ಬರಕ್ಕೆ ಸಿಕ್ಕು ಬೇಯುತ್ತಿದೆ ರಾಜ್ಯ; ಮೋಜು ಮಸ್ತಿಯಲ್ಲಿ ಮುಳುಗಿರುವ ಮುಖ್ಯಮಂತ್ರಿ ಹಾಗೂ ಸರ್ಕಾರ !

ಸರ್ಕಾರವೇ ನೀಡುವ ಅಂಕಿಅಂಶಗಳ ಪ್ರಕಾರ ರಾಜ್ಯದ ಸುಮಾರು 159 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಗುರುತಿಸಲಾಗಿದೆ. ಇಂತಹ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದದ್ದು ಸರಕಾರದ ಆದ್ಯ ಕರ್ತವ್ಯ. ಆದರೆ, ಯುದ್ದೋಪಾದಿಯಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ ರಾಜ್ಯ ಸರ್ಕಾರ ಮಾತ್ರ ಚುನಾವಣೆ ಮುಗಿಸಿ ರಿಲ್ಯಾಕ್​ ಮೂಡ್​ನಲ್ಲಿದೆ.

MAshok Kumar | news18
Updated:April 29, 2019, 4:32 PM IST
ಬರಕ್ಕೆ ಸಿಕ್ಕು ಬೇಯುತ್ತಿದೆ ರಾಜ್ಯ; ಮೋಜು ಮಸ್ತಿಯಲ್ಲಿ ಮುಳುಗಿರುವ ಮುಖ್ಯಮಂತ್ರಿ ಹಾಗೂ ಸರ್ಕಾರ !
ಮೋಜು ಮಸ್ತಿಯಲ್ಲಿ ತೊಡಗಿರುವ ಮುಖ್ಯಮಂತ್ರಿಗಳು ಹಾಗೂ ಸಚಿವರು.
  • News18
  • Last Updated: April 29, 2019, 4:32 PM IST
  • Share this:
ಬೆಂಗಳೂರು (ಏ.29) : ರಾಜ್ಯ ಹಿಂದೆಂದೂ ಕಾಣದಂತಹ ಬರಕ್ಕೆ ತುತ್ತಾಗಿದೆ. ಬಿಸಿಗಾಳಿಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ತುತ್ತಾಗಿವೆ. ರಾಜ್ಯದ ಅನೇಕ ತಾಲೂಕುಗಳಲ್ಲಿ ಕುಡಿಯಲು ಸಹ ನೀರಿಲ್ಲದೆ ಜನ ಜಾನುವಾರುಗಳು ಸಾವಿಗಿಡಾಗುತ್ತಿರುವ ಕುರಿತು ಸುದ್ದಿಯಾಗುತ್ತಲೇ ಇದೆ. ಆದರೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ಮಾತ್ರ ಚುನಾವಣೆ ಮುಗಿಸಿ ಇದೀಗ ರಿಲ್ಯಾಕ್ಸ್ ಮೂಡ್​ಗೆ ಜಾರಿರುವುದು ಮಾತ್ರ ವಿಪರ್ಯಾಸ.

ಸರ್ಕಾರವೇ ನೀಡುವ ಅಂಕಿಅಂಶಗಳ ಪ್ರಕಾರ ರಾಜ್ಯದ ಸುಮಾರು 159 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಗುರುತಿಸಲಾಗಿದೆ. ಇಂತಹ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದದ್ದು ಸರಕಾರದ ಆದ್ಯ ಕರ್ತವ್ಯ. ಆದರೆ, ಯುದ್ದೋಪಾದಿಯಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ ರಾಜ್ಯ ಸರ್ಕಾರ ಮಾತ್ರ ಚುನಾವಣೆ ಮುಗಿಸಿ ರಿಲ್ಯಾಕ್​ ಮೂಡ್​ನಲ್ಲಿದೆ.

ಇದನ್ನೂ ಓದಿ : ಅಪ್ಪ ಕೆಲಸಕ್ಕೆ ಹೋಗ್ಬೇಡಪ್ಪ; ಪೊಲೀಸ್ ಅಪ್ಪನ ಕಾಲಿಡಿದು ಅಳುತ್ತಿರುವ ಮಗು; ವಿಡಿಯೋ ವೈರಲ್..!

ಸ್ವತಃ ರಾಜ್ಯದ ಮುಖ್ಯಮಂತ್ರಿ ಉಡುಪಿಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದರೆ, ಅವರ ಸಂಪುಟದ ಇತರೆ ಸಚಿವರು ಸಹ ಮುಖ್ಯಮಂತ್ರಿಯನ್ನು ಹಿಂಬಾಲಿಸುತ್ತಾ ನಗೆಪಾಟಲಿಗೀಡಾಗಿರುವ ಪ್ರಸಂಗಕ್ಕೆ ರಾಜ್ಯ ಸರ್ಕಾರ ಸಾಕ್ಷಿಯಾಗಿದೆ.

ಬರದಿಂದ ಬೇಯುತ್ತಿದೆ ರಾಜ್ಯ, ರಿಲ್ಯಾಕ್ಸ್ ಮೂಡ್​ನಲ್ಲಿ ಸರ್ಕಾರ :  ಮುಖ್ಯಮಂತ್ರಿ ಕುಮಾರಸ್ವಾಮಿಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ಸರ್ಕಾರದ ಆಡಳಿತ ಯಂತ್ರ ನಿರ್ವಹಿಸಿದ್ದಕ್ಕಿಂತ ಮಂಡ್ಯ ಚುನಾವಣೆಯಲ್ಲಿ ಕಾಲ ಕಳೆದದ್ದೆ ಹೆಚ್ಚು. ಮಂಡ್ಯವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದ ಅವರು ಅಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದರು ಪರಿಣಾಮ ಕಳೆದ ಎರಡು ತಿಂಗಳಿನಿಂದ ಅಲ್ಲೇ ಠಿಕಾಣಿ ಹೂಡಿದ್ದರು.ಇದೀಗ ಮಂಡ್ಯ ಚುನಾವಣೆ ಮುಕ್ತಾಯವಾಗಿದೆ. ಆದರೆ, ರಾಜ್ಯದ ಬರದ ಸಮಸ್ಯೆ ಮಾತ್ರ ಇನ್ನೂ ಹಾಗೆ ಇದೆ. ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು, ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರಿತಪಿಸುವ ಸ್ಥಿತಿ ಇದೆ. ಆದರೆ, ಈ ಸಮಸ್ಯೆಗೆ ಪರಿಹಾರ ನೀಡಬೇಕಾದ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ತಮ್ಮ ತಂದೆ ಮಾಜಿ ಪ್ರಧಾನಿ ಎಚ್​.ಡಿ, ದೇವೇಗೌಡ ಅವರ ಜೊತೆಯಾಗಿ ಉಡುಪಿಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಾ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿಯ ಜೊತೆಗೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹಾಗೂ ಎಮ್​ಎಲ್​ಸಿ ಬೋಜೆಗೌಡ ಸಹ ಅಲ್ಲೇ ಠಿಕಾಣಿ ಹೂಡಿದ್ದಾರೆ.ಇದನ್ನೂ ಓದಿ : ಶ್ರೀಲಂಕಾದಲ್ಲಿ ಮತ್ತೊಂದು ಆತ್ಮಾಹುತಿ ಬಾಂಬ್​ ದಾಳಿಗೆ ಸಂಚು?; ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ ಸರ್ಕಾರ

ಉಡುಪಿಯ ಕಾಪು ಮುಳೂರು ಸಮೀಪದ ಸಾಯಿರಾಧ ಹೆಲ್ತ್ ರೆಸಾರ್ಟ್​ನಲ್ಲಿ ಉಳಿದುಕೊಂಡಿರುವ ಸಚಿವರು ಕಾಪು ಬೀಚ್​ನಲ್ಲಿ ಸಮುದ್ರ ಸ್ನಾನ ಮಾಡಿ ಸ್ಯಾಂಡ್ ಥೆರಪಿ ಮಾಡಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡಿದ್ರೆ ಚುನಾವಣಾ ನೀತಿ ಸಂಹಿತೆ ಇದೆ ಹೀಗಾಗಿ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕುಂಟು ನೆಪ ಹೇಳುತ್ತಾ ಕಾಲಕಳೆಯುತ್ತಿದ್ದಾರೆ. ಆದರೆ. ಚುನಾವಣೆಗೆ ಮುಂಚೆಯೇ ಮುಂದಾಗ ಬಹುದಾದ ಸಮಸ್ಯೆಗಳನ್ನು ಅರಿತು ಕೆಲಸ ಮಾಡಿಲ್ಲವೇಕೆ? ಎಂಬ ಪ್ರಶ್ನೆ ಜನರ ನಡುವಿನಿಂದ ಕೇಳಿ ಬರುತ್ತಿದೆ.

ಒಟ್ಟಾರೆ ಇಡೀ ರಾಜ್ಯ ಬಿಸಿಲು ಹಾಗೂ ಬರದ ನಡುವೆ ಸಿಲುಕಿ ಬೆಂದು ಹೋಗುತ್ತಿರುವಾಗ ಈ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ಅದರ ಕುರಿತು ಗಮನ ಹರಿಸದೆ ಹೀಗೆ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ!
First published:April 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ