• Home
  • »
  • News
  • »
  • state
  • »
  • Shivamogga: ಶಿವಮೊಗ್ಗ ಮತ್ತೆ ಪ್ರಕ್ಷುಬ್ಧ; ಅಪರಿಚಿತರಿಂದ ಕಲ್ಲು ತೂರಾಟ, ಓರ್ವನಿಗೆ ಗಾಯ

Shivamogga: ಶಿವಮೊಗ್ಗ ಮತ್ತೆ ಪ್ರಕ್ಷುಬ್ಧ; ಅಪರಿಚಿತರಿಂದ ಕಲ್ಲು ತೂರಾಟ, ಓರ್ವನಿಗೆ ಗಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗಾಯಾಳು ಪ್ರಕಾಶ್​ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮಿಥುನ್ ಕುಮಾರ್ ಹೇಳಿದ್ದಾರೆ.

  • News18 Kannada
  • Last Updated :
  • Shimoga, India
  • Share this:

ಶಿವಮೊಗ್ಗದಲ್ಲಿ (Shivamogga) ಮತ್ತೆ ಕಲ್ಲು ತೂರಾಟ (Stone Pelting) ಸಹ ನಡೆಸಲಾಗಿದೆ. ಘಟನೆಯಲ್ಲಿ ಪ್ರಕಾಶ್ ಎಂಬವರು ಗಾಯಗೊಂಡಿದ್ದು, ನಗರದ ಮೆಗ್ಗಾನ್ ಆಸ್ಪತ್ರೆಗೆ (McGann Hospital) ದಾಖಲಿಸಲಾಗಿದೆ. ಭರ್ಮಪ್ಪ ನಗರದ 2ನೇ ಕ್ರಾಸ್ ನಿವಾಸಿಯಾಗಿರುವ ಗಾಯಾಳು ಪ್ರಕಾಶ್ ಕಲ್ಲು ತೂರಾಟ ನಡೆದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಮನೆ ಮುಂಭಾಗ ನಿಂತಿದ್ದ ವೇಳೆ ಗಾಯಗೊಂಡಿದ್ದಾರೆ. ನಗರದ ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರ (Police) ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಭರ್ಮಪ್ಪ ಲೇಔಟ್​​ 2ನೇ ಕ್ರಾಸ್ ನಿವಾಸಿ ಪ್ರಕಾಶ್​ ಎಂಬವರ ತಲೆಗೆ ಗಾಯವಾಗಿದೆ. ಬೈಕ್​ನಲ್ಲಿ ಬಂದ ಮೂವರು ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ಪ್ರಕಾಶ್ ಹೇಳಿಕೆ ನೀಡಿದ್ದಾರೆ ಅಂತ ಎಸ್​​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.


stone pelting in shivamogga one injured mrq
ಮೆಗ್ಗಾನ್ ಆಸ್ಪತ್ರೆ


ಗಾಯಾಳು ಪ್ರಕಾಶ್​ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮಿಥುನ್ ಕುಮಾರ್ ಹೇಳಿದ್ದಾರೆ.


ಶಿವಮೊಗ್ಗದಲ್ಲಿ ಭಯದ ವಾತಾವರಣ


ಇತ್ತೀಚೆಗೆ ಕೊಲೆಯಾದ ಹರ್ಷ ನಿವಾಸದ ಬಳಿ ತೆರಳಿದ್ದ ದುಷ್ಕರ್ಮಿಗಳು ಅವಾಚ್ಯ ಪದ ಬಳಸಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ನಗರದ ಕೆಲವು ಭಾಗಗಳಲ್ಲಿ  ಅಪರಿಚಿತರು ಲಾಂಗು ಮತ್ತು ಮಚ್ಚು ಝಳಪಿಸುತ್ತಾ ಭಯದ ವಾತಾವರಣ ನಿರ್ಮಿಸಲು ಮುಂದಾಗಿದ್ದರು ಎಂದು ವರದಿಯಾಗಿದೆ.


ಮೂವರು ಹಿಂದೂ ಕಾರ್ಯಕರ್ತರಿಗೆ ಕೊಲೆ ಬೆದರಿಕೆ


ಪುನೀತ್ ಕೆರೆಹಳ್ಳಿ ಎಂಬ ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಬಂದಿತ್ತು. ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಕರೆ ಬಂದಿದ್ದು, ಹರ್ಷ ಕಥೆ ಮುಗಿತು. ನೆಕ್ಸ್ಟ್ ಹಿಟ್ ಲಿಸ್ಟ್ ನಲ್ಲಿ ನೀನೇ ಇರೋದು. ಹರ್ಷನ ಯಾಕೆ ಮರ್ಡರ್ ಯಾಕೆ ಮಾಡಿದ್ವಿ ಎನ್ನುವುದು ಗೊತ್ತಲ್ಲ ? ಇಲ್ಲಿಂದಲೇ ಸ್ಕೆಚ್ ಹಾಕ್ತೀವಿ ಗೊತ್ತಲ್ಲ, ಹಿಜಾಬ್ ತಂಟೆಗೆ (Hijab Issue) ಬಂದರೆ ನಿಮ್ಮ ಕಥೆ ಮುಗಿಸುತ್ತೇವೆ ಎಂದು ಪುನೀತ್ ಕೆರೆಹಳ್ಳಿಗೆ (Puneeth Kerehalli) ಬೆದರಿಕೆ ಹಾಕಲಾಗಿತ್ತು.

ಒಂದು ತಿಂಗಳಲ್ಲಿ ನಿನ್ನನ್ನು ಮುಗಿಸ್ತೀನಿ. ನಿನ್ನನ್ನು ತೆಗೆಯೋದಂತೂ ಪಕ್ಕಾ ಆಗಿದೆ. ಪುತ್ತೂರಲ್ಲಿ ಇನ್ನೊಬ್ಬ ಇದಾನೆ ಭರತ್. ಅವನ ಜೊತೆ ಇನ್ನೊಬ್ಬ ಇದಾನೆ ಮೂರು ಜನರನ್ನ ತೆಗೀತಿವಿ ಎಂದು ಆವಾಜ್ ಹಾಕಿ ಬೆದರಿಸಲಾಗಿದೆ. ವಾಟ್ಸಾಪ್ ನಲ್ಲಿ ಆಡಿಯೋ ಮೆಸೇಜ್ ಮೂಲಕ ಧಮ್ಕಿ ಹಾಕಿದ್ದು ಕಿಡಿಗೇಡಿಗಳು ಪ್ರಾಣ ಬೆದರಿಕೆ ಹಾಕಲಾಗಿತ್ತು.


ಮುಸ್ಲಿಂ ಕುಟುಂಬದಲ್ಲೂ ದೀಪಾವಳಿ


ಕೊಪ್ಪಳಹಲಾಲ ಕಟ್ ವಿವಾದದ ಬೆನ್ನಲ್ಲೇ ಕೊಪ್ಪಳದಲ್ಲಿ ಹಿಂದೂ - ಮುಸ್ಲಿಂ ಮಧ್ಯೆ ಭಾವೈಕ್ಯತೆಯಿಂದ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿಯ ಮುಸ್ಲಿಂ ಕುಟುಂಬ ಸಾವೇರಾ ಡಾಬಾದಲ್ಲಿ ಲಕ್ಷ್ಮಿ ಪೂಜೆ ಮಾಡಿದ್ದಾರೆ.


ಇದನ್ನೂ ಓದಿ:  Crime News: ಮಾರಕಾಸ್ತ್ರದಿಂದ ಗಂಡನನ್ನೇ ಕೊಂದು ತಗ್ಲಾಕೊಂಡ್ಲು ಹೆಂಡ್ತಿ; ಮಹಿಳೆಗೆ ಇನಿಯನ ಸಾಥ್


ಜಿಂದುಸಾವ ಮೆಳ್ಳಿಕೇರಿ ಎಂಬುವವರ ಡಾಬಾದಲ್ಲಿ ಎರಡು ದಿನ ಮಾಂಸಾಹಾರ ಅಡುಗೆ ಮಾಡದೆ, ಡಾಬಾ ಶುಚಿಗೊಳಿಸಿ ಭಕ್ತಿಯಿಂದ ಲಕ್ಷ್ಮಿ ಪೂಜೆಯನ್ನು ಸಂಪ್ರದಾಯ ಬದ್ದವಾಗಿ ಪೂಜೆ ಮಾಡಲಾಗಿದೆ. ಸೂಫಿ ಶರಣರ ನಾಡಿನಲ್ಲಿ ಸಾಮರಸ್ಯದ ಹಬ್ಬ ಆಚರಣೆ ಮಾಡಲಾಗಿದೆ.


ಆಟೋ ಡ್ರೈವರ್ಸ್​ ವಿರುದ್ಧ ಕೇಸ್​


ಬೆಂಗಳೂರು ಸಂಚಾರಿ ಪೊಲೀಸ್ರು ಆಟೋ ರಿಕ್ಷಾಗಳ ಮೇಲೆ ಸ್ಪೆಷಲ್ ಡ್ರೈವ್ ಮಾಡಿದ್ದಾರೆ. ಹೆಚ್ಚಿನ ಬಾಡಿಗೆ ಡಿಮ್ಯಾಂಡ್, ಬಾಡಿಗೆ ಬರಲು ನಿರಾಕರಣೆ ಮಾಡಿದವರ ವಿರುದ್ದ ಸ್ಪೆಷಲ್ ಡ್ರೈವ್ ಮಾಡಿದ್ದಾರೆ.


ಇದನ್ನೂ ಓದಿ:   Yadagiri: ಕಲುಷಿತ ನೀರು ಕುಡಿದು ಇಬ್ಬರು ಸಾವು; ಅನೇಕರು ಆಸ್ಪತ್ರೆಗೆ ದಾಖಲು 


ಬೆಂಗಳೂರು ನಗರಾದ್ಯಂತ ಡ್ರೈವ್ ನಡೆಸಿರುವ ಸಂಚಾರಿ ಪೊಲೀಸರು ನಗರಾದ್ಯಂತ 116 ಪ್ರಕರಣ ದಾಖಲು ಮಾಡಿಕೊಂಡು, 312 ವಾಹನಗಳು ಜಪ್ತಿ ಮಾಡಿದ್ದಾರೆ. ಬಳಿಕ ದಂಡ ಕಟ್ಟಿಸಿಕೊಂಡು ನಂತರ ಆಟೋಗಳನ್ನು ಬಿಡುಗಡೆ ಮಾಡಿದ್ದಾರೆ.

Published by:Mahmadrafik K
First published: