ಬಿರುಬೇಸಿಗೆಯಲ್ಲಿ (Summer) ಹೊರಗೆ ಹೋದಾಗ ಆಗುವ ಬಾಯಾರಿಕೆ (Thirsty), ದಣಿವು (Tired) ನೀಗಿಸಿಕೊಳ್ಳಲು ಕೂಲ್‌ಡ್ರಿಂಕ್ಸ್, ಲಸ್ಸಿ, ಷರಬತ್, ಜ್ಯೂಸ್, ಮಿಲ್ಕ್‌ಶೇಕ್‌ಗಳನ್ನು (Cooldrinks) ಕುಡಿಯುತ್ತೇವೆ. ಅದರಲ್ಲೂ ಬಿಸಿ ಬಿಸಿ ದಗೆಯಲ್ಲಿ ತಣ್ಣನೆಯ ಐಸ್‌ಕ್ರೀಂ ಅಥವಾ ಫಲೂದಾ ತಿನ್ನುವ ಆನಂದಕ್ಕೆ ಬೇರ್ಯಾವುದೂ ಸರಿಸಾಟಿಯಾಗುವುದಿಲ್ಲ. ಇನ್ನು ಅನೇಕರು ರಸ್ತೆ ಬದಿಯಲ್ಲಿ ನೀಡುವಂಥ ಹಣ್ಣನ್ನು (Fruits) ತಿನ್ನುತ್ತಾರೆ. ಆದರೆ ಇದರಲ್ಲಿ ಬಳಸುವ ನೀರಿನಿಂದ (Water) ಹಾಗೂ ಬೇರೆ ಬೇರೆ ಆಹಾರ ಪದಾರ್ಥಗಳಿಂದ ಆರೋಗ್ಯ ಸಮಸ್ಯೆ (Health Problems) ಉಂಟಾಗಬಹುದು.
ಹೌದು, ಆರೋಗ್ಯದ ದೃಷ್ಟಿಯಿಂದ ಬೇಸಿಗೆಯು ಕಷ್ಟಕರವಾದ ಕಾಲ ಎನ್ನುತ್ತಾರೆ ತಜ್ಞರು. ಅದಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ಬೇಸಿಗೆ ಬರುತ್ತಿದ್ದಂತೆ ಹೊಟ್ಟೆ ಜ್ವರ (ಸ್ಟಮಕ್ ಫ್ಲ್ಯೂ)ಪ್ರಕರಣಗಳು ಹೆಚ್ಚಾಗುತ್ತಿವೆ.
ಹೊಟ್ಟೆ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ
ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರಾಲಜಿ ಹೆಚ್‌ಒಡಿ ಹಾಗೂ ಸಲಹೆಗಾರರಾದ ಡಾ. ರಾಜ್ ವಿಘ್ನ ವೇಣುಗೋಪಾಲನ್ ಅವರು, "ನಾವು ಪ್ರತಿದಿನ ನಮ್ಮ ಆಸ್ಪತ್ರೆಗೆ ಬರುವಂಥ ಸುಮಾರು 10 ಹೊರರೋಗಿಗಳನ್ನು ಭೇಟಿ ಮಾಡುತ್ತಿದ್ದೇವೆ. ಅವರಲ್ಲಿ 2-3 ಮಂದಿಗೆ ದಾಖಲಾತಿಗಳ ಅಗತ್ಯವಿದೆ" ಎಂದು ಹೇಳುತ್ತಾರೆ.
“ಹೊಟ್ಟೆಯ ಸಮಸ್ಯೆಗಳ ಬಗ್ಗೆ ದೂರು ನೀಡುವ ವಾಕ್-ಇನ್ ರೋಗಿಗಳಲ್ಲಿ 15% ಏರಿಕೆ ಕಂಡುಬಂದಿದೆ. ಅವುಗಳಲ್ಲಿ ಹೆಚ್ಚಿನವು ಹೊಟ್ಟೆ ಜ್ವರಕ್ಕೆ ತಿರುಗುತ್ತವೆ. ಶಾಖದಿಂದ ಉಂಟಾಗುವ ಸೂಕ್ಷ್ಮಾಣು ಜೀವಿಗಳ ಹೆಚ್ಚಳದಿಂದ ಪರಿಸ್ಥಿತಿ ಉಲ್ಬಣಗೊಂಡಿದೆ” ಎಂದು ಸ್ಪೆಷಲಿಸ್ಟ್ ಆಸ್ಪತ್ರೆಯ ಜೆನರಲ್ ಪಿಸಿಶಿಯನ್ ಡಾ.ಆದರ್ಶ ನಾಯಕ್ ಹೇಳುತ್ತಾರೆ.
ಕಲುಷಿತ ಆಹಾರ – ನೀರಿನಿಂದ ಬರುತ್ತೆ ಹೊಟ್ಟೆ ಜ್ವರ
ಈ ಹೊಟ್ಟೆ ಜ್ವರವನ್ನು ಗ್ಯಾಸ್ಟ್ರೋಎಂಟರೈಟಿಸ್ ಎಂದೂ ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಕಲುಷಿತ ಆಹಾರ ಅಥವಾ ನೀರು ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ಹರಡುವಂಥ ಕರುಳಿನ ಸೋಂಕಾಗಿದೆ. ಇದು ನೀರಿನಂಶದ ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ ಮತ್ತು ಕೆಲವೊಮ್ಮೆ ಜ್ವರಗಳಿಗೆ ಕಾರಣವಾಗುತ್ತದೆ.
"ಹೆಚ್ಚಿನ ವ್ಯಕ್ತಿಗಳು ಬೇಗಚೇತರಿಸಿಕೊಂಡರೂ, ಶಿಶುಗಳು,ಮಕ್ಕಳು, ವಯಸ್ಕರು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಇದು ಮಾರಕವಾಗಬಹುದು" ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಡಾ. ಸ್ವಾತಿ ರಾಜಗೋಪಾಲ್ ಹೇಳುತ್ತಾರೆ.
ಹೊಟ್ಟೆ ಜ್ವರ ಗಂಭೀರ ಪರಿಸ್ಥಿತಿಗೂ ಕಾರಣವಾಗಬಹುದು!
ಇನ್ನು, ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ, ಪ್ರಕರಣಗಳನ್ನು ಸೌಮ್ಯ, ಮಧ್ಯಮ ಅಥವಾ ತೀವ್ರ ಎಂದು ವರ್ಗೀಕರಿಸಬಹುದು ಎಂದು ಡಾ. ಆದರ್ಶ್ ನಾಯಕ್ ಹೇಳುತ್ತಾರೆ.
"ಸೌಮ್ಯ ಪ್ರಕರಣಗಳಿಗೆ ಉತ್ತಮ ಹೈಡ್ರೇಶನ್ ಮತ್ತು ಪ್ರೋಬಯಾಟಿಕ್‌ಗಳಿಂದ ಚಿಕಿತ್ಸೆ ನೀಡಬಹುದು. ಮಧ್ಯಮ ಬ್ಯಾಕ್ಟೀರಿಯಾದ ಪ್ರಕರಣಗಳಿಗೆ ಆಂಟಿಬಯೋಟಿಕ್ಸ್ ಮತ್ತು ಪ್ರೋಬಯಾಟಿಕ್‌ಗಳ ಅಗತ್ಯವಿರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಆಸ್ಪತ್ರೆಗೆ ಸೇರಿಸುವುದು ಅಗತ್ಯವಾಗಬಹುದು" ಅವರು ಹೇಳಿದ್ದಾರೆ.
ಇದನ್ನೂ ಓದಿ: Summer Vacationನಲ್ಲಿ ನಿಮ್ಮ ಮಕ್ಕಳನ್ನು ಈ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿ
ಆದರೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಹೊಟ್ಟೆ ಜ್ವರವು ತೊಡಕುಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು. "ನಾವು ಹೆಚ್ಚಿನ ಅತಿಸಾರ, ವಾಂತಿ ಮತ್ತು ಉನ್ನತ ದರ್ಜೆಯ ಜ್ವರದಿಂದ ಒಂದೆರಡು ಪ್ರಕರಣಗಳನ್ನು ಹೊಂದಿದ್ದೇವೆ.
IV ದ್ರವಗಳ ಪ್ರವೇಶ ಮತ್ತು ಜ್ವರಕ್ಕೆ ಸರಿಯಾದ ಚಿಕಿತ್ಸೆಯ ಅಗತ್ಯವಿರುತ್ತದೆ" ಎಂದು ಬೆಲೆನಸ್ ಚಾಂಪಿಯನ್ ಆಸ್ಪತ್ರೆಯ ಮಕ್ಕಳ ವಿಭಾಗದ ಡಾ. ಅಕ್ಷಯ್ ಪಿ ಜಾಧವ್ ಹೇಳಿದರು.
ಅಂದಹಾಗೆ, ಹೊಟ್ಟೆ ಜ್ವರವು ಇನ್ಫ್ಲುಯೆನ್ಸ ವೈರಸ್‌ಗಳಿಂದ ಉಂಟಾಗುವುದಿಲ್ಲ. ಇದು ಸಾಮಾನ್ಯವಾಗಿ ರೋಟವೈರಸ್ಗಳು, ನೊರೊವೈರಸ್ಗಳು ಮತ್ತು ಅಡೆನೊವೈರಸ್ಗಳು ಸೇರಿದಂತೆ ವೈರಸ್ಗಳಿಂದ ಉಂಟಾಗುತ್ತದೆ ಎಂಬುದಾಗಿ ವೈದ್ಯರು ಮಾಹಿತಿ ನೀಡುತ್ತಾರೆ.
ತಜ್ಞ ವೈದ್ಯರ ಸಲಹೆ
ಆದ್ದರಿಂದ ಯಾವಾಗಲೂ ತಿನ್ನುವ ಮೊದಲು ಹಾಗೂ ಆಗಾಗ ಸೋಪ್‌ನಿಂದ ನಿಮ್ಮ ಕೈಗಳನ್ನು ತೊಳೆಯಿರಿ ಎಂದು ಸಲಹೆ ನೀಡುತ್ತಾರೆ. ಬೇಸಿಗೆಯಲ್ಲಿ ಹೆಚ್ಚಿನ ಬಾಯಾರಿಕೆಯಿಂದ ನಾನು ಹೋದಲ್ಲಿ ಬಂದಲ್ಲಿ ಜ್ಯೂಸ್‌ಗಳನ್ನು ನೀರನ್ನು ಕುಡಿಯುತ್ತೇವೆ. ಆದ್ದರಿಂದ ಸಾಕಷ್ಟು ಎಚ್ಚರವಾಗಿರಿ ಎಂಬುದಾಗಿ ತಜ್ಞ ವೈದ್ಯರು ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ