HOME » NEWS » State » STATE GOVERNMENT TRANSFER OF 17 IAS OFFICERS INCLUDING BBMP COMMISSIONER MANJUNATH PRASAD MAK

IAS Officers Transfer: ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೇರಿದಂತೆ 17 ಐಎಎಸ್​ ಅಧಿಕಾರಿಗಳ ವರ್ಗಾವಣೆ

ನಿರ್ಗಮಿತ ಅಧಿಕಾರಿ ಮಂಜುನಾಥ್​ ಪ್ರಸಾದ್​ ಸ್ಥಾನದಲ್ಲಿ ಮತ್ತೋರ್ವ ಹಿರಿಯ ಐಎಎಸ್​ ಅಧಿಕಾರಿ ಗೌರವ್​ ಗುಪ್ತಾ ಅವರನ್ನು ಬಿಬಿಎಂಪಿಗೆ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

news18-kannada
Updated:March 31, 2021, 7:32 PM IST
IAS Officers Transfer: ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೇರಿದಂತೆ 17 ಐಎಎಸ್​ ಅಧಿಕಾರಿಗಳ ವರ್ಗಾವಣೆ
ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್.
  • Share this:
ಬೆಂಗಳೂರು (ಮಾರ್ಚ್​ 31); ರಾಜ್ಯ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ಆಡಳಿತಕ್ಕೆ ಮಾಸ್ಟರ್​ ಸ್ಟ್ರೋಕ್ ನೀಡಿರುವ ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ 17 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ. ಮಂಜುನಾಥ್​ ಪ್ರಸಾದ್​ ಆಯುಕ್ತರಾದ ನಂತರ ಬಿಬಿಎಂಪಿಯಲ್ಲಿ ಗಮನಾರ್ಹವಾದ ಅನೇಕ ಕೆಲಸಗಳು ನಡೆದಿದ್ದವು ಎನ್ನಲಾಗಿತ್ತು. ಅವರ ವಿರುದ್ಧ ಅಷ್ಟೇ ಆರೋಪಗಳೂ ಕೇಳಿ ಬಂದಿದ್ದವು. ಆದರೆ, ಇಂದು ದಿಢೀರ್ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಅವರನ್ನು ಬಿಬಿಎಂಪಿಯಿಂದ ಎತ್ತಂಗಡಿ ಮಾಡಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

ನಿರ್ಗಮಿತ ಅಧಿಕಾರಿ ಮಂಜುನಾಥ್​ ಪ್ರಸಾದ್​ ಸ್ಥಾನದಲ್ಲಿ ಮತ್ತೋರ್ವ ಹಿರಿಯ ಐಎಎಸ್​ ಅಧಿಕಾರಿ ಗೌರವ್​ ಗುಪ್ತಾ ಅವರನ್ನು ಬಿಬಿಎಂಪಿಗೆ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಇದಲ್ಲದೆ, ಹೆಚ್. ಎನ್ ಗೋಪಾಲಕೃಷ್ಣ ಅವರನ್ನು ಐಟಿಬಿಟಿ ನಿರ್ಧೇಶಕರನ್ನಾಗಿ, ಎಸ್. ಹೊನ್ನಾಂಬ ಅವರನ್ನು ಗಣಿ ಮತ್ತು ಭೂ ವಿಜ್ಞಾನ ನಿರ್ದೇಶಕಿಯನ್ನಾಗಿ, ಸಿಂಧು ಬಿ ರೂಪೇಶ್ ಅವರನ್ನು ಪ್ರವಾಸೋದ್ಯಮ‌‌ ಇಲಾಖೆ ನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿದೆ.
Published by: MAshok Kumar
First published: March 31, 2021, 7:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories