ಕಲ್ಲು, ಗಣಿಗಾರಿಕೆ ಸಮಸ್ಯೆ ಈಡೇರಿಕೆಗಾಗಿ ವಿಧಾನಸೌಧದಲ್ಲಿ ಹೋರಾಟ: ಬಿ.ಎಸ್ ಯಡಿಯೂರಪ್ಪ

ಕಲ್ಲು ಗಣಿಗಾರಿಕೆ ನಡೆಸಲು ಅವಕಾಶವಿದ್ದರೂ ಸಹ ತಮಗೆ ಅನುಮತಿ ನೀಡುತ್ತಿಲ್ಲ ಗುತ್ತಿಗೆದಾರರು ದೂರುತ್ತಿದ್ದಾರೆ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಗಣಿಗಾರಿಕೆಗೆ ವಿದ್ಯುತ್​ ಕಡಿತ ಮಾಡುವಂತಹ ವಾಮಮಾರ್ಗಅನುಸರಿಸುತ್ತಿರುವುದು ಅಕ್ಷಮ್ಯ ಅಪರಾಧ.

G Hareeshkumar | news18
Updated:December 18, 2018, 3:01 PM IST
ಕಲ್ಲು, ಗಣಿಗಾರಿಕೆ ಸಮಸ್ಯೆ ಈಡೇರಿಕೆಗಾಗಿ ವಿಧಾನಸೌಧದಲ್ಲಿ ಹೋರಾಟ: ಬಿ.ಎಸ್ ಯಡಿಯೂರಪ್ಪ
ಸಾಂದರ್ಭಿಕ ಚಿತ್ರ
G Hareeshkumar | news18
Updated: December 18, 2018, 3:01 PM IST
- ರಮೇಶ್ ಹಿರೇಜಂಬೂರು

ಬೆಳಗಾವಿ(ಡಿ.17) : ರಾಜ್ಯ ಸರ್ಕಾರ ಕುಂಭ ಕರ್ಣ ನಿದ್ರೆಯಲ್ಲಿದ್ದು, ಈ ಸರ್ಕಾರಕ್ಕೆ ನೈಜ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ಆಡಳಿತ ನಡೆಸುವವರಿಗೆ ಯಾವುದೇ ಕಳಕಳಿ ಇಲ್ಲ. ರಾಜ್ಯದಲ್ಲಿ ಜಲ್ಲಿ ಕಲ್ಲು ಮರಳು ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಈ ಸಮಸ್ಯೆ ಹುಡುಕಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಕಲ್ಲು ಕ್ವಾರಿ ಮತ್ತು ಜಲ್ಲಿ ಕ್ರಶರ್ಸ್ ಮಾಲೀಕರ ನಡೆಸುತ್ತಿರುವ  ಹೋರಾಟಕ್ಕೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಮೈತ್ರಿ ಸರ್ಕಾರ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ; ಬಿಎಸ್​ವೈ ವಾಗ್ದಾಳಿ

ಇವತ್ತು ವಿಧಾನಸೌಧದಲ್ಲಿ ಶೂನ್ಯವೇಳೆ ಕ್ವಾರಿ ಮತ್ತು ಜಲ್ಲಿ  ಮಾಲೀಕರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ಅರ್ಧ ಕಟ್ಟೆ ಚರ್ಚೆಗೆ ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷರು. ಅರಣ್ಯ ಇಲಾಖೆ ನೀತಿಯಿಂದಾಗಿ ಜಲ್ಲಿ ಮತ್ತು ಕ್ವಾರಿಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕಾಮಗಾರಿಗಳಿಗೆ ತೊಂದರೆಯಾಗಿದೆ ಎಂದರು.

ಕಲ್ಲು ಗಣಿಗಾರಿಕೆ ನಡೆಸಲು ಅವಕಾಶವಿದ್ದರೂ ಸಹ ತಮಗೆ ಅನುಮತಿ ನೀಡುತ್ತಿಲ್ಲ ಗುತ್ತಿಗೆದಾರರು ದೂರುತ್ತಿದ್ದಾರೆ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಗಣಿಗಾರಿಕೆಗೆ ವಿದ್ಯುತ್​ ಕಡಿತ ಮಾಡುವಂತಹ ವಾಮಮಾರ್ಗಅನುಸರಿಸುತ್ತಿರುವುದು ಅಕ್ಷಮ್ಯ ಅಪರಾಧ.ಗಣಿ ಇಲಾಖೆ ಕೂಡಲೇ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಕಲ್ಲು ಗಣಿಗಾರಿಕೆಯನ್ನು ಮೇಜರ್ ಮಿನರಲ್ ಗಣಿಗಾರಿಕೆ ವ್ಯಾಪ್ತಿಯಿಂದ ಬೇರ್ಪಡಿಸಿ ಅಗತ್ಯ ವಸ್ತುಗಳ ವ್ಯಾಪ್ತಿಗೆ ತರಬೇಕು. ನೆರೆರಾಜ್ಯಗಳಂತೆ ಡಿಎಂಎಫ್ ಅನ್ನು ಶೇ 10 ಕ್ಕೆ ಇಳಿಕೆ ಮಾಡಬೇಕು  ಎಂದರು.

ಕ್ರಶರ್ಸ್ ಸಿ ಫಾರ್ಮ್ ಅನ್ನು 20 ವಷರ್ಗಳಿಗೆ , ಗಣಿಗಾರಿಕೆ ಪರವಾನಿಗೆಯನ್ನು 30 ವರ್ಷಗಳಿಗೆ ವಿಸ್ತರಿಸಬೇಕು. ರಾಜಧನವನ್ನು ಬಳಕೆದಾರರಿಂದ ವಸೂಲಿ ಮಾಡಬೇಕೆಂಬ ಬೇಡಿಕೆಗಳನ್ನು ಈಡೇರಿಸಲು ನಮ್ಮ ಪಕ್ಷ ವಿಧಾನಮಂಡಲದಲ್ಇ ಹೋರಾಟ ಮಾಡಲಿದೆ ಎಂದು ಯಡಿಯೂರಪ್ಪ ವಾಗ್ದಾನ ನೀಡಿದರು. 
First published:December 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ