Text Book Row: ಪಠ್ಯ ಪರಿಷ್ಕರಣಾ ವಿವಾದ ಚುನಾವಣಾ ಗಿಮಿಕ್; ಪ್ರಹ್ಲಾದ್ ಜೋಶಿ ಕಿಡಿ

ಪ್ರತಿಪಕ್ಷಗಳು ಪಠ್ಯ ಪರಿಷ್ಕರಣೆಯನ್ನು ವಿವಾದವನ್ನಾಗಿ ಸೃಷ್ಟಿಸಿ, ಚುನಾವಣೆಯಲ್ಲಿ ಲಾಭ ಪಡೆಯೋ ಹುನ್ನಾರ ನಡೆಸಿವೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮುವ್ವರೂ ಗೆದ್ದು ಬರಲಿದ್ದಾರೆ ಎಂದೂ ತಿಳಿಸಿದ್ದಾರೆ.

ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ

  • Share this:
ಹುಬ್ಬಳ್ಳಿ - ಪಠ್ಯ ಪುಸ್ತಕ ಪರಿಷ್ಕರಣೆ (Textbook revision) ವಿಚಾರದಲ್ಲಿ ಅನಗತ್ಯ ವಿವಾದ‌ ಸೃಷ್ಟಿಸಲಾಗುತ್ತಿದ್ದು, ಇದೊಂದು ಚುನಾವಣಾ (Election) ಗಿಮಿಕ್ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ವಿನಾಕಾರಣ ರಾಜಕೀಕರಣ (Election Politics) ಮಾಡಲಾಗ್ತಿದೆ. ಚುನಾವಣೆ ಹತ್ತಿರ ಬರ್ತಿರೋದ್ರಿಂದ ಇದೆಲ್ಲವೂ ಚುನಾವಣಾ ಗಿಮಿಕ್ ಆಗಿದೆ. ಭಗತ್ ಸಿಂಗ್ (Bhagat Singh), ನಾರಾಯಣಗುರು (Narayanaguru) ಇತ್ಯಾದಿ ವಿಚಾರಗಳನ್ನು ಕ್ರಿಯೇಟ್ ಮಾಡಲಾಗಿದೆ.

ಯಾರೂ ಪಠ್ಯ ಪುಸ್ತಕವನ್ನೇ ನೋಡಿಲ್ಲ. ಪಠ್ಯ ಪುಸ್ತಕವನ್ನು ನೋಡಲಾರದೇ ವಿವಾದ ಮಾಡಲಾಗ್ತಿದೆ. ಬಿಜೆಪಿ ಐಡಿಯಾಲಜಿ ಜನ ಒಪ್ಪುತ್ತಿರೋದ್ರಿಂದ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಇದೊಂದು ಅರ್ಥದಲ್ಲಿ ಅಸಹಿಷ್ಣುತೆ ಸೃಷ್ಟಿ. ನಾವು ಏನೇ ಮಾಡಿದರೂ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು/

ಆ ಕಮಿಟಿಯವರು ಮಾಡ್ತಿದ್ದಾರೆ ಮಾಡ್ಲಿ. ಪಠ್ಯ ಪುಸ್ತಕ ಹೊರ ಬರೋ ಮುನ್ನವೇ ಕೆಲವರು ವಿವಾದ ಎಬ್ಬಿಸೋ ಕೆಲಸಕ್ಕೆ ಕೈ ಹಾಕಿದ್ದಾರೆ. ಬಸವಣ್ಣನವರ ಕುರಿತು ವಿವಾದ ವಿಚಾರ ನಾನಿನ್ನು ಅದನ್ನ ಓದಿಲ್ಲ. ಪುಸ್ತಕ ಓದಿಕೊಂಡು ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ:  B.C Nagesh: ಚಕ್ರತೀರ್ಥ ಪರ ಬಿ ಸಿ ನಾಗೇಶ್ ಬ್ಯಾಟಿಂಗ್; ಪೋಸ್ಟ್ ಹಾಕಿದವರನ್ನು ಬಿಟ್ಟು ಫಾರ್ವಡ್ ಮಾಡಿದವರ ಮೇಲೆ ಕೇಸ್

ಇದೆಲ್ಲವೂ ಚುನಾವಣಾ ಗಿಮಿಕ್

ಮಂದಿರ v/s ಮಸೀದಿ ಗದ್ದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಎಲ್ಲವನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಮಳಲಿ ಮಸೀದಿಯವರು ಸೌಹಾರ್ದಯುತ ಬಗೆಹರಿಸೋ‌ ಮಾತನಾಡಿದ್ದಾರೆ. ಎಲ್ಲರೂ ಕೂಡಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಚುನಾವಣೆ ಸಮೀಪ ಬಂದಿರೋದ್ರಿಂದ ಪ್ರತಿಯೊಂದನ್ನೂ ವಿವಾದ ಮಾಡ್ತಿದಾರೆ. ಇದೆಲ್ಲವೂ ಚುನಾವಣಾ ಗಿಮಿಕ್ ಆಗಿದೆ ಎಂದು ಜೋಶಿ ಕಿಡಿಕಾರಿದರು.

ರಾಜ್ಯಸಭೆ ಚುನಾವಣೆ ಗೆಲುವಿಗೆ ರಣತಂತ್ರ

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಖ್ಯಾಬಲ ಕಡಿಮೆ ಇರೋ ಕಾಂಗ್ರೆಸ್ ನವರೇ ಮತ್ತೊಬ್ಬ ಅಭ್ಯರ್ಥಿಯನ್ನು ಹಾಕಿದ್ದಾರೆ. ಹೀಗಾಗಿ ನಾವು ಕೂಡಾ ಹಾಕಿದ್ದೇವೆ. ನಮ್ಮ ಸ್ಟ್ಯಾಟ್ರರ್ಜಿ ಏನು ಅನ್ನೋದನ್ನ ಬಹಿರಂಗ ಪಡಿಸಲ್ಲ.

ಮತದಾನ ಆದ ಮೇಲೆ ನಮ್ಮ ಸ್ಟ್ಯಾಟರ್ಜಿ ಏನಂತ ಗೊತ್ತಾಗುತ್ತೆ. ನಂಗೆ ಬಹಳ ನಂಬಿಕೆ ಇದೆ, ನಮ್ಮ ಮೂರನೇ ಅಭ್ಯರ್ಥಿ ಕೂಡಾ ಗೆಲ್ತಾರೆ. ಯಾಕೆಂದ್ರೆ ಆ ಎರಡೂ ಪಕ್ಷಗಳಿಗಿಂತ ಹೆಚ್ಚಿನ ಮತ ನಮ್ಮಲ್ಲಿವೆ. ಎರಡನೆಯ ಪ್ರಾಶಸ್ತ್ಯದ ಮತಗಳನ್ನು ಹಾಕಿದಲ್ಲಿ ಖಂಡಿತಾ ಗೆಲ್ತೇವೆ ಎಂದು ಜೋಶಿ ತಿಳಿಸಿದ್ದಾರೆ.

ಫಲಾನುಭವಿಗಳೊಂದಿಗೆ ಪಿಎಂ ಸಂವಾದ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು, ಹುಬ್ಬಳ್ಳಿ ಶ್ರೀನಿವಾದ ಗಾರ್ಡನ್ ನಲ್ಲಿ ಫಲಾನುಭವಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮೇಯರ್ ಈರೇಶ ಅಂಚಟಗೇರಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳ ಮಠ ಮತ್ತಿತರರು ಉಪಸ್ಥಿತರಿದ್ದರು. ಸಾವಿರಾರು ಫಲಾನುಭವಿಗಳು ಭಾಗಿಯಾಗಿ, ಪ್ರಧಾನಿಗಳ ಮಾತುಗಳನ್ನು ಆಲಿಸಿದರು. ಆದರೆ ಹುಬ್ಬಳ್ಳಿಯ ಯಾವೊಬ್ಬ ಫಲಾನುಭವಿಗೂ ಮಾತನಾಡೋಕೆ ಅವಕಾಶ ಸಿಗಲಿಲ್ಲ.

ನಾಡಗೀತೆಗೆ ಅವಮಾನ ಮಾಡಿಲ್ಲ

ನ್ಯೂಸ್ 18 ಕನ್ನಡ ಜೊತೆ  ಮಾತನಾಡಿದ ರೋಹಿತ್ ಚಕ್ರತೀರ್ಥ, ಅವರು ಸಾಹಿತಿಗಳಾ ಅನ್ನೋ ಪ್ರಶ್ನೆ ಎದುರಾಗಿದೆ. ಟೂಲ್ ಕಿಟ್ (Toolkit)‌ ನಿಂದ ಹೀಗೆಲ್ಲಾ ಮಾಡುತ್ತಿದ್ದಾರೆ. ಹಂಪ ನಾಗರಾಜಯ್ಯ ಸೇರಿದಂತೆ ಅನೇಕರು ಇವತ್ತು ರಾಜೀನಾಮೆ ಕೊಡ್ತಿದ್ದಾರೆ.

ಇದನ್ನೂ ಓದಿ:  DK Shivakumar ED Case: ಡಿಕೆಶಿ ಸೇರಿದಂತೆ ಐವರಿಗೆ ಜುಲೈ 1ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್

ನನ್ನ ಮೇಲಿನ ಟಾರ್ಗೆಟ್‌ ಗಾಗಿ ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಪಠ್ಯಪುಸ್ತಕ (Textbook) ವಿಚಾರ ಬೇಡವಾಗಿದೆ. ಸಾಹಿತಿಗಳು ಟ್ರಸ್ಟಿಗಳಾಗಿದ್ದಾಗ ಅವರ ಅಕ್ರಮದ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಟ್ರಸ್ಟ್‌ ಗೆ ಬರುವ ಲಕ್ಷಾಂತರ ರೂ.ಹಣ ಎಲ್ಲಿ ಹೋಗ್ತಿದೆ ಅಂತ ಕೇಳಿದ್ದೆ. ಈ ಕಾರಣಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿ ಸಾಹಿತಿಗಳ ಮೇಲೆ ಭ್ರಷ್ಟಾಚಾರದ (Corruption) ಆರೋಪ ಮಾಡಿದರು.

ಈ ವಿಷಯದಲ್ಲಿ ಜಾತಿಯನ್ನು ಮಧ್ಯೆ ತರುತ್ತಿದ್ದಾರೆ. ಒಂದೊಂದೆ ಜಾತಿಯ ಸಮುದಾಯವನ್ನು ಸೆಳೆಯಲು ನೋಡುತ್ತಿದ್ದಾರೆ. ಇದು ಸರಿಯಲ್ಲ ನಾನು ನಾಡಗೀತೆಗೆ ಯಾವತ್ತೂ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
Published by:Mahmadrafik K
First published: