ಮಾಜಿ ಪ್ರಧಾನಿ ದೇವೇಗೌಡ ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಮುಂದಾದ ರಾಜ್ಯ ಸರ್ಕಾರ

ಯಾವುದೇ ಸರ್ಕಾರಗಳು ಕಾಲೇಜು ಸೇರಿದಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಿಸಬೇಕು. ಕಾಲೇಜುಗಳಿಗೂ ಮೂಲಭೂತ ಸೌಕರ್ಯ ಒದಗಿಸಬೇಕಾಗಿದ್ದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಮೂಲಭೂತ ಸೌಕರ್ಯ ಒದಗಿಸುವುದನ್ನು ಬಿಟ್ಟು ಮೂಲಭೂತ ಸೌಕರ್ಯಗಳಿಲ್ಲ ಎಂಬ ನೆಪ ಹೇಳಿ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ

ಮಾಜಿ ಪ್ರಧಾನಿ ದೇವೇಗೌಡರು ಸಿವಿಲ್​ ಡಿಪ್ಲೋಮಾ ಮಾಡಿದ ಕಾಲೇಜು

ಮಾಜಿ ಪ್ರಧಾನಿ ದೇವೇಗೌಡರು ಸಿವಿಲ್​ ಡಿಪ್ಲೋಮಾ ಮಾಡಿದ ಕಾಲೇಜು

  • Share this:
ಹಾಸನ: ಅದು ಮಾಜಿ ಪ್ರಧಾನಿ ವ್ಯಾಸಂಗ ಮಾಡಿದ ಕಾಲೇಜು ಅದಕ್ಕೆ ತನ್ನದೇ ಆದ ಇತಿಹಾಸವಿದೆ. ಆದ್ರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಸಲ್ಲದ ಕಾರಣ ನೀಡಿ ಕಾಲೇಜು ಮುಚ್ಚಲು ಮುಂದಾಗಿದೆ. ದ್ವೇಷ ರಾಜಕಾರಣ ಮಾಡೊಲ್ಲಾ ಅಂತಾ ಹೇಳಿದ ಸಿಎಂ ಈಗ ದ್ವೇಷ ರಾಜಕಾರಣ ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಪ್ರಧಾನಿ ವ್ಯಾಸಂಗ ಮಾಡಿದ ಕಾಲೇಜು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆ ಎಂದಾಕ್ಷಣ ರಾಜಕೀಯವಾಗಿ ನಮಗೆ ನೆನಪಾಗೋದು ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡ. ಆದ್ರೆ ಈಗ ದೇವೇಗೌಡರು ಡಿಪ್ಲೋಮಾ ವ್ಯಾಸಂಗ ಮಾಡಿದ  ಕಾಲೇಜು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಎಲ್ಲೆಡೆ  ಆಕ್ರೋಶ ವ್ಯಕ್ತವಾಗಿದೆ. ಹಾಸನ ನಗರದ ಡೈರಿ ವೃತ್ತದಲ್ಲಿರುವ ಸುಮಾರು 50 ಎಕರೆ ಪ್ರದೇಶದಲ್ಲಿ ಈ ಕಾಲೇಜು ನಿರ್ಮಿಸಲಾಗಿದೆ.

1948 ರಲ್ಲಿ ಈ ಕಾಲೇಜು ನಿರ್ಮಾಣ ಮಾಡಲಾಗಿದೆ. ಸುತ್ತಮುತ್ತಲ ನಾಲ್ಕೈದು ಜಿಲ್ಲೆಗಳಿಗೆ ಇದೊಂದೇ  ಡಿಪ್ಲೋಮಾ ಕಾಲೇಜು ಇತ್ತು. ಈ ಹಿಂದೆ ಕಾಲೇಜು ಪ್ರಾರಂಭವಾದಾಗ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಈ ಮೂರು ವಿಭಾಗಗಳಿದ್ದವು. ಹೆಚ್,ಡಿ,ದೇವೇಗೌಡರು ಸಿವಿಲ್ ವಿಭಾಗದಲ್ಲಿ ಮೂರು ವರ್ಷಗಳ ಕಾಲ ವ್ಯಾಸಂಗ ಮಾಡಿದ್ದರು.

ಎಚ್​ಡಿ ದೇವೇಗೌಡರು 1951 ರಿಂದ 1953 ರವರೆಗೆ ಮೂರು ವರ್ಷಗಳ ಕಾಲ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾರೆ. ಅಂದೇ ಕಾಲೇಜು ಪ್ರಾರಂಭವಾದಾಗ ಮೂರು ವಿಭಾಗಗಳಿಂದ ಸುಮಾರು 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಡಿಪ್ಲೋಮಾ ಕಾಲೇಜು ಸುಮಾರು 50 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಮೂಲಭೂತ ಸೌಕರ್ಯ ಇಲ್ಲಾ ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಸರ್ಕಾರ ಇತಿಹಾಸವುಳ್ಳ ಡಿಪ್ಲೋಮಾ ಕಾಲೇಜು ಮುಚ್ಚಲು ಮುಂದಾಗಿದೆ. ಪ್ರಸ್ತುತ ಸಾವಿರಾರು ವಿದ್ಯಾರ್ಥಿಗಳು ಈ ಡಿಪ್ಲೋಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಬಗ್ಗೆ ಖುದ್ದಾಗಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಚಿವ ರೇವಣ್ಣ ಡಿಪ್ಲೋಮಾ ಕಾಲೇಜು ಮುಚ್ಚದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮಾಜಿ ಪ್ರಧಾನಿಗಳು ಪತ್ರ ಬರೆದರೂ ಕೂಡ ರಾಜ್ಯ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ: 

ಈ ಬಗ್ಗೆ ಬೀದಿಗಿಳಿದು ಹೋರಾಟ ಮಾಡಲು ಜೆಡಿಎಸ್ ತೀರ್ಮಾನಿಸಿದೆ. ಆದರೆ ಈ ಬಗ್ಗೆ ಬಿಜೆಪಿ ನಾಯಕರು ಯಾರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಸನ ಬಿಜೆಪಿ ಶಾಸಕರೂ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಯಾವುದೇ ಸರ್ಕಾರಗಳು ಕಾಲೇಜು ಸೇರಿದಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಿಸಬೇಕು. ಕಾಲೇಜುಗಳಿಗೂ ಮೂಲಭೂತ ಸೌಕರ್ಯ ಒದಗಿಸಬೇಕಾಗಿದ್ದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಮೂಲಭೂತ ಸೌಕರ್ಯ ಒದಗಿಸುವುದನ್ನು ಬಿಟ್ಟು ಮೂಲಭೂತ ಸೌಕರ್ಯಗಳಿಲ್ಲ ಎಂಬ ನೆಪ ಹೇಳಿ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ.
First published: