HOME » NEWS » State » STATE HOME MINISTER BASAVARAJ BOMMAI HELD A MEETING AT HAVERI AND RESTRICTION TO MEDIA LG

ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆ: ಮಾಧ್ಯಮಗಳಿಗೆ ನಿರ್ಬಂಧ, ಕಾರ್ಯಕರ್ತರಿಗೆ ಅವಕಾಶ..!

ಲಾಕ್ ಡೌನ್ ಬಗ್ಗೆ ಈಗಾಗಲೆ ಸಿಎಂ ಹೇಳಿದ್ದಾರೆ. ಇದು ಲಾಕ್ ಡೌನ್ ಅಲ್ಲ. ಕೆಲವು ನಿರ್ಬಂಧಗಳ ಜೊತೆಗೆ ನೈಟ್ ಕರ್ಪ್ಯೂ ಇರುವಂತಹುದು. ಕಳೆದ‌ ಮೂರು ದಿನಗಳಿಂದ ಯಾವ ನಿರ್ಬಂಧಗಳಿವೆಯೋ ಅವುಗಳು ಎರಡು ವಾರಕ್ಕಿವೆ. ಎರಡು ವಾರ ಮುಗಿಯೋ‌ ಪೂರ್ವದಲ್ಲಿ ರಾಜ್ಯಮಟ್ಟದ ಕೋವಿಡ್ ತಜ್ಞರ  ಸಮಿತಿ ಹಾಗೂ ಟಾಸ್ಕ್ ಫೋರ್ಸ್ ನವರು ಅವಲೋಕನ ಮಾಡ್ತಾರೆ ಎಂದರು.

news18-kannada
Updated:May 1, 2021, 8:53 AM IST
ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆ: ಮಾಧ್ಯಮಗಳಿಗೆ ನಿರ್ಬಂಧ, ಕಾರ್ಯಕರ್ತರಿಗೆ ಅವಕಾಶ..!
ಸಭೆ
  • Share this:
ಹಾವೇರಿ(ಮೇ 01): ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಕೊರೊನಾ ಎರಡನೇ ಅಲೆ ಹರಡುವಿಕೆ ಆರಂಭವಾದ ಬಳಿಕ, ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ, ಕೋವಿಡ್ ಲಸಿಕೆ ವಿತರಣೆ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್ ಗಳ ಅಗತ್ಯತೆ, ಆಕ್ಸಿಜಿನ್ ಲಭ್ಯತೆ ಸೇರಿದಂತೆ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತಾಗಿ ಸಮಗ್ರ ಮಾಹಿತಿ ಪಡೆದರು. ಜಿಲ್ಲಾ ಪಂಚಾಯತ್ ಭವನದ ಸಭಾಂಗಣದಲ್ಲಿ ನಡೆದ ಸಭೆಗೆ ಮಾಧ್ಯಮದವರನ್ನ ಆಹ್ವಾನಿಸಿದ್ದರೂ ಪ್ರತಿನಿಧಿಗಳನ್ನ ಹೊರಗಿಟ್ಟು ಸಭೆ ನಡೆಸಿದರು. ಆದರೆ, ಅದೇ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮುಕ್ತ ಅವಕಾಶ ನೀಡಲಾಗಿತ್ತು. 

ಕಾರ್ಯಕರ್ತರನ್ನ ಒಳಗೆ ಬಿಟ್ಟು ಶಿಷ್ಟಾಚಾರ ಮರೆತರಾ ಸಚಿವರು ಅಧಿಕಾರಿಗಳು?

ಸಭೆಯ ಕುರಿತು ವರದಿಗಾಗಿ ಸಭಾಂಗಣಕ್ಕೆ ಹೊರಟಿದ್ದ ಮಾಧ್ಯಮ ಪ್ರತಿನಿಧಿಗಳನ್ನ ಸಿಪಿಐ ನಾಗಮ್ಮ ಬಾಗಿಲಲ್ಲೇ ತಡೆದರು. ಆದ್ರೆ, ಅಧಿಕಾರಿಗಳ ಜೊತೆಗಿನ ಸಚಿವರ ಸಭೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದು ಕಂಡುಬಂತು. ಬಿಜೆಪಿ ಕಾರ್ಯಕರ್ತರಾದ ಸುರೇಶ ಹೊಸಮನಿ, ನಾಗರಾಜ ಬಸೇಗಣ್ಣಿ ಸಭೆ ನಡೆದ ವೇಳೆ ಸಭಾಂಗಣದೊಳಗೆ ಕುಳಿತಿದ್ದರು. ಮಾಧ್ಯಮಗಳನ್ನ ಹೊರಗಿಟ್ಟು, ಕಾರ್ಯಕರ್ತರನ್ನ ಒಳಗೆ ಬಿಟ್ಟುಕೊಂಡು ಸಭೆ ನಡೆಸಿದ ಸಚಿವರು ಶಿಷ್ಟಾಚಾರ ಮರೆತಂತಿತ್ತು. ಬಳಿಕ ಮದ್ಯಪ್ರವೇಶಿಸಿದ ಜಿಲ್ಲಾ ವಾರ್ತಾಧಿಕಾರಿ ಪತ್ರಕರ್ತರಿಗೆ ಸುದ್ದಿಗೋಷ್ಠಿಗೆ ಮಾತ್ರ ಆಹ್ವಾನ ನೀಡಿರೋದಾಗಿ ಮಾಹಿತಿ ನೀಡಿದ್ದಾರೆ ಎಂದರು.

ಕಾಫಿನಾಡನ್ನು ಸಂಪೂರ್ಣ ನಿರ್ಲಕ್ಷಿಸಿದ ಸರ್ಕಾರ; ಚಿಕ್ಕಮಗಳೂರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ 5 ತಿಂಗಳಾಯ್ತು..!

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಲಾಕ್ ಡೌನ್ ಬಗ್ಗೆ ಈಗಾಗಲೆ ಸಿಎಂ ಹೇಳಿದ್ದಾರೆ. ಇದು ಲಾಕ್ ಡೌನ್ ಅಲ್ಲ. ಕೆಲವು ನಿರ್ಬಂಧಗಳ ಜೊತೆಗೆ ನೈಟ್ ಕರ್ಪ್ಯೂ ಇರುವಂತಹುದು. ಕಳೆದ‌ ಮೂರು ದಿನಗಳಿಂದ ಯಾವ ನಿರ್ಬಂಧಗಳಿವೆಯೋ ಅವುಗಳು ಎರಡು ವಾರಕ್ಕಿವೆ. ಎರಡು ವಾರ ಮುಗಿಯೋ‌ ಪೂರ್ವದಲ್ಲಿ ರಾಜ್ಯಮಟ್ಟದ ಕೋವಿಡ್ ತಜ್ಞರ  ಸಮಿತಿ ಹಾಗೂ ಟಾಸ್ಕ್ ಫೋರ್ಸ್ ನವರು ಅವಲೋಕನ ಮಾಡ್ತಾರೆ. ಅವರು ಕಡಿಮೆ ಆಗಿದೆಯೋ ಇಲ್ಲೋ ಎಂಬುದನ್ನ ಅವಲೋಕನ ಮಾಡ್ತಾರೆ. ಅದರ ಆಧಾರದ ಮೇಲೆ ನಿರ್ಬಂಧಗಳ ವಿಸ್ತರಣೆ ಬಗ್ಗೆ ನಿರ್ಧಾರ. ಟಾಸ್ಕ್ ಫೋರ್ಸ್ ಹಾಗೂ ತಜ್ಞರ‌ ಸಮಿತಿ ನಿರ್ಧಾರ ಮಾಡುತ್ತದೆ. ಅಲ್ಲಿಯವರೆಗೂ ಈಗಿರುವ ನಿರ್ಬಂಧನೆಗಳು ಇರುತ್ತವೆ ಎಂದು ಹೇಳಿದ್ದಾರೆ.

ಗೃಹ ಸಚಿವರ ಕಾರಿನ ಮೇಲೆ ಹಾರಾಡಿದ ಹರಿದ ಧ್ವಜ..!

ಗೃಹ ಸಚಿವ ಬೊಮ್ಮಾಯಿ ಇಂದು ಹಾವೇರಿಗೆ ಭೇಟಿ ನೀಡಿದ ವೇಳೆ ಅವರು ಬಳಸುವ ಕಾರಿನ ಮೇಲೆ ಹರಿದ ಧ್ವಜವನ್ನ ಹಾಕಲಾಗಿತ್ತು. ಚಾಲಕನಿಗೆ ಧ್ವಜ ಹರಿದಿರುವ ಬಗ್ಗೆ ಗೊತ್ತಿದ್ದರೂ, ಅದನ್ನು ಬದಲಾಯಿಸುವುದನ್ನ ಬಿಟ್ಟು ಬೇಜವಾಬ್ದಾರಿತನದಿಂದ ಹರಿದ ಧ್ವಜವನ್ನೇ ಕಾರಿನ ಮೇಲೆ ಹಾಕಿಕೊಂಡು ತಿರುಗಾಡಿ ಅಗೌರವ ತೋರಿದ್ದಾನೆ. ಇದನ್ನು ಗಮನಿಸಿದ ಮಾಧ್ಯಮದವರು ಚಿತ್ರಿಕರಿಸಲು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರ ಕಾರು ಚಾಲಕ ಹರಿದ ಧ್ವಜವನ್ನು ಬದಲಾಯಿಸಿ ಬೇರೆ ಧ್ವಜವನ್ನ ಹಾಕಿದ್ದಾನೆ.
Youtube Video

ಸಾಮಾಜಿಕ ಅಂತರ ಮರೆತ ಸಚಿವರು ಜಿಲ್ಲಾಧಿಕಾರಿಗಳು..!

ಸಭೆ ಮುಗಿಸಿ ತೆರಳುತ್ತಿದ್ದ ಸಚಿವ ಬಸವರಾಜ ಬೊಮ್ಮಾಯಿಯವರ ಕಾರಿನ ಬಳಿ ಅಧಿಕಾರಿಗಳು ಹಾಗೂ ಕೆಲವು ಕಾರ್ಯಕರ್ತರು ಸಚಿವರೊಂದಿಗೆ ಮಾತನಾಡಲು ಮುಗಿಬಿದ್ದರು. ಈ ವೇಳೆ ಸಾಮಾಜಿಕ  ಅಂತರವನ್ನ ಸ್ವತಃ ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಮರೆತಿದ್ದರು.

  • ವರದಿ: ಮಂಜುನಾಥ ತಳವಾರ

Published by: Latha CG
First published: May 1, 2021, 8:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories