ಮಹಾರಾಷ್ಟ್ರದಲ್ಲಿ (Maharashtra) ಶಿವಸೇನೆಯ (Shivsena) ಪುಂಡಾಟಿಕೆ ಮುಂದುವರಿದಿದೆ. ನಿನ್ನೆ ಕರ್ನಾಟಕದ ಬಸ್ಗಳ (Karnataka Bus) ಮೇಲೆ ಮತ್ತೆ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮಾಡಲಾಗಿದೆ. ಕೊಲ್ಲಾಪುರದ (Kollapur Bus Stand) ಬಸ್ ನಿಲ್ದಾಣದಲ್ಲಿ ನಿಂತಿದ್ದ ಕರ್ನಾಟಕ ಸಾರಿಗೆ ಬಸ್ಗೆ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ ದೇವನೆ ನೇತೃತ್ವದಲ್ಲಿ ಮಸಿ ಬಳಿಯಲಾಗಿತ್ತು. ಮಹಾರಾಷ್ಟ್ರದಲ್ಲಿ ಮರಾಠಿ ಪುಂಡರು ಕರ್ನಾಟಕ ಬಸ್ಗೆ ಕಪ್ಪು ಮಸಿ (Black Ink) ಹಚ್ಚಿದ್ದಕ್ಕೆ ಕನ್ನಡಪರ ಹೋರಾಟಗಾರರು (Kannada Activist) ಸಿಡಿದೆದಿದ್ದಾರೆ. ಕಲಬುರಗಿಯ ಬಳ್ಳೂರ್ಗಿ ಗ್ರಾಮದಲ್ಲಿ ಮಹಾರಾಷ್ಟ್ರ ಬಸ್ಗೆ (Maharashtra Bus) ಕಪ್ಪು ಮಸಿ ಬಳಿದು ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಿನ್ನೆ ಮಸಿ ಬಳಿದಿದ್ದ ಪುಂಡರು, ಇಂದು ಕರ್ನಾಟಕ ಬಸ್ ಮೇಲೆ ಕಲ್ಲು (Stone) ತೂರಾಟ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ (Athani, Belagavi) ಡಿಪೋಗೆ ಸೇರಿದ್ ಬಸ್ ಶುಕ್ರವಾರ ರಾತ್ರಿ ರಾಜ್ಯಕ್ಕೆ ಹಿಂದಿರುಗುತ್ತಿತ್ತು. ರಾತ್ರಿ ಸುಮಾರು 10.30ರ ವೇಳೆಗೆ ಪುಂಡರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಮೀರಜ್ (Meeraj) ಮತ್ತು ಕಾಗವಾಡ (Kagawada) ಗಡಿ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಸೇವೆ ಬಂದ್ ಮಾಡಲಾಗಿದೆ.
ಶಾಂತಿ ಕಾಪಾಡಲು ಸಿಎಂ ಮನವಿ
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಜತೆ ಮಾತಾಡಿದ್ದೇನೆ ಎಂದು ಹೇಳಿದ್ದಾರೆ.
ಗೃಹ ಸಚಿವ, ಡಿಜಿ ಐಜಿಪಿ ಜೊತೆ ಇಂದು ಮಾತನಾಡುತ್ತಾರೆ. ನಮ್ಮ ಬಸ್ಗಳಿಗೆ ಯಾವುದೇ ಹಾನಿ ಮಾಡಬಾರದು. ಎರಡೂ ರಾಜ್ಯಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ಗಡಿ ವಿಚಾರದಲ್ಲಿ ಮಹಾರಾಷ್ಟ್ರಕ್ಕೆ ಮತ್ತೆ ಶಾಕ್!
ಗಡಿ ವಿಚಾರದಲ್ಲಿ ಪದೇ ಪದೇ ಕಾಲ್ಕೆರೆದು ಜಗಳಕ್ಕೆ ಬರುತ್ತಿರುವ ಮಹಾರಾಷ್ಟ್ರಕ್ಕೆ ಅಲ್ಲಿಯ ಜನರೇ ಶಾಕ್ ನೀಡಿದ್ದಾರೆ. ನಮಗೆ ಸೌಲಭ್ಯ ಕೊಡಿ ಇಲ್ಲ ಕರ್ನಾಟಕಕ್ಕೆ ಬಿಟ್ಟು ಬಿಡಿ. ಕರ್ನಾಟಕಕ್ಕೆ ಸೇರಬೇಕು ಎಂಬುದು ನಮ್ಮ ಇಚ್ಛೆ ಇದೆ ಎಂದು ಮಹಾ ಸರ್ಕಾರಕ್ಕೆ ಜತ್ ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್ ಪೋತದಾರ್ ಒಂದು ವಾರದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Karnataka: ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಸರ್ಕಾರದಿಂದ ಅನುದಾನ; ಸಿಎಂ ಬೊಮ್ಮಾಯಿ
ನಾಲ್ಕು ದಶಕಗಳಿಂದ ಮಹಾರಾಷ್ಟ್ರ ಸರ್ಕಾರ ನಮಗೆ ನೀರು ಕೊಟ್ಟಿಲ್ಲ. 8 ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಉಮದಿ ಗ್ರಾಮಕ್ಕೆ ಬರಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳುವರಿದ್ದೀರಿ ಎಂಬುದನ್ನು ತಿಳಿಸಬೇಕು. ಇಲ್ಲವಾದ್ರೆ ಎಂಟು ದಿನಗಳ ಬಳಿಕ ಕರ್ನಾಟಕ ಸಿಎಂ ಅವರನ್ನು ಉಮದಿಗೆ ಆಹ್ವಾನಿಸುತ್ತೇವೆ. ನಾವು ಕರ್ನಾಟಕ ರಾಜ್ಯಕ್ಕೆ ಸೇರುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಮಹಾ ಸರ್ಕಾರಕ್ಕೆ ಒಂದು ವಾರದ ಗಡುವು
ಉಮದಿಯಲ್ಲಿ ಜತ್ತ ತಾಲೂಕಿನ 42 ಹಳ್ಳಿಗಳ ಪ್ರಮುಖರು ಸಭೆ ಸೇರಿದ್ದೇವೆ. ಕರ್ನಾಟಕಕ್ಕೆ ಸೇರಬೇಕು ಎಂಬುದು ನಮ್ಮ ಇಚ್ಛೆ ಇದೆ. ಮಹಾರಾಷ್ಟ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Basavaraj Bommai: ದೇವೇಂದ್ರ ಫಡ್ನವಿಸ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಖಡಕ್ ತಿರುಗೇಟು
ಬಜೆಟ್ನಲ್ಲಿ ಎಷ್ಟು ಹಣ ಮೀಸಲು ಇಡಲಿದ್ದೀರಿ ಎಂಬುದು ಜನರಿಗೆ ತಿಳಿಸಿ. 2012ರ ಠರಾವು ಹಳೆಯದು ಇದೆ ಅಂತಾ ದೇವೇಂದ್ರ ಫಡ್ನವಿಸ್ ಹೇಳ್ತಾರೆ. ಆದ್ರೆ ನಮಗೆ ಈವರೆಗೂ ನೀರು ಸಿಕ್ಕಿಲ್ಲ. ನೀವು ಇಲ್ಲಿ ಬಂದು ಮಹಾರಾಷ್ಟ್ರ ಬಿಟ್ಟು ಹೋಗಬೇಡಿ ನಾವು ನೀರು ಕೊಡ್ತೇವೆ ಅಂತಾ ಹೇಳಿ ಎಂದು ಸುನೀಲ್ ಪೋತದಾರ್ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ