News18 India World Cup 2019

ಜಿಂದಾಲ್​ಗೆ ಭೂಮಿ ನೀಡುವ ವಿಚಾರಕ್ಕೆ ಭಾರೀ ವಿರೋಧ; ಪ್ರಸ್ತಾವನೆ ಕೈ ಬಿಟ್ಟ ಸರ್ಕಾರ?

 ಇಂದು ಸಂಜೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸರ್ಕಾರ ಜಿಂದಾಲ್ ಗೆ ಭೂಮಿ ನೀಡುವ ಪ್ರಸ್ತಾವನೆಯನ್ನು ಕೈ ಬಿಡಲಿದೆ. 

Latha CG | news18
Updated:June 14, 2019, 11:51 AM IST
ಜಿಂದಾಲ್​ಗೆ ಭೂಮಿ ನೀಡುವ ವಿಚಾರಕ್ಕೆ ಭಾರೀ ವಿರೋಧ; ಪ್ರಸ್ತಾವನೆ ಕೈ ಬಿಟ್ಟ ಸರ್ಕಾರ?
ಎಚ್​ಡಿ. ಕುಮಾರಸ್ವಾಮಿ
Latha CG | news18
Updated: June 14, 2019, 11:51 AM IST
ಬೆಂಗಳೂರು,(ಜೂ.14): ಜಿಂದಾಲ್​ಗೆ ಸರ್ಕಾರಿ ಭೂಮಿ ಪರಭಾರೆ ನೀಡುವ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ವಿರೋಧಗಳು ವ್ಯಕ್ತವಾಗುತ್ತಿವೆ. ಸರ್ಕಾರ ಜಿಂದಾಲ್​ಗೆ ಭೂಮಿ ನೀಡುವುದನ್ನು ವಿರೋಧಿಸಿ ಇಂದಿನಿಂದ ಎರಡು ದಿನ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ, ಜಿಂದಾಲ್​​ಗೆ ಸರ್ಕಾರಿ ಭೂಮಿ ಪರಭಾರೆ ನೀಡುವ ಪ್ರಸ್ತಾವನೆಯನ್ನೇ ರಾಜ್ಯ ಸರ್ಕಾರ ಕೈಬಿಡಲಿದೆ ಎನ್ನಲಾಗಿದೆ. ಕಾಂಗ್ರೆಸ್​ ಹೈಕಮಾಂಡ್​ ಸೂಚನೆಯಂತೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಜಿಂದಾಲ್​ಗೆ 3667 ಎಕರೆ ಭೂಮಿ ಪರಭಾರೆಯಿಲ್ಲ.

ಜಿಂದಾಲ್​ಗೆ ಭೂಮಿ ನೀಡಲು‌ ನೂರಾರು ಕೋಟಿ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ನ್ಯೂಸ್18 ಕನ್ನಡ ವರದಿ ಮಾಡಿತ್ತು. ಈ ವಿಚಾರಕ್ಕೆ ಹೆಚ್​.ಕೆ.ಪಾಟೀಲ್​ ಸೇರಿ ಇನ್ನಿತರ ಹಿರಿಯರ ವಿರೋಧವಿತ್ತು. ಸರ್ಕಾರದ ನಿರ್ಧಾರ ವಿರೋಧಿಸಿ ಬಿಜೆಪಿ ಹೋರಾಟ ಕೂಡ ನಡೆಸಿತ್ತು. ಇದೀಗ ಹೈಕಮಾಂಡ್​ ಸೂಚನೆಯಂತೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಹಿಂದಕ್ಕೆ ತೆಗೆದುಕೊಂಡಿದೆ.

ಇದನ್ನೂ ಓದಿ:ಜಿಂದಾಲ್​ ಭೂ ವಿವಾದ: ಇಂದಿನಿಂದ ಎರಡು ದಿನ ಬಿಜೆಪಿ ಶಾಸಕ, ಸಂಸದರಿಂದ ಅಹೋರಾತ್ರಿ ಧರಣಿ!

ಜಿಂದಾಲ್ ಗೆ ಕಳೆದ ಮೇ 27 ರ ಸಂಪುಟ ಸಭೆಯಲ್ಲಿ ಭೂಮಿ ನೀಡುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಜಿಂದಾಲ್​ಗೆ ಭೂಮಿ ನೀಡಲು ಇಡೀ ಸಚಿವ ಸಂಪುಟ ಸಭೆ ವಿರೋಧಿಸಿತ್ತು. ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್, ಸಿಎಂ ಕುಮಾರಸ್ವಾಮಿ ಹೊರತುಪಡಿಸಿ ಎಲ್ಲಾ ಸಚಿವರು ವಿರೋಧಿಸಿದ್ದರು. ಸುಮಾರು ಎರಡು ಗಂಟೆ ಕಾಲ ವಾದ ವಿವಾದ ನಡೆದಿತ್ತು. ಆದರೂ ಕೂಡ ಜಿಂದಾಲ್ ಗೆ ಕೋಟ್ಯಂತರ ಬೆಲೆಬಾಳುವ ಜಮೀನು ನೀಡಲು ನಿರ್ಧರಿಸಲಾಗಿತ್ತು. ಅಂದೇ ಜಿಂದಾಲ್‌ ಕಿಕ್‌ಬ್ಯಾಕ್ ಬಗ್ಗೆ ನ್ಯೂಸ್ 18 ಕನ್ನಡ ಮೊದಲು ಸುಳಿವು ನೀಡಿತ್ತು. ಈ ಬೆನ್ನಲ್ಲೇ ಕೈ ಹಿರಿಯ ಶಾಸಕ‌ ಹೆಚ್.ಕೆ ಪಾಟೀಲ್ ಭೂಮಿ ನೀಡುವುದನ್ನು ವಿರೋಧಿಸಿ ಸಿಎಂಗೆ ಪತ್ರ ಬರೆದರು. ಬಳಿಕ‌ ಬಿಜೆಪಿ ಕೂಡ ವಿರೋಧಿಸಿತ್ತು. ಇಂದು ಬಿಜೆಪಿಯಿಂದ ಜಿಂದಾಲ್ ಗೆ ಭೂಮಿ ನೀಡುವುದನ್ನು ವಿರೋಧಿಸಿ ಅಹೋರಾತ್ರಿ ಪ್ರತಿಭಟನೆ ನಡೆಯಲಿದೆ.

ಜಿಂದಾಲ್ ಗೆ ಭೂಮಿ ನೀಡುವ ಬಗ್ಗೆ ಮರುಪರಿಶೀಲನೆ ನಡೆಸುತ್ತೇನೆ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದರು. ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಆತಂಕದಿಂದ ಸಿಎಂ ಮರುಪರಿಶೀಲನೆ ಮಾಡುವುದಾಗಿ ಹೇಳಿದ್ದರು. ಇಂದು ಸಂಜೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸರ್ಕಾರ ಜಿಂದಾಲ್ ಗೆ ಭೂಮಿ ನೀಡುವ ಪ್ರಸ್ತಾವನೆಯನ್ನು ಕೈ ಬಿಡಲಿದೆ. ಪರೋಕ್ಷವಾಗಿ ಕಾನೂನು ಹೋರಾಟ ನಡೆಸಿ ಬೇಕಿದ್ದರೆ ಭೂಮಿ ಪಡೆಯಿರಿ ಎಂದು ಜಿಂದಾಲ್ ಕಂಪನಿಗೆ ಈಗಾಗಲೇ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್​​ ಸುಳಿವು ನೀಡಿದ್ದಾರೆ.

 
Loading...

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...