HOME » NEWS » State » STATES FIRST PRIVATE ONLINE APMC MARKET WILL START AT CHITARDURGA DISTRICT VTC LG

ಚಿತ್ರದುರ್ಗ ಜಿಲ್ಲೆಯಲ್ಲಿ‌ ಪ್ರಾರಂಭವಾಗಲಿದೆ ರಾಜ್ಯದ ಮೊದಲ ಖಾಸಗಿ ಆನ್​ಲೈನ್​​ ಕೃಷಿ ಮಾರುಕಟ್ಟೆ

ಇದನ್ನು ನೋಡಿದ ಯಾವುದೇ ಗ್ರಹಕರು ಆಯಾ ದವಸ, ಹಣ್ಣು, ತರಕಾರಿಗಳ ದರ ಕೋಟ್ ಮಾಡಿ ಕೊಂಡುಕೊಳ್ಳಲು ಇಚ್ಚಿಸಿದರೆ, ರೈತರು ಅವರಿಗೆ ಬೆಳೆಗಳನ್ನ ಮಾರಾಟ ಮಾಡಲು ಒಪ್ಪಿದರೆ ಅಕ್ಷಯ ಫುಡ್ ಪಾರ್ಕ್​​​ನ ಸರ್ಟಿಫಿಕೇಷ್ ಟೀಮ್ ಮಾರುಕಟ್ಟು ವಹಿವಾಟು ನಡೆಸಿ ಗ್ರಹಕರಿಂದ ನೂರಕ್ಕೆ 0.35 ರೂಪಾಯಿ ಕಮಿಷನ್ ಪಡೆಯುತ್ತದೆ ಎನ್ನಲಾಗಿದೆ.

news18-kannada
Updated:February 26, 2021, 1:24 PM IST
ಚಿತ್ರದುರ್ಗ ಜಿಲ್ಲೆಯಲ್ಲಿ‌ ಪ್ರಾರಂಭವಾಗಲಿದೆ ರಾಜ್ಯದ ಮೊದಲ ಖಾಸಗಿ ಆನ್​ಲೈನ್​​ ಕೃಷಿ ಮಾರುಕಟ್ಟೆ
ಎಪಿಎಂಸಿ ಮಾರುಕಟ್ಟೆ
  • Share this:
ಚಿತ್ರದುರ್ಗ(ಫೆ.26): ದೇಶದಲ್ಲಿ ಕೇಂದ್ರ ಸರ್ಕಾರ ಎಪಿಎಂಸಿ  ಕಾಯ್ದೆ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಗೆ ದೇಶವ್ಯಾಪಿ ರೈತರು, ವಿರೋಧ ಪಕ್ಷಗಳು, ಪ್ರತಿಭಟನೆ ನಡೆಸುತ್ತಲೇ ಇವೆ.ಈ ಬೆಳವಣಿಗೆ ನಡುವೆ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯದ ಮೊದಲ ಆನ್​ಲೈನ್​ ಖಾಸಗಿ ಕೃಷಿ ಮಾರುಕಟ್ಟೆ ಪ್ರಾರಂಭಕ್ಕೆ ಅನುಮತಿ ಸಿಕ್ಕಿದೆ. ಕೋಟೆನಾಡು  ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಬಳಿ ಸರ್ಕಾರ ಸಹಕಾರದೊಂದಿಗೆ ಕೋಲಾರ ಮೂಲದ ಎಂ ನಾರಯಣಸ್ವಾಮಿ ಒಡೆತನದ ಅಕ್ಷಯ  ಫುಡ್ ಪಾರ್ಕ್ ನಿರ್ಮಾಣ ಮಾಡಿದೆ.

106 ಎಕರೆ ಪ್ರದೇಶದ ಜಾಗದಲ್ಲಿ 40 ಎಕರೆ ಜಾಗವನ್ನ,1250 ಮೆಟ್ರಿಕ್ ಟನ್ ಕೋಲ್ಡ್ ಸ್ಟೋರೇಜ್, 3ಸಾವಿರ ಸಾಮರ್ಥ್ಯ, ವರ್ಗೀಕರಣ, ಶೇಖರಣೆ, ಸೇರಿದಂತೆ ಹಲವು ಘಟಕಗಳನ್ನ ನಿರ್ಮಾಣ ಮಾಡಲಾಗಿದೆ. ವಿಶೇಷ ಅಂದ್ರೆ ಕೇಂದ್ರ ಸರ್ಕಾರದ ಚಿಂತನೆಯಂತೆ  ಎಪಿಎಂಸಿ ಕಾಯ್ದೆ ತಿದ್ದುಪಡಿ ಅನ್ವಯ ಇಲ್ಲಿ ಆನ್​ಲೈನ್​ ಖಾಸಗಿ ಕೃಷಿ ಮಾರುಕಟ್ಟೆ ನಿರ್ಮಾಣ ಆಗಲಿದೆ. ಇದನ್ನು ಏಪ್ರಿಲ್ ವೇಳೆಗೆ ಪ್ರಾರಂಭ ಮಾಡಲು ಸಿದ್ದತೆ ನಡೆಸಲಾಗಿದೆ.

ಅಲ್ಲದೇ ಈ ಫುಡ್ ಪಾರ್ಕ್​​ನಲ್ಲಿ 150 ಮೆಟ್ರಿಕ್ ಟನ್ ಸಾಮರ್ಥ್ಯದ 0- ಡಿಗ್ರಿಯಿಂದ 15 ಡಿಗ್ರಿವರೆಗೆ 8 ಕೋಲ್ಡ್ ಸ್ಟೋರೇಜ್ ಇದ್ದು, ಯಾವುದೇ ರೈತ ಬೆಳೆದ ಬೆಳೆಗಳನ್ನ ದಾಸ್ತಾನು‌ ಮಾಡಲು ಅವಕಾಶವಿದೆ. ಇನ್ನೂ ರೈತರು ಬೆಳೆಗಳ ವರ್ಗೀಕರಣ ಅನುಸಾರ APMC ದರದ ಅನ್ವಯ ಇಂತಿಷ್ಟು ದರ ಎಂದು ನಿಗದಿಪಡಿಸಲು ಮಕ್ತ ಅವಕಾಶವಿದ್ದು, ಇದನ್ನ ಆನ್​​ಲೈನ್​​ನ E- NAM ಎಂಬ ಆ್ಯಪ್ ಸೇರಿದಂತೆ ಅಕ್ಷಯ ಫುಡ್ ಪಾರ್ಕ್ ಅಭಿವೃದ್ದಿ ಪಡಿಸುತ್ತಿರುವ ಆಪ್ ಮೂಲಕ ಅಪ್ಲೋಡ್ ಮಾಡಲಾಗುತ್ತದೆ.

ನಕಲಿ ಟೋಲ್ ರಶೀದಿ ನೀಡಿ ಪ್ರಯಾಣಿಕರಿಗೆ ವಂಚನೆ; 9 ಜನರ ಬಂಧನ

ಇದನ್ನು ನೋಡಿದ ಯಾವುದೇ ಗ್ರಹಕರು ಆಯಾ ದವಸ, ಹಣ್ಣು, ತರಕಾರಿಗಳ ದರ ಕೋಟ್ ಮಾಡಿ ಕೊಂಡುಕೊಳ್ಳಲು ಇಚ್ಚಿಸಿದರೆ, ರೈತರು ಅವರಿಗೆ ಬೆಳೆಗಳನ್ನ ಮಾರಾಟ ಮಾಡಲು ಒಪ್ಪಿದರೆ ಅಕ್ಷಯ ಫುಡ್ ಪಾರ್ಕ್​​​ನ ಸರ್ಟಿಫಿಕೇಷ್ ಟೀಮ್ ಮಾರುಕಟ್ಟು ವಹಿವಾಟು ನಡೆಸಿ ಗ್ರಹಕರಿಂದ ನೂರಕ್ಕೆ 0.35 ರೂಪಾಯಿ ಕಮಿಷನ್ ಪಡೆಯುತ್ತದೆ ಎನ್ನಲಾಗಿದೆ.

ಇದರಿಂದ ರೈತರು ಬೆಳೆದ ಬೆಳೆಗೆ ರೈತರೇ ದರ ನಿಗದಿ, ಮಾರಾಟದ ಸಂಪೂರ್ಣ ಹಕ್ಕು ಹೊಂದಿದ್ದು, ಅಕ್ಷಯ ಫುಡ್ ಪಾರ್ಕ್ ರೈತರು, ಉದ್ದಿಮೆದಾರರು, ರಫ್ತುದಾರರು, ಟ್ರೇಡರ್ಸ್ ಗಳ ನಡುವೆ ಚೈನ್ ಲಿಂಕ್ ರೀತಿ ಕೆಲಸ ನಿರ್ವಹಿಸಲಿದೆ. ಇದೀಗ ರೈತರ ವಿರೋಧದ ನಡುವೆಯೂ ರಾಜ್ಯದ ಮೊದಲ ಖಾಸಗಿ ಕೃಷಿ ಮಾರುಕಟ್ಟೆ ಆಗುತ್ತಿರುವುದು ಕುತೂಹಲಕ್ಕೆ ಕೆರಳಿಸಿದೆ.
ಒಟ್ಟಾರೆ ದೇಶದ ರೈತರಿಗೆ ಆತಂಕ ಹುಟ್ಟಿಸಿರೋ APMC ಕಾಯ್ದೆ ತಿದ್ದುಪಡಿ ವಿರೋಧದ ನಡುವೆಯೂ ಆನ್​​​ಲೈನ್​​ ಖಾಸಗಿ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಅಕ್ಷಯ ಫುಡ್ ಪಾರ್ಕ್ ಗೆ ಅನುಮತಿ ನೀಡಿದ್ದು, ಎಲ್ಲರ ಚಿತ್ತವನ್ನು ಖಾಸಗಿ ಕೃಷಿ ಮಾರುಕಟ್ಟೆ ನಿರ್ಮಾಣದ ಕಡೆಗೆ ಸೆಳೆದಿದೆ. ಆದರೆ ಮಾರುಕಟ್ಟೆ ಪ್ರಾರಂಭದ ಬಳಕ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಅನ್ನೋದು ಕುತುಹಲ ಮೂಡಿಸಿದೆ.
Published by: Latha CG
First published: February 26, 2021, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories