Doddaballapura: ದೊಡ್ಡಬಳ್ಳಾಪುರದ ರೇಷ್ಮೆ ಬೆಳೆಗಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಗರಿ

ರೈತರು ಸಾಲ ಮಾಡಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ , ಇಲ್ಲಿನ ರೈತರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಲಾಭದ ಜೊತೆಗೆ ಸಾಧನೆಯನ್ನೂ ಮಾಡುತ್ತಿದ್ದಾರೆ.

ಪ್ರಶಸ್ತಿ ಪುರಸ್ಕೃತ ಬೆಳೆಗಾರರು

ಪ್ರಶಸ್ತಿ ಪುರಸ್ಕೃತ ಬೆಳೆಗಾರರು

  • Share this:
    ದೊಡ್ಡಬಳ್ಳಾಪುರ: ರೇಷ್ಮೆ ಬೆಳೆಗಾರರು (Silk Growers) ಅತಿ ಕಡಿಮೆ ಇರುವ ದೊಡ್ಡಬಳ್ಳಾಪುರಕ್ಕೆ (Doddaballapura) ೨೦೨೦-೨೧ ಸಾಲಿನ ರಾಜ್ಯ ಮಟ್ಟದ (State Level) ಪ್ರಗತಿ ಪರ ಮಹಿಳಾ ರೇಷ್ಮೆ ಬೆಳೆಗಾರರು ವಿಭಾಗದಿಂದ ದೊಡ್ಡಬಳ್ಳಾಪುರದ ತೂಬಗೆರೆ ಹೋಬಳಿ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯ ಅವರಿಗೆ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಸಂದಿದೆ. ಇದರೊಂದಿಗೆ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಗಂಗಪ್ಪ ಅವರು ಪುರುಷ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ದೊಡ್ಡಬಳ್ಳಾಪುರ ತಾಲೂಕಿಗೆ ಗೌರವ ತಂದುಕೊಟ್ಟಿದ್ದಾರೆ. ಬೆಟ್ಟಗಳ ಸಾಲಿನ ಹಳ್ಳಿ.ನಂದಿ ಬೆಟ್ಟ, ಚನ್ನರಾಯಸ್ವಾಮಿ ಬೆಟ್ಟದ ಸಾಲಿನಲ್ಲಿ ಬರುವ ಸೀಗೆಹಳ್ಳಿ ಗ್ರಾಮದ ರತ್ಮಮ್ಮ ರಾಮಯ್ಯ ರಾಜ್ಯ ಮಟ್ಟದ ಸಾಧನೆ ಮಾಡಿ ದೊಡ್ಡಬಳ್ಳಾಪುರ ತಾಲೂಕಿಗೆ ಮಾದರಿಯಾಗಿದ್ದಾರೆ.

    ಇದನ್ನೂ ಓದಿ: Kalaburagi: ಹಾಲು ಕುಡಿದ ಕಲ್ಲಿನ ಬಸವ, ನಂದಿ ವಿಗ್ರಹದ ಪವಾಡ ನೋಡಲು ಹರಿದು ಬರ್ತಿದೆ ಜನ ಸಾಗರ

    1 ಎಕರೆಯಲ್ಲಿ 3.5 ಲಕ್ಷ ರೂ. ಲಾಭ 

    ೨೦೨೦-೨೧ನೇ ಸಾಲಿನಲ್ಲಿ ಕೇವಲ ಒಂದು ಎಕರೆ ಪ್ರದೇಶದಲ್ಲಿ ವಾರ್ಷಿಕವಾಗಿ ಉತ್ಪದನಾ ವೆಚ್ಚವನ್ನು ಹೊರತುಪಡಿಸಿ ೩.೮೩ ಲಕ್ಷ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ರೈತರು ಸಾಲ ಮಾಡಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ , ರೈತರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ನಮ್ಮನ್ನು ನಾವು ಸಮರ್ಥವಾಗಿ ಆರ್ಥಿಕವಾಗಿ ಕಟ್ಟಿಕೊಳ್ಳಬಹುದು ಎಂಬ ಅವರ ಸಾಧನೆ, ಎಲ್ಲಾ ರೈತರಿಗೂ ಮಾದರಿಯಾಗಬೇಕಿದೆ. ಅದೇ ರೀತಿ ದೊಡ್ಡಬಳ್ಳಾಪುರದ ಕಸಬಾ ಹೋಬಳಿ ಮರಳೇನಹಳ್ಳಿ ತಿಮ್ಮರಾಜು ಗಂಗಪ್ಪ ೨೦೨೦-೨೧ ನೇ ಸಾಲಿನಲ್ಲಿ ೧ ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿಕೊಂಡು, ವಾರ್ಷಿಕ ಸುಮಾರು ೫ ಬೆಳೆಗಳನ್ನು ಬೆಳೆಯುತ್ತಾ ವಾರ್ಷಿಕವಾಗಿ ೩.೫ ಲಕ್ಷ ರೂಪಾಯಿಗಳಷ್ಟು ಲಾಭ ಗಳಿಸಿದ್ದಾರೆ.

    ರಾಜ್ಯ ಮಟ್ಟದ ಪ್ರಶಸ್ತಿ

    ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ಪುರಸ್ಕೃತೆ, ರತ್ನಮ್ಮ ರಾಮಯ್ಯ  ಅವರ ಮಗ ಮಂಜುನಾಥ್ಕಳೆದ ೨೫ ವರ್ಷದಿಂದ ರೇಷೆ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೆ. ೧೦ ವರ್ಷಗಳ ಹಿಂದೆ ಪ್ರತಿ ಕೆಜಿಗೂ ೧೫೦ರಿಂದ ೩೦೦ ರೂಪಾಯಿಗಳ ಬೆಲೆ ಇತ್ತು. ಕೆಳೆದ ೧೦ ವರ್ಷಗಳ ನಂತರ ರೇಷ್ಮೆ ಇಲಾಖೆಯ ಸಹಯೋಗದಿಂದ ರೇಷ್ಮೆ ಕೃಷಿ ಲಾಭದಾಯಕವಾಗಿದೆ. ಶೇಕಡ ೧೦೦ ಕ್ಕೂ ಹೆಚ್ಚು ಇಳುವರಿಯನ್ನು ಪ್ರಸ್ತುತ ಪಡೆಯುತ್ತಿದ್ದೇವೆ. ೯೦೦ ರೂಪಾಯಿಗಳ ವರೆಗೆ ಪ್ರತಿ ಕೆಜಿಗೆ ದಾರಣೆ ಇದೆ. ಈ ಹಿಂದೆ ರೇಷ್ಮೆ ಇಲಾಖೆ ಬಗ್ಗೆ ನಮಗೆ ತಿಳಿದಿರಲ್ಲಿ ರೇಷ್ಮೆ ಇಲಾಖೆ ಸಹಕಾರ ಸಿಕ್ಕ ನಂತರ ಹಿಪ್ಪು ನೇರಳೆ ಬೆಳೆಯಲು ನರೇಗದಿಂದ ಸಹಾಯ ದನ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯ ದನ ಇಲಾಖೆಯಿಂದ ದೊರೆತಿದೆ. ಇದರಿಂದ ವರ್ಷಕ್ಕೆ ಸುಮಾರು ೧೧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಈ ರೀತಿ ಸರ್ಕಾರದಿಂದ ದೊರೆಯುವ ಸರ್ಕಾರದ ಸಹಾಯ ದನವನ್ನು ಪಡೆಯುವುದು ಮುಖ್ಯವಲ್ಲ, ಇದನ್ನು ಸಮರ್ಪಕವಾಗಿ ಬೆಳೆಸಿಕೊಳ್ಳುವಲ್ಲಿ ಶ್ರಮ, ಶ್ರದ್ದೆಯಿಂದ ಕಾರ್ಯ ನಿರ್ವಹಿಸಿದರೆ ಫಲ ಖಂಡಿತಾ ಸಿಗುತ್ತದೆ. ಇದಕ್ಕೆ ಉದಾಹರಣೆ ನಮಗೆ ದೊರೆತ ರಾಜ್ಯ ಪ್ರಶಸ್ತಿಯೆ ನಿದರ್ಶನವಾಗಿದೆ ಎಂದು  ರೇಷ್ಮೆ ಸಹಾಯಕ ನಿರ್ದೇಶಕ ಉದಯ್ ತಿಳಿಸಿದ್ದಾರೆ.

    ಇದನ್ನೂ ಓದಿ: Forest Clean: ಅರಣ್ಯ ಪ್ರದೇಶದ ಸ್ವಚ್ಛತೆಗೆ ಇಳಿದ್ರು ಅರಣ್ಯಾಧಿಕಾರಿಗಳು, ‘ಕಾಡಲ್ಲಿ ಗಾಜು, ಪ್ಲಾಸ್ಟಿಕ್ ಬಿಸಾಡಬೇಡಿ’

    ೧ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ

    ೨೦೧೬-೧೭ ರಿಂದ ರತ್ನಮ್ಮ ರಾಮಯ್ಯ ಮಹಿಳಾ ರೇಷ್ಮೆ ಪ್ರಗತಿಪರ ರೈತರಾಗಿ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ೧೦೦ ದ್ವಿತಳಿ ಮೊಟ್ಟೆಗೆ ೧೦೦೦ ಸಹಾಯ ದನ ಪಡೆಯುತ್ತಿದ್ದು, ೩.೧೦ ಎಕರೆ ಭೂಮಿಯ ಪೈಕಿ, ೧ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ.  ಹಿಪ್ಪು ನೇರಳೆ ಬೆಳೆಯಲು ನರೇಗದಲ್ಲಿ ಸಹಾಯ ದನ, ಹುಳು ಸಾಕಾಣಿಕೆ ಸಲಕರಣೆ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಸಹಾಯ ದನ ಪಡೆದಿದ್ದಾರೆ. ಈ ಮೂಲಕ ವಾರ್ಷಿಕವಾಗಿ ೧೦ಕ್ಕೂ ಹೆಚ್ಚು ಬೆಳೆಗಳನ್ನು ಅವರು ಬೆಳೆಯುವ ಮೂಲಕ ಶೇಕಡ ೧೦೦ಕ್ಕೂ ಹೆಚ್ಚು ಇಳುವರಿ ಪಡೆಯುವ ಮೂಲಕ ರಾಜ್ಯದಲ್ಲೆ ಪ್ರಥಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ದೊಡ್ಡಬಳ್ಳಾಪುರಕ್ಕೆ ಹೆಮ್ಮೆ. ದೊಡ್ಡಬಳ್ಳಾಪುರ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ರೇಷ್ಮೆ ಇಲಾಖೆ ಹೆಮ್ಮೆ ವ್ಯಕ್ತಪಡಿಸಿತ್ತದೆ.  ಇಲಾಖೆ  ತಾಂತ್ರಿಕ ವರ್ಗ ತಾಲೂಕಿ ರೇಷ್ಮೆ ಬೆಳೆಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.  ೨೦೨೦-೨೧ನೇ ಸಾಲಿನಿಂದ ರೇಷ್ಮೆ ಬೆಳೆಗಾರರು ದೊಡ್ಡಬಳ್ಳಾಪುರದಲ್ಲಿ ಹೆಚ್ಚುತ್ತಿದ್ದು, ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನ ೩೫ ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ರೇಷ್ಮೆ ಬೆಳೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಹಿದ್ದು, ರೈತರು ರೇಷ್ಮೆ ಕೃಷಿ ಕಡೆಗೆ ಮುಖ ಮಾಡಬೇಕಿದೆ.

    ವರದಿ: ಮನುಕುಮಾರ ಹೆಚ್ ಕೆ 
    Published by:Kavya V
    First published: