Santosh Patil Suicide Case: ಎಲ್ಲ ಸಚಿವರೂ ಲಂಚ ಪಡೆಯುತ್ತಿದ್ದಾರೆ, ಸಿದ್ದರಾಮಯ್ಯ ಗಂಭೀರ ಆರೋಪ

ಗುತ್ತಿಗೆದಾರ ಸಂತೋಷ್​ ಪಾಟೀಲ್ (Santosh Patil) ಆತ್ಮಹತ್ಯೆ ಪ್ರಕರಣ ಸಚಿವ ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿದೆ.  ಇದರ ನಡುವೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಯಾವ ಸಚಿವ ಲಂಚ ಪಡೆಯಲ್ಲ? ಎಲ್ಲ ಸಚಿವರೂ ಲಂಚ ಪಡೆಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು (ಏ.13): ಗುತ್ತಿಗೆದಾರ ಸಂತೋಷ್​ ಪಾಟೀಲ್ (Santosh Patil) ಆತ್ಮಹತ್ಯೆ (Suicide) ಪ್ರಕರಣ ಸಚಿವ ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿದೆ. ಕಮಿಷನ್​ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್​ ಪಾಟೀಲ್​ ಈಶ್ವರಪ್ಪ ಅವರೇ ತಮ್ಮ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆ ಈಗಾಗಲೇ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ, ಕಾಂಗ್ರೆಸ್​, ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ (Eshwarappa) ಅವರ ರಾಜೀನಾಮೆ ಪಡೆಯುವ ಜೊತೆಗೆ, ರಾಜ್ಯ ಸರ್ಕಾರ ಕಮಿಷನ್ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಮೇ.25ರಿಂದ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಎಲ್ಲಾ ರೀತಿಯ ಕಾಮಗಾರಿ ನಿಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಘೋಷಿಸಿದೆ. ಇದರ ನಡುವೆ ಈ ಪ್ರಕರಣದ ಕುರಿತು ಗಂಭಿರ ಆರೋಪ ಮಾಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ (Siddaramaiah), ಯಾವ ಸಚಿವ ಲಂಚ ಪಡೆಯಲ್ಲ? ಎಲ್ಲ ಸಚಿವರೂ ಲಂಚ ಪಡೆಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

  ಸಿದ್ಧರಾಮಯ್ಯ ಗಂಭಿರ ಆರೋಪ:

  ಸಂತೋಷ್​ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಚಿವ ಈಶ್ವರಪ್ಪ ಅವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಈ ಸಂಬಂಧ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಯಾವ ಸಚಿವ ಲಂಚ ಪಡೆಯಲ್ಲ? ಎಲ್ಲ ಸಚಿವರೂ ಲಂಚ ಪಡೆಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ಹಾಕಲಾಗಿದೆ. ಆದರೆ 307ರ ಅಡಿ ಪ್ರಕರಣ ದಾಖಲೆ ಮಾಡಬೇಕಿದೆ. ಇದು ಜಾಮೀನು ರಹಿತ ಅಪರಾಧ ಆಗಿದ್ದು, ಈಶ್ವರಪ್ಪ ಅವರ ಪಿಎ ಗಳು 40 ಪರ್ಸೆಂಟ್ ಕಮೀಷನ್ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಂತೋಷ್ ಈಶ್ವರಪ್ಪ ಅವರು ಬಿಲ್ ಕೊಡೆ , ವರ್ಕ್ ಆರ್ಡರ್ ಕೊಡದೇನೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

  ಇದನ್ನೂ ಓದಿ: Santosh Patil: ಸಂತೋಷ್ ಪಾಟೀಲ್ ಆತ್ಮಹತ್ಯೆ: ಸಚಿವ ಈಶ್ವರಪ್ಪ ಸುದ್ದಿಗೋಷ್ಠಿ, ಗುತ್ತಿಗೆದಾರರ ಸಂಘದಿಂದ ಮಹತ್ವದ ಸಭೆ

  ಇದಕ್ಕಿಂತಾ ದೊಡ್ಡ ಸಾಕ್ಷಿ ಬೇಕಾ:

  ಈಗಾಗಲೇ ಗುತ್ತಿಗೆದಾರ ಸಂತೋಷ್ ಡೆತ್​ ನೋಟ್​ ನಲ್ಲಿ ಈಶ್ವರಪ್ಪ ಅವರ ಹೆಸರನ್ನು ಬರೆದಿದ್ದಾರೆ ರಾಜ್ಯ ಸರ್ಕಾರಕ್ಕೆ ಇದಕ್ಕಿಂತಾ ದೊಡ್ಡ ಸಾಕ್ಷಿ ಏನು ಬೇಕಾಗಿದೆ. ಇಷ್ಟು ಸಾಕ್ಷಿ ಸಾಕಾಗುವುದಿಲ್ಲವೇ ಎಂದು ಪ್ರಶ್ನಸಿದ್ದಾರೆ. ಅಲ್ಲದೇ ನಾಳೆ ಈ ವಿಚಾರವಾಗಿ ನಾವು ನಿಲುವಳಿ ಸೂಚನೆ ಮಂಡಿಸದರೂ ಸ್ಪೀಕರ್ ನಿಲುವಳಿಯನ್ನು ತಿರಸ್ಕರಿಸರಿಸದರು. ಇದರೊಂದಿಗೆ ರಾಜ್ಯ ಸರ್ಕಾರ ಲೂಟಿ ಹೊಡೆಯುತ್ತಿದೆ. ಈ ಕುರಿತು ಕೆಂಪಣ್ಣ ಪಿಎಂ ಮೋಧಿ ಅವರಿಗೆ ಪತ್ರ ಬರೆದರೂ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

  ಇದಲ್ಲದೇ ಈ ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ಯಾರ ರಕ್ಷಣೆಗೂ ಹೋಗಬಾರದು. ಇದು ಗಂಭೀರ ಅಪರಾಧ ಪ್ರಕರಣ. ಅವರನ್ನು ಸಂಪುಟದಿಂದ ವಜಾ ಮಾಡದಿದ್ದರೆ, ಸಿಎಂ ಕೂಡ ಇದರಲ್ಲಿ ಪಾಲುದಾರ ಎಂಬುದು ಸಾಬೀತಗುತ್ತದೆ. ಈ ಪ್ರಕರಣದಿಂದ ಸಿಎಂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಎಂಬುದು ಸಾಬೀತಾಗಿದೆ.

  ಇದನ್ನೂ ಓದಿ: Santosh Patil Suicide Case: ಕೆಂಪಣ್ಣ ವಿರುದ್ಧ ಮಾನನಷ್ಟ ಕೇಸ್ ಹಾಕ್ತೀನಿ; ಸಚಿವ ಸುಧಾಕರ್​​

  ಗುತ್ತಿಗೆದಾರರ ಸಂಘದಿಂದ ಸಭೆ:

  ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ಗುತ್ತಿಗೆದಾರರ ಸಭೆಯಲ್ಲಿ ಕೈಗೊಳ್ಳಲಾಗಿದೆ.  ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಬಿಜೆಪಿ ಸದಸ್ಯರೂ ಆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟಿನ ಹಾಲಿ ನ್ಯಾಯಧೀಶರಿಂದ ತನಿಖೆ ನಡೆಸಬೇಕು. ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗುತ್ತಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ನೇರವಾಗಿ ಮಾಧ್ಯಮಗಳ ಎದುರು ಆರೋಪ ಮಾಡಿದ್ದಾರೆ.
  Published by:shrikrishna bhat
  First published: