Belagavi: ಮತ್ತೆ ಆಪರೇಷನ್ ಚಿರತೆ ವಿಫಲ; ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್; 22 ಶಾಲೆಗಳಿಗೆ ರಜೆ

ಕಳೆದ ಆಗಸ್ಟ್ 5 ರಂದು ಬೆಳಗಾವಿಯ ಜಾಧವ್ ನಗರದಲ್ಲಿ ಪತ್ತೆಯಾಗಿದ್ದ ಚಿರತೆ, ಕಾರ್ಮಿಕನೋರ್ವನ ಮೇಲೆ ದಾಳಿ ನಡೆಸಿತ್ತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಳಗಾವಿಯಲ್ಲಿಂದು (Belagavi) ಆರಂಭವಾಗಿದ್ದ ಆಪರೇಷನ್ ಚಿರತೆ (Operation Leopard) ಮತ್ತೆ ವಿಫಲಗೊಂಡಿದೆ. ನಗರದ ಕ್ಯಾಂಪ್​ನ ಒಂದು ಎಕರೆ ಪ್ರದೇಶದಲ್ಲಿ ಚಿರತೆ ಇದೆ. ಗಾಲ್ಫ್ ಮೈದಾನ ಮತ್ತು ಕ್ಯಾಂಪ್ ಪ್ರದೇಶದ ಮಧ್ಯದಲ್ಲಿರುವ ಚಿರತೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಪತ್ತೆಯಾದ ಸಂಪೂರ್ಣ ಪ್ರದೇಶವನ್ನ ಬ್ಲಾಕ್ ಮಾಡಿ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ (Forest And Police Department) ಕೈಯಲ್ಲಿ ಅರವಳಿಕೆ ಗನ್, ಲಾಠಿ, ರೈಫಲ್ ಹಿಡಿದು ಕೊಂಬಿಂಗ್ ಆರಂಭ ಮಾಡಿದ್ದರು. ಡಿಸಿಪಿ ರವೀಂದ್ರ ಗಡಾದಿ, ಎಸಿಎಫ್ ಮಲ್ಲಿನಾಥ್ ಕುಸನಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕ್ಯಾಂಪ್ ಪ್ರದೇಶದಿಂದ ಮತ್ತೆ ಗಾಲ್ಫ್ ಮೈದಾನದೊಳಗೆ ಚಿರತೆ ಹೋಗುವಲ್ಲಿ ಯಶಸ್ವಿಯಾಗಿದೆ.

ಕಳೆದ 18 ದಿನಗಳಿಂದ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗುತ್ತಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಳೆದ ಆಗಸ್ಟ್ 5 ರಂದು ಬೆಳಗಾವಿಯ ಜಾಧವ್ ನಗರದಲ್ಲಿ ಪತ್ತೆಯಾಗಿದ್ದ ಚಿರತೆ, ಕಾರ್ಮಿಕನೋರ್ವನ ಮೇಲೆ ದಾಳಿ ನಡೆಸಿತ್ತು.

ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ

ರಾತ್ರಿ ಹೊತ್ತಿನಲ್ಲಿ ಗಾಲ್ಫ್ ಮೈದಾನದಿಂದ ಚಿರತೆ ಹೊರಗೆ ಬರುತ್ತಿರುವ ಕಾರಣ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಳಗಾವಿ ಕ್ಯಾಂಪ್, ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ . ಗಾಲ್ಫ್ ಕ್ಲಬ್​​​ನಲ್ಲಿ ಅರಣ್ಯ ಇಲಾಖೆಯಿಂದ 22 ಟ್ರ್ಯಾಕ್ ಕ್ಯಾಮರಾ, 8 ಬೋನ್, 50 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಸತತ ಕಾರ್ಯಾಚರಣೆ ನಡೆಸಲಾಗುತ್ತಿದೆ.

Leopard not found in Belagavi csb mrq
ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ


ಇದನ್ನೂ ಓದಿ:   Siddaramaiah: ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಏನ್ ತಪ್ಪು; ಸಿದ್ದರಾಮಯ್ಯ ಪರ ಮುತಾಲಿಕ್ ಬ್ಯಾಟ್

ಸರ್ಕಾರಿ ಶಾಲೆಗಳಿಗೆ ರಜೆ

ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಬೆಳಗಾವಿ ಡಿಡಿಪಿಐ ಬಸವರಾಜ್ ನಾಲತವಾಡ ಮಾಹಿತಿ ನೀಡಿದ್ದಾರೆ.

ಬೆಳಗಿನ ವಾಯು ವಿಹಾರಕ್ಕೆ ಬ್ರೇಕ್

ಬೆಳಗಾವಿ ನಗರದ ಹೃದಯ ಭಾಗವಾಗಿರೋ ಪ್ರದೇಶದಲ್ಲಿ ಚಿರತೆ ಭಯ ಜನರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹನುಮಾನ ನಗರ, ಜಾಧವ ನಗರ, ಕುವೆಂಪು ನಗರ, ವಿಶ್ವೇಶ್ವರಯ್ಯ ನಗರ, ಸದಾಶಿವ ನಗರದಲ್ಲಿ ಜನ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳದಂತೆ ಸಹ ಸೂಚನೆ ನೀಡಲಾಗಿದೆ.

Woman dies of heart attack after hearing leopard attack on her son csb mrq
ಬೋನ್ ಇರಿಸಿರೋದು


ಮಗನ ಮೇಲೆ ಚಿರತೆ ದಾಳಿಯ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

ಮಗನ ಮೇಲೆ ಚಿರತೆ ದಾಳಿ ಸುದ್ದಿಯನ್ನು ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೂ ನಡೆದಿದೆ. ಇಂದು ಮಧ್ಯಾಹ್ನ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು‌. ಚಿರತೆ ದಾಳಿಯಿಂದ ಸಿದರಾಯಿ ಮಿರಜಕರ್‌ಗೆ ಸಣ್ಣಪುಟ್ಟ ಗಾಯ ಆಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗುತ್ತಿದ್ದಾಗ ಮಗ ಸಿದರಾಯಿ ಮೇಲೆ ಚಿರತೆ ದಾಳಿಯ ಸುದ್ದಿಯನ್ನು ಕೇಳಿ ಸಿದರಾಯಿ ತಾಯಿ ಶಾಂತಾ ಮಿರಜಕರ್(65) ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಚಿರತೆ ಸೆರೆಗೆ ಹಗಲು ರಾತ್ರಿ ಕಾರ್ಯಚರಣೆ

ಚಿರತೆ ಸೆರೆಗೆ 8 ಬೋನ್, 16 ಟ್ರ್ಯಾಪ್ ಕ್ಯಾಮೆರಾ ಹಾಗೂ ಐವತ್ತು ಹೆಚ್ಚು ಸಿಬ್ಬಂದಿ ಹಗಲು, ರಾತ್ರಿ ಪ್ರಯತ್ನ ಮಾಡುತ್ತಿದ್ದಾರೆ. ಆರಂಭದಲ್ಲಿ ಹಿಂದೆ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಓಡಾಟದ ಫೋಟೋಗಳು ಸೆರೆಯಾಗಿದ್ದವು. ಇದರ ಜತೆಗೆ ಗಾಲ್ಪ್ ಕ್ಲಬ್​ನ 3 ಕಡೆಗಳಲ್ಲಿ ಡ್ರೋನ್ ಕ್ಯಾಮೆರಾ ಹಾರಿಸಲಾಗಿದ್ದು, ಚಿರತೆ ಪತ್ತೆ ಕಾರ್ಯ ಆಗಿಲ್ಲ.

still Leopard not found operation combing failed mrq
ಚಿರತೆ ಪತ್ತೆ ಕಾರ್ಯ


ಇದನ್ನೂ ಓದಿ:  Hijab Row: ಸಡಿಲಗೊಳ್ಳದ ಹಿಜಾಬ್ ಹಠ, ಶಿಕ್ಷಣ ಸಂಸ್ಥೆಗಳಿಗೆ ಗುಡ್ ​ಬೈ; 145 ಮಕ್ಕಳು ಹೊರಟ್ಟಿದ್ದೆಲ್ಲಿಗೆ?

Bannerghatta park: ಬನ್ನೇರುಘಟ್ಟ ಪಾರ್ಕ್​ನಲ್ಲಿ ಹೊಸ ಮೈಲಿಗಲ್ಲು

ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta park) ಪ್ರವಾಸಿಗರ (Tourist) ಅಚ್ಚುಮೆಚ್ಚಿನ ತಾಣ. ಕಾನನದ ಮಡಿಲಲ್ಲಿ ವಿಹರಿಸುವ ವನ್ಯಜೀವಿಗಳನ್ನು (Animals) ನೋಡೋದೇ ಚಂದ. ಇಲ್ಲಿಗೆ ದೇಶ-ವಿದೇಶದಿಂದ (Foreign) ಪ್ರವಾಸಿಗರು ಆಗಮಿಸ್ತಾರೆ. ಕೊರೋನಾ (Corona) ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 75ನೇ ವರ್ಷದ ಸ್ವತಂತ್ರ ಅಮೃತ ಮಹೋತ್ಸವ ನವ (Azadi ka Amrit Mahotsav) ಚೈತನ್ಯ ನೀಡಿದೆ.
Published by:Mahmadrafik K
First published: