ರೀರಾಮ ಶೋಭಾಯಾತ್ರೆ ಕಾರ್ಯಕ್ರಮ ವೇಳೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಮುಳಬಾಗಿಲು ಪಟ್ಟಣದಲ್ಲಿ ಎಸ್ಪಿ ಡಿ ದೇವರಾಜ್ ಪ್ರತಿಕ್ರಿಯಿಸಿ, ಒಂದು ಕಡೆಯಿಂದ ಕಲ್ಲು ತೂರಾಟ ಆಗಿದೆಯೆಂದು ಗೊಂದಲ ಉಂಟಾಗಿದೆ. ಸಂಜೆ 6.45 ರ ವೇಳೆಗೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟ ನಡೆಸಿದಾಗ ಮತ್ತೊಂದು ಕಡೆಯಿಂದ ತೆಂಗಿನಚಿಪ್ಪು ಎಸೆದಿದ್ದಾರೆ. ಪರಿಸ್ಥಿತಿ ಹತೋಟಿಗೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 5 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ. ಘಟನೆಯಲ್ಲಿ 2 ಕಾರಿನ ಗಾಜು ಜಖಂ, ಒಂದು ಬೈಕ್ ಸುಟ್ಟು ಕರಕಲಾಗಿವೆ. ಬೈಕ್ ಗೆ ಬೆಂಕಿ ಬಿದ್ದಿರುವ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.
Published by:Kavya V
First published: