Petrol Price: ಪೆಟ್ರೋಲ್ ದರ ಚಿಕ್ಕಮಗಳೂರಲ್ಲಿ ಒಂದೂವರೆ ರೂ ಇಳಿಕೆ; ಚಿತ್ರದುರ್ಗದಲ್ಲಿ ಒಂದು ರೂಗಿಂತ ಏರಿಕೆ
Today’s Petrol Prices (August 31st)- ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 104.98 ರೂನಲ್ಲಿ ಮುಂದುವರಿದಿದೆ. ಚಿತ್ರದುರ್ಗದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 107.31 ರೂ ಇದೆ. ಇತರ ಜಿಲ್ಲೆಗಳಲ್ಲಿ ಹಾಗೂ ರಾಷ್ಟ್ರಾದ್ಯಂತ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ಬೆಂಗಳೂರು (ಆ. 31): ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಯಥಾಪ್ರಕಾರ ಇವತ್ತೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ವ್ಯತ್ಯಯವಾಗಿದೆ. ಚಿಕ್ಕಮಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ಗೆ ಒಂದೂವರೆ ರೂಪಾಯಿಯಷ್ಟು ಬೆಲೆ ಇಳಿಕೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ 1.19 ರೂ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಮತ್ತು ಕಲಬುರ್ಗಿ ಮೊದಲಾದ ಹಲವು ಜಿಲ್ಲೆಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಳಿದಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ 1.29 ರೂ ನಷ್ಟು ಏರಿಕೆಯಾಗಿದೆ. ಶಿವಮೊಗ್ಗದಲ್ಲೂ ಒಂದು ರೂ ಮೇಲ್ಪಟ್ಟು ಬೆಲೆಹೆಚ್ಚಳವಾಗಿದೆ. ಇತರ ಕೆಲ ಜಿಲ್ಲೆಗಳಲ್ಲೂ ಬೆಲೆ ಏರಿಕೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 107 ರು ಗಡಿ ದಾಟಿದೆ.
ಬೆಂಗಳೂರು ನಗರ ಸೇರಿ ಎರಡು ಮೂರು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಯಥಾಸ್ಥಿತಿಯಲ್ಲಿವೆ. ರಾಷ್ಟ್ರಾದ್ಯಂತ ಬಹುತೇಕ ಪ್ರಮುಖ ನಗರಗಳಲ್ಲೂ ಯಾವುದೇ ಬೆಲೆ ಬದಲಾವಣೆಯಾಗಿಲ್ಲ.
ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಆ. 31):