ಬೆಂಗಳೂರು (ಮಾ.11): ವಾಹನ ಹಳೆಯದಾದಂತೆ ಅವನ್ನು ಬೇರೆಯವರಿಗೆ ಮಾರುತ್ತೇವೆ. ಇನ್ನು, ವಾಹನ ಬಳಕೆಗೆ ಅಸಮರ್ಥ ಎಂದೆನಿಸಿದರೆ ಅವುಗಳನ್ನು ಗುಜರಿಗೆ ಹಾಕುತ್ತೇವೆ. ಆದರೆ, ಕೆಎಸ್ಆರ್ಟಿಸಿ ಬಳಕೆಯಲ್ಲಿರದ ಹಳೆಯ ಬಸ್ಅನ್ನು ಮೊಬೈಲ್ ಟಾಯ್ಲೆಟ್ ಆಗಿ ಮಾರ್ಪಾಡು ಮಾಡಲು ನಿರ್ಧರಿಸಿದೆ.
ಬಸ್ಸ್ಟ್ಯಾಂಡ್ಗಳಲ್ಲಿ, ಕೆಲ ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯವಿಲ್ಲದೆ ಮಹಿಳೆಯರು ಪರದಾಡುವ ಪರಿಸ್ಥಿತಿ ಇರುತ್ತದೆ. ಹೀಗಾಗಿ ಮಹಿಳೆಯರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಳಕೆಯಿಲ್ಲದ ಕೆಎಸ್ಆರ್ಟಿಸಿ ಬಸ್ಅನ್ನು ಟಾಯ್ಲೆಟ್ ರೀತಿ ಬದಲಿಸಲು ನಿರ್ಧರಿಸಲಾಗಿದೆ.
ಪುಣೆಯ ಖಾಸಗಿ ಸಂಸ್ಥೆಯೊಂದು ಮೊಬೈಲ್ ಟಾಯ್ಲೆಟ್ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದೆ. ಈ ಸಂಸ್ಥೆಯ ಸಹಕಾರದೊಂದಿಗೆ 2016ರಲ್ಲಿ ಪುಣೆ ಮುನ್ಸಿಪಲ್ ಕಾರ್ಪೋರೇಷನ್ ಹಾಗೂ ಮಹಾನಗರ್ ಪರಿವಾಹನ ಮಹಾಮಂಡಲ ಜಂಟಿಯಾಗಿ ಆರು ಬಸ್ಗಳನ್ನು ಮೊಬೈಲ್ ಟಾಯ್ಲೆಟ್ ಆಗಿ ಬದಲಿಸಿತ್ತು.
ಬಸ್ನಲ್ಲಿ ಒಟ್ಟು 6 ಟಾಯ್ಲೆಟ್ಗಳು ಇರಲಿವೆ. 3 ಭಾರತೀಯ ಶೈಲಿಯ ಶೌಚಾಲಯವಾದರೆ, ಉಳಿದ ಮೂರು ಪಾಶ್ಚಿಮಾತ್ಯ ಶೈಲಿಯಲ್ಲಿರಲಿದೆ. ಟಾಯ್ಲೆಟ್ ಜೊತೆ, ಮಗುವಿಗೆ ಹಾಲುಣಿಸಲು ವಿಶೇಷ ಕೊಠಡಿ, ಮಗುವಿಗೆ ಡೈಪರ್ ಬದಲಿಸುವ ಕೊಠಡಿ ಕೂಡ ಬಸ್ನಲ್ಲಿ ಇರಲಿದೆ.
ಇದನ್ನೂ ಓದಿ: ಚಿಕ್ಕ ಸಿಗರೇಟ್ ಮೇಲೆ 7186 ಅಕ್ಷರ ಬರೆದು ದಾಖಲೆ; ಧೂಮಪಾನದ ವಿರುದ್ಧದ ಅರಿವಿಗೆ ಯುವಕನ ವಿಭಿನ್ನ ಪ್ರಯತ್ನ
ವಿಶ್ವ ಮಹಿಳಾ ದಿನಾಚರಣೆಗೆ ಈ ಟಾಯ್ಲೆಟ್ ಕಾರ್ಯಾರಂಭಿಸಬೇಕಿತ್ತು. ಆದರೆ, ಕೆಲಸಗಳು ಬಾಕಿ ಉಳಿದಿದ್ದರಿಂದ ಈ ತಿಂಗಳಾಂತ್ಯಕ್ಕೆ ಮೊಬೈಲ್ ಟಾಯ್ಲೆಟ್ ಹಸ್ತಾಂತರ ಮಾಡುವುದಾಗಿ ಪುಣೆಯ ಖಾಸಗಿ ಸಂಸ್ಥೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಬಳಕೆಯಲ್ಲಿರದ ಮತ್ತಷ್ಟು ಬಸ್ಗಳನ್ನು ಟಾಯ್ಲೆಟ್ ಆಗಿ ಬದಲಿಸುವ ಆಲೋಚನೆಯಲ್ಲಿ ಸರ್ಕಾರ ಇದೆ. ಈ ಯೋಜನೆಗೆ ‘ಸ್ತ್ರೀ ಟಾಯ್ಲೆಟ್’ ಎಂದು ನಾಮಕರಣ ಮಾಡಲಾಗಿದೆ. ಮೆಜೆಸ್ಟಿಕ್ನಲ್ಲಿ ಈ ಮೊಬೈಲ್ ಟಾಯ್ಲೆಟ್ಅನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ