ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದು ಪಕ್ಕಾ; ಮರುಮೈತ್ರಿ ಸುಳಿವು ನೀಡಿದ ಡಿಕೆಶಿ

ಕಷ್ಟಕಾಲದಲ್ಲಿ ಬಿಜೆಪಿ ಮಿತ್ರರು ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ಜೈಲಿಗೆ ಕಳಿಸಿದರು. ಯಾವುದೇ ಅಕ್ರಮ ಮಾಡದೇ ನಾನು ಜೈಲಿಗೆ ಹೋದೆ. ನಾನು ಜೈಲಿಗೆ ಹೋದಾಗ ನೀವೆಲ್ಲಾ ಹೋರಾಡಿದ್ದೀರಿ. ನಿಮ್ಮೆಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಡಿಕೆಶಿ ಭಾವುಕರಾದರು.

Latha CG | news18-kannada
Updated:December 3, 2019, 4:52 PM IST
ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದು ಪಕ್ಕಾ; ಮರುಮೈತ್ರಿ ಸುಳಿವು ನೀಡಿದ ಡಿಕೆಶಿ
ಸಚಿವ ಡಿ.ಕೆ.ಶಿವಕುಮಾರ್​
  • Share this:
ಬೆಂಗಳೂರು(ಡಿ.03): ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದು ಪಕ್ಕಾ. ಇದನ್ನು ನನ್ನ ಕಣ್ಣುಗಳಲ್ಲಿ ಕಾಣುತ್ತಿದ್ದೇನೆ. ನಾನಲ್ಲ, ಜನರೇ ಬದಲಾವಣೆ ಮಾಡುತ್ತಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್​​ ಅಭಿಪ್ರಾಯಪಟ್ಟಿದ್ದಾರೆ.

ಡಿಕೆಶಿ  ಯಶವಂತಪುರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ನಾಗರಾಜ್​ ಪರ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಾಜ್ಯ ರಾಜಕೀಯ ಬದಲಾಗುತ್ತದೆ.  ಮೈತ್ರಿ ಮಾತುಕತೆ ನೋಡೋಣ, ನಡೆಯುತ್ತಿದೆ ಎಂದು ಹೇಳೂವ ಮೂಲಕ ಮರು ಮೈತ್ರಿ ಸುಳಿವು ನೀಡಿದರು.

ಕಷ್ಟಕಾಲದಲ್ಲಿ ಬಿಜೆಪಿ ಮಿತ್ರರು ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ಜೈಲಿಗೆ ಕಳಿಸಿದರು. ಯಾವುದೇ ಅಕ್ರಮ ಮಾಡದೇ ನಾನು ಜೈಲಿಗೆ ಹೋದೆ. ನಾನು ಜೈಲಿಗೆ ಹೋದಾಗ ನೀವೆಲ್ಲಾ ಹೋರಾಡಿದ್ದೀರಿ. ನಿಮ್ಮೆಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಡಿಕೆಶಿ ಭಾವುಕರಾದರು.

370ನೇ ವಿಧಿ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ 88 ಭಯೋತ್ಪಾದಕ ಘಟನೆಗಳು; ಕೇಂದ್ರ

ಮುಂದುವರೆದ ಅವರು, ಇಡೀ ರಾಜ್ಯ ಪ್ರವಾಸ ಮಾಡಿದ್ದೇನೆ. ಹೊಸಕೋಟೆಯಲ್ಲಿ ಪ್ರಚಾರ ಮಾಡಿದ್ದೇನೆ. ಬೆಳಗ್ಗೆ ಯಶವಂತಪುರಕ್ಕೆ ಬರುತ್ತೇನೆ ಎಂದು ಹೇಳಿದ್ದೆ, ಈಗ ಬಂದಿದ್ದೇನೆ.  ನಾವು ವೋಟ್ ಕೇಳುವುದು ಒಂದೇ ಅಲ್ಲ. ಅನರ್ಹ ಶಾಸಕರಿಗೆ ಬುದ್ಧಿ ಕಲಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು. ಈ ವೇಳೆ ಕಾರ್ಯಕರ್ತರು ನೀವೇ ಸಿಎಂ ಆಗಬೇಕೆಂದು  ಡಿಕೆಶಿ ಪರ ಘೋಷಣೆ ಕೂಗಿದರು.

ಎಸ್​​.ಟಿ ಸೋಮಶೇಖರ್​ಗೆ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್.  ಸೋಮಶೇಖರ್ ತಾಯಿ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಇಂದಿರಾ, ಸೋನಿಯಾ, ರಾಜೀವ್ ಗಾಂಧಿ ಪಕ್ಷ ಕಾಂಗ್ರೆಸ್​. ಯಾವತ್ತು ನಮ್ಮ ಸ್ವಾಭಿಮಾನವನ್ನು ಬಿಡಬಾರದು. ಸೋಮಶೇಖರ್​ ಅವರನ್ನು ಮನೆಗೆ ಕಳಿಸುವ ಕೆಲಸ ಮಾಡೋಣ ಎಂದು ಹೇಳಿದರು.

ಸೋಮಶೇಖರ್​​ರನ್ನು ಸೋಲಿಸಬೇಕು. ಮಾಧ್ಯಮದವರ ಹೇಳ್ತಾ ಇದ್ರು ನಾಗರಾಜ್ ಜೊತೆ ಯಾರು ಇಲ್ಲ ಅಂತ. ಈಗ ಎಷ್ಟು ಜನ ಇದ್ದಾರೆ ನೋಡಿ. ಬಿಜೆಪಿಯವರು ಏನ್ ಕೊಟ್ಟರೂ ತೆಗೆದುಕೊಳ್ಳಿ. ಸೋಮಶೇಖರ್ ನೋಟು, ಕಾಂಗ್ರೆಸ್​​ಗೆ ವೋಟ್. ಈ 15 ಜನ ಮಾತ್ರ ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದರು.ಬೆಂಗಳೂರಿನಲ್ಲಿ ಕುಡಿಯಲು ಹಣ ಕೊಡದಿದ್ದಕ್ಕೆ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದ ಗಂಡ
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ