ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ: ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್​ ವರಿಷ್ಠರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ

ರಾಜ್ಯದ ಎಲ್ಲೆಡೆ ಕಾನೂನು ಬಾಹಿರ ಗಾಂಜಾ ಬೆಳೆಯುತ್ತಿದ್ದು, ಅದನ್ನು ಸಂಪೂರ್ಣವಾಗಿ ನಾಶ ಮಾಡುವುದು. ಹಾಗೂ ಅಪೀಮಿನಿಂದ ಕೆಳ ದರ್ಜೆಯ ಹೆರಾಯಿನ್ ತಯಾರಿಸುವ ಘಟಕಗಳನ್ನು ನಾಶ ಮಾಡಬೇಕು ಎಂದು ಗೃಹ ಸಚಿವರು ಸೂಚಿಸಿದರು.

news18-kannada
Updated:September 6, 2020, 7:06 AM IST
ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ: ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್​ ವರಿಷ್ಠರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ
ಗೃಹ ಸಚಿವ ಬಸವರಾಜ ಬೊಮ್ಮಾಯಿ
  • Share this:
ಬೆಂಗಳೂರು(ಸೆ. 06): ರಾಜ್ಯದಲ್ಲಿ  ಡ್ರಗ್ಸ್ ನಿರ್ಮೂಲನೆ ಕುರಿತು ಗೃಹ ಸಚಿವರು ಶನಿವಾರ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವದ ಚರ್ಚೆ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಗೃಹ ಸಚಿವ ಬಸವರಾಜು ಬೊಮ್ಮಯಿ ರಾಜ್ಯದ  ಎಸ್​ಪಿ, ಐಜಿ ಮತ್ತು ಕಮೀಷನರ್ ಜೊತೆಗೆ ನಿನ್ನೆ ಮಹತ್ವದ  ಚರ್ಚೆ ನಡೆಸಿದರು. ಚರ್ಚೆ ಒಂದಷ್ಟು ಕ್ರಮ ಕೈಗೊಳ್ಳಲು ಗೃಹ ಸಚಿವ ಪೊಲೀಸ್ ಅಧಿಕಾರಿಗಳುಗೆ ಸೂಚನೆ ನೀಡಿದರು. ರಾಜ್ಯದಲ್ಲಿ  ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಹಾಕಬೇಕು ಎಂದು ಸ್ಪಷ್ಟ ಸಂದೇಶವನ್ನು ಗೃಹ ಸಚಿವರು ಪೊಲೀಸ್ ಇಲಾಖೆಗೆ ಸಾರಿದರು.

ಆಂಧ್ರಪ್ರದೇಶ, ತೆಲಂಗಾಣ,  ಕೇರಳ, ತಮಿಳುನಾಡು, ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ಬೇಕಾದ ವಿಶೇಷ ಪೋಲಿಸ್ ತಂಡವನ್ನು ರಚಿಸಲು ಸೂಚಿಸಿದರು. ಅಷ್ಟೇ ಅಲ್ಲದೆ  ಹಿಂದೆ ಮಾದಕ ವಸ್ತುಗಳ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಅವರ ಚಲನವಲನಗಳ ನಿಗವಹಿಬೇಕು ಎಂದು ಆದೇಶಿಸಿದರು.

ರಾಜ್ಯದ ಎಲ್ಲೆಡೆ ಕಾನೂನು ಬಾಹಿರ ಗಾಂಜಾ ಬೆಳೆಯುತ್ತಿದ್ದು, ಅದನ್ನು ಸಂಪೂರ್ಣವಾಗಿ ನಾಶ ಮಾಡುವುದು. ಹಾಗೂ ಅಪೀಮಿನಿಂದ ಕೆಳ ದರ್ಜೆಯ ಹೆರಾಯಿನ್ ತಯಾರಿಸುವ ಘಟಕಗಳನ್ನು ನಾಶ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಮಾದಕ ದ್ರವ್ಯ ಇರುವಂತಹ ಔಷಧ ತಯಾರಿಕೆಯನ್ನು ದುರುಪಯೋಗ ಆಗದಂತೆ ಡ್ರಗ್ ಕಂಟ್ರೋಲರ್ ಆಯೋಗದಿಂದ ನಿಯಂತ್ರಿಸುವುದು ಹೇಗೆ ಚರ್ಚೆ ನಡೆಸಿದರು. ರಾಜ್ಯ ಮತ್ತು ಅಂತರ ರಾಜ್ಯ ಮಾದಕ ವಸ್ತುಗಳ ಸರಬರಾಜು ಮಾಡುವ ಮುಖ್ಯ ಅಪರಾಧಿಗಳನ್ನು ಶೋಧಿಸಿ ಬಂಧಿಸಬೇಕು. ವಿದೇಶಿ ನಾಗರೀಕರ ಮೇಲೆ ತೀವ್ರ ನಿಗಾ ಇಡುವುದು ಮುಖ್ಯ. ಅಗತ್ಯವಿದ್ದಲ್ಲಿ ನಮ್ಮ ರಾಜ್ಯದ ಡಿಜಿಪಿ ಪಕ್ಕದ ರಾಜ್ಯಗಳ ಪೋಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿ ಮಾದಕ ವಸ್ತುಗಳ ಸಾಗಾಣಿಕೆಯನ್ನು ಜಂಟಿ ಕಾರ್ಯಾಕರಣೆ ಮಾಡಿ ತಡೆಗಟ್ಟುವಂತೆ ಸೂಚಿಸಿದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ ಕೇಸ್​​: 12 ಮಂದಿ ಮೇಲೆ ಎಫ್​​ಐಆರ್​​; ಯಾರ‍್ಯಾರು ಗೊತ್ತಾ?

ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮಾದಕ ವಸ್ತುಗಳಿಂದ ಸಿಕ್ಕಿದವರನ್ನು ಪಿಐಟಿ, ಎನ್​​ಡಿಪಿಎಸ್ ಹಾಗೂ ಗುಂಡಾ ಕಾಯ್ದೆ ಕಾನೂನಿನಲ್ಲಿ ಅವರ ಮೇಲೆ ಮೊಕದ್ದಮೆ ಹೂಡುವುದು. ಮಾದಕ ವಸ್ತುಗಳ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸಲು ಕಾನೂನು ಪ್ರಕಾರದ ಜೊತೆಗೆ ಸಂಪೂರ್ಣ ಸಹಕರಿಸುವುದು ಕುರಿತು ಗೃಹ ಸಚಿವರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಚರ್ಚಿಸಿದರು.
Published by: Ganesh Nachikethu
First published: September 6, 2020, 7:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading