ಬೆಂಗಳೂರು: ಹೊಸಕೋಟೆ (Hosakote) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶರತ್ ಬಚ್ಚೇಗೌಡರ (MLA Sharath Bachegowda) ಪತ್ನಿ ಪ್ರತಿಭಾ (Pratibha Sharath) ಕಾರ್ ಮೇಲೆ ಕಲ್ಲು ತೂರಾಟ ನಡೆದಿದೆ. ಇಂದು ಬೆಳಗ್ಗೆ ಹೊಸಕೋಟೆ ನಗರದ ಪಾರ್ವತಿಪುರದಲ್ಲಿ ಪ್ರತಿಭಾ ಶರತ್ ಪತಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪ್ರತಿಭಾ ಅವರ ಇನ್ನೋವಾ ಕಾರ್ ಮೇಲೆ ಯುವಕನೋರ್ವ ಕಲ್ಲು ತೂರಾಟ (Stone Pelting) ನಡೆಸಿದ್ದಾನೆ. ಕಲ್ಲು ತೂರಿದ್ದರಿಂದ ಕಾರ್ ಗಾಜು ಪುಡಿ ಪುಡಿಯಾಗಿದೆ. ಯುವಕ ಕಾರ್ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗುತ್ತಿರುವ ದೃಶ್ಯ ಸೆರೆ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿದೆ. ಸದ್ಯ ಹೊಸಕೋಟೆ ನಗರದಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ.
ಕಲ್ಲು ತೂರಾಟ ನಡೆದ ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಶರತ್ ಬಚ್ಚೇಗೌಡ ಸ್ಥಳಕ್ಕಾಗಮಿಸಿ, ರಾಜಕೀಯ ದುರುದ್ದೇಶದಿಂದ ನಡೆದಿರುವ ಕೃತ್ಯ. ಪ್ರಚಾರಕ್ಕೆ ಅಡ್ಡಿಪಡಿಸುವ ಕುತಂತ್ರದ ಒಂದು ಭಾಗ ಇದಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಮಕ್ಕಳು, ಪತ್ನಿ ಮೇಲೆ FIR ದಾಖಲಾಗಿದ್ದಕ್ಕೆ ಕಿಡಿ
ಶಾಸಕರ ಪತ್ನಿಗೆ ಇಂತಹ ಪರಿಸ್ಥಿತಿ ಆದರೆ ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದ ಶರತ್ ಬಚ್ಚೇಗೌಡ, ಈಗಾಗಲೇ ಪೌರ ಕಾರ್ಮಿಕರಿಗೆ ಬೆಡ್ ಶೀಟ್ ನೀಡಿದ್ದಕ್ಕೆ ಪತ್ನಿ ಪ್ರತಿಭಾ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.
ಕಸದ ಕೂಪವಾಗಿದ್ದ ಅಂಗನವಾಡಿಗಳನ್ನು ಸ್ವಚ್ಚಗೊಳಿಸಿದ್ದಕ್ಕೂ ಎಫ್ಐಆರ್ ದಾಖಲಾಗಿದೆ. ಇತ್ತಮ ಮಕ್ಕಳಿಬ್ಬರೂ ಮೇಲೆಯೂ ಎಫ್ಐಆರ್ ದಾಖಲಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Mysuru Mylari Hotel: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!
ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಬಗ್ಗೆ ಭರವಸೆ ಇದೆ. ಕ್ಷೇತ್ರದ ಜನ ಎಂತಹವರಿಗೆ ಮತ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ