13 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

13 ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಇಬ್ಬರು ಐಎಎಸ್​ ಅಧಿಕಾರಿಗಳನ್ನು ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಿದೆ.

news18-kannada
Updated:July 28, 2020, 6:57 PM IST
13 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ವಿಧಾನಸೌಧ
  • Share this:
ಬೆಂಗಳೂರು; ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ 13 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಇವರಲ್ಲಿ ಒಬ್ಬರು ಹಣಕಾಸು ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತರಾಗಿ ನೇಮಕವಾದರೆ, ಮತ್ತೊಬ್ಬರು ಯೋಜನಾ ವಿಭಾಗದ ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಅಧಿಕಾರಿ ಹೆಸರು ಮತ್ತು ವರ್ಗಾವಣೆಯಾದ ಇಲಾಖೆ


  • ರಾಜಕುಮಾರ್ ಕತ್ರಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ

  • ಡಾ.ಎನ್. ನಾಗಾಂಭಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ

  • ಮನೋಜ್ ಜೈನ್- ಬಿಬಿಎಂಪಿ ವಿಶೇಷ ಆಯುಕ್ತರು

  • ರಾಜೇಂದ್ರ ಜೋಳನ್- ಬಿಬಿಎಂಪಿ ವಿಶೇಷ ಆಯುಕ್ತರು
  • ಆರ್. ವಿನೋತ್ ಪ್ರಿಯಾ - ನಿರ್ದೇಶಕರು, ಎಂಎಸ್​ಎಂಇ

  • ಡಾ.ಬಿ.ಆರ್.ಮಮತಾ- ಹೆಚ್ಚುವರಿ ನಿರ್ದೇಶಕರು, ಸಕಾಲ

  • ಸಿಂಧೂ ಬಿ. ರೂಪೇಶ್- ನಿರ್ದೇಶಕ, ಇಡಿಸಿಸಿ ಮತ್ತು ಡಿಪಿಎಆರ್

  • ಪೊಮ್ಮಲ ಸುನೀಲ್ ಕುಮಾರ್- ವಿಜಯಪುರ ಡಿಸಿ

  • ಡಾ.ರಾಜೇಂದ್ರ ಕೆ.ವಿ. - ದಕ್ಷಿಣ ಕನ್ನಡ ಡಿಸಿ

  • ದರ್ಶನ್ ಎಚ್​.ಪಿ.- ಬೆಳಗಾವಿ ಜಿಪಂ ಸಿಇಒ

  • ಡಾ.ಎಚ್.ಎನ್.ಗೋಪಾಲಕೃಷ್ಣ- ನಿರ್ದೇಶಕರು, ಮೈಸೂರು ಶುಗರ್ಸ್ ಕಂಪನಿ ಲಿ.

  • ಕವಿತಾ ಎಸ್. ಮಣ್ಣೀಕೆರಿ- ಚಿತ್ರದುರ್ಗ- ಡಿಸಿ

  • ಪಾಟೀಲ ಯಲಗೌಡ ಶಿವನಗೌಡ - ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ, ಮೈಸೂರು


ಸರ್ಕಾರ ಹೊರಡಿಸಿರುವ ಆದೇಶ ಪ್ರತಿ.


ಸರ್ಕಾರ ಹೊರಡಿಸಿರುವ ಆದೇಶ ಪ್ರತಿ.


ಇದನ್ನು ಓದಿ: ಕಲಬುರ್ಗಿ ಶಾಸಕರಿಗೆ ಬಿಸಿ ತುಪ್ಪವಾದ ನಿಗಮ, ಮಂಡಳಿ ನೇಮಕ; ಶಾಸಕರಾದ ರೇವೂರ, ತೇಲ್ಕೂರ ನಡೆ ನಿಗೂಢ

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಇಬ್ಬರು ಐಎಎಸ್​ ಅಧಿಕಾರಿಗಳನ್ನು ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಿದೆ.
Published by: HR Ramesh
First published: July 28, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading